ಮತ್ತೆ ಜೈಲು ಸೇರುವ ಭಯದಲ್ಲಿ ತಲೆ ಮರಿಸಿಕೊಂಡಿರುವ ಜನಾರ್ಧನ ರೆಡ್ಡಿ ; ಬೆಂಗಳೂರು ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ 

ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಸಿಕ್ಕಿಬಿದ್ದಿರುವ ಜನಾರ್ಧನ ರೆಡ್ಡಿ ಮತ್ತೆ ಜೈಲಿನಲ್ಲಿ ಮುದ್ದೆ ಮುರಿಯುವ ಸಂದರ್ಭಎದುರಾಗಿದೆ. 2011-12 ರಲ್ಲಿ  ಭೂಮಿ ತಾಯಿಯನ್ನು ಬಗೆದು ತಿಂದಿದ್ದ ನರ ರಾಕ್ಷಸ, ಅಕ್ರಮ ಗಣಿಗಾರಿಕೆಯಿಂದ ಮೂರೂ ವರ್ಷ ಜೈಲು ಶಿಕ್ಷೆ ಅನುಭವಿಸಿ 2015ರಲ್ಲಿ ಬಿಡುಗಡೆ ಆಗಿದ್ದರು. ಆದರೆ ನಾಯಿ ಬಾಲ ಎಂದಿಗೂ ಡೊಂಕು ಎಂಬಂತೇ ಜನಾರ್ಧನ ರೆಡ್ಡಿ ಅವರು ಜೈಲು ಶಿಕ್ಷೆ ಅನುಭವಿಸಿ ಬಂದರು ಬುದ್ದಿ ಕಲಿತಿಲ್ಲ.
ಈಗ   ತಮ್ಮಲ್ಲಿರುವ ರದ್ದಾದ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಾವಣೆ ಮಾಡಲು ಡೀಲ್ ಮಾಡಿಕೊಂಡಿರುವ ಆರೋಪದ ಮೇಲೆ ಮತ್ತೆ ಸಿಕ್ಕಿಬಿದಿದ್ದಾರೆ. ಹಳೆ ನೋಟುಗಳಿಗೆ ಹೊಸ ನೋಟುಗಳನ್ನು ನೀಡಿದರೆ ಅವರಿಗೆ 57 ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ, ಬಳಿಕ ಹಣವನ್ನೂ ಪಡೆದಿದ್ದರು ನಂತರದಲ್ಲಿ ಚಿನ್ನ ಕೊಡದೆ ನಕಲಿ ರಶೀದಿಯೊಂದನ್ನು ತಯಾರಿಸಿ ಕಣ್ಣಿಗೆ ಮಣ್ಣೆರೆಚುವ ನಾಟಕವಾಡಿದ್ದರು. ಇದರ ವಿರುದ್ಧ ಇದೀಗ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ.
ಜನಾರ್ದನ ರೆಡ್ಡಿ ಪಿಎ ಅಲಿಖಾನ್ ಮೂಲಕ 57 ಕೆಜಿ ಚಿನ್ನದ ಗಟ್ಟಿಯನ್ನು ವರ್ಗಾವಣೆ ಮಾಡಿದ್ದರು. ಎನೋಬಲ್ ಕಂಪನಿ ಮೂಲಕ ವರ್ಗಾವಣೆ ಮಾಡಿದ್ದಾರೆ ಹಾಗೂ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ನೋಟು ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗ ಸಿಸಿಬಿ ಬಲೆಗೆ ಸಿಕ್ಕಿಬೀಳುವ ಭೀತಿಯಿಂದ ಜನಾರ್ಧನ ರೆಡ್ಡಿ ಈಗ ತಲೆ ಮರೆಸಿಕೊಂಡಿದ್ದಾರೆ.

Leave a Reply