ಆ ಕರಾಳ ರಾತ್ರಿ…!

ಅಂದು ನವೆಂಬರ್ 8 ,2016. ದೇಶದ ಜನತೆ ಸುಖವೊ ದುಃಖವೋ ಎರಡು ಹೊತ್ತು ಊಟ ಮಾಡಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದರು. ಆದರೆ ಅಂದು ಮಧ್ಯರಾತ್ರಿ ನಡೆದ ಒಂದು ದುರ್ಘಟನೆ ದೇಶದ ಜನರನ್ನು ಬೆಚ್ಚಿ ಬೀಳಿಸಿತ್ತು. ಬಡವರು ಕಂಗಾಲಾದರು. ದೇಶದ ಹಿರಿಯ ನಾಯಕರು ಗೊಂದಲಗೊಂಡರು. ಜನರಿಗೆ ನಮ್ಮ ದೇಶವನ್ನು ಎಂತಹ ಎಡಬಿಡಂಗಿ ಪಕ್ಷದ ಕೈಯಲ್ಲಿಟ್ಟಿದ್ದೇವೆ  ಎಂದು ಅಂದಿನವರೆಗೂ ಜ್ಞಾನೋದಯವಾಗಿರಲಿಲ್ಲ. ಹೌದು, ಇಲ್ಲಿ ದೇಶದ ಜನತೆಗೆ ಇಂದಿಗೂ ದುಸ್ವಪ್ನದಂತೆ ಕಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾಡಿದ ಎಡವಟ್ಟಿನ ಕೆಲಸ, ನೋಟು ರದ್ದು ಅಮಾನ್ಯೀಕರಣ ಮಾಡಿದ ಘಟನೆಯ ಬಗ್ಗೆ.

ಇಂತಹ ಒಂದು ಮಹೋತ್ತರ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ, ಇದು ಬಡವರ ಮೇಲೆ ಬೀರುವ ದುಷ್ಪರಿಣಾಮಗಳ ಯೋಚಿಸ ಬೇಕೆಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಮೂರ್ಖತನದ ಪರಮಾವಧಿಯನ್ನು ‘ ದೇಶದ ದಿಕ್ಸೂಚಿ ‘ ಎಂದು ಭಕ್ತರು ನಂಬಿರುವ ಮೋದಿ ಪ್ರದರ್ಶಿಸಿದರು. ಇದನ್ನು ಸರಳೀಕರಿಸಿ ಹೇಳುವುದಾದರೆ ಜನಸಾಮಾನ್ಯರ ಆರ್ಥಿಕ ಚೈತನ್ಯವನ್ನು ಕುಗ್ಗಿಸಿ, ಬಂಡವಾಳಿಗರನ್ನು ಸಬಲೀಕರಿಸುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
‘ ನೈನ್ ಇಲೆವೆನ್ ‘, ‘ಟ್ವೆಂಟಿ ಸಿಕ್ಸ್ ಇಲೆವೆನ್ ‘ ಎಂದು ಚರಿತ್ರೆಯ ಈಚಿನ ಅತಿ ಭೀಕರ ಅನಾಹುತಗಳನ್ನು ಆಯಾ ದಿನಾಂಕಗಳಿಂದ ನೆನೆಸಿಕೊಳ್ಳುವ ರೀತಿ ದೇಶದ ಜನತೆ ‘ಏಯ್ಟ್ ಇಲೆವೆನ್’ ಎಂದು ಸಾಮಾನ್ಯ ಜನರು ಎಂದೆಂದಿಗೂ ನೆನಸಿಕೊಳ್ಳುತ್ತಾರೆ.
ಯಾವ ಪೂರ್ವಸಿದ್ಧತೆಯೂ ಇಲ್ಲದೆ, ರಿಸರ್ವ್ ಬ್ಯಾಂಕ್ ಅನ್ನು ನಿರ್ಲಕ್ಷಿಸಿ, ಏಕಾಏಕಿ ಶೇಕಡಾ 86ರಷ್ಟು ನಗದನ್ನು ಹಿಂಪಡೆದು, ಅಸಂಘಟಿತ ಅರ್ಥವ್ಯವಸ್ಥೆಯನ್ನು ಸಂಪೂರ್ಣ ನಾಮಾವಶೇಷ ಮಾಡಿ, ಸಾವಿರಾರು ಜನ ಕ್ಯೂಗಳಲ್ಲೇ ಕಡೆಯುಸಿರೆಳೆಯುವಂತೆ ಮಾಡಿದ ಮೋದಿಯ ಆ ಎಡವಟ್ಟಿನಿಂದ ಜನ ಇಂದಿಗೂ ಚೇತರಿಸಿಕೊಂಡಿಲ್ಲ.

Leave a Reply