‘ಬ್ರಾಂಡ್ ಇಂಡಿಯಾ’ವನ್ನು ಕಾಪಾಡಿದ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ‘ ಬ್ರಾಂಡ್ ಕಾರ್ನಾಟಕ ‘

ನೋಟು ರದ್ದಿನಿಂದ ದೇಶದೆಲ್ಲಡೆ ವಿದೇಶಿ ನೇರ ಹೂಡಿಕೆ ಕುಗ್ಗಿ ಹೋಗಿದೆ.  ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್ ಹೀಗೆ ಹಲವಾರು ಬಿಜೆಪಿ ಆಡಳಿತ ರಾಜ್ಯಗಳು ಅತ್ಯಂತ ಕಡಿಮೆ ಎಫ್.ಡಿ.ಐ (ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್) ಅನ್ನು ಆಕರ್ಷಿಸಿ ಮುಖಬಂಗ ಅನುಭವಿಸುತ್ತಿದ್ದರೆ, ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಕರ್ನಾಟಕ ರಾಜ್ಯ ಕಳೆದ ವರ್ಷಕ್ಕಿಂತ  ನಾಲ್ಕು ಪಟ್ಟು ಹೆಚ್ಚು ಎಫ್.ಡಿ.ಐ ಹೂಡಿಕೆಯನ್ನು ಪಡೆದುಕೊಂಡು, ಐದು ವರ್ಷದಲ್ಲಿ ಅತ್ಯಂತೆ ಕಡಿಮೆ ಎಫ್.ಡಿ.ಐ ಹೂಡಿಕೆ ಗಳಿಸಿದೆ ಎಂಬ ಹಣೆಪಟ್ಟಿ ಭಾರತಕ್ಕೆ ಬರುವುದನ್ನು ತಪ್ಪಿಸಿದೆ.

ಕರ್ನಾಟಕ ರಾಜ್ಯ 2016 -17ರಲ್ಲಿ 210 ವಿದೇಶಿ ನೇರ ಹೂಡಿಕೆಯನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ (2017 – 18) 850 ಕೋಟಿ ಎಫ್.ಡಿ.ಐ ಆಕರ್ಷಿಸುವ ಮೂಲಕ ನಾಲ್ಕು ಪಟ್ಟು ಹೆಚ್ಚಳ ಕಂಡು, ದೇಶದ ಮೊದಲ ಸ್ಥಾನ ಅಲಂಕರಿಸಿತು.

ಭಾರತ ಸರ್ಕಾರದ ಕೈಗಾರಿಕ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದಿದೆ. ಈ ವರ್ಷದ ಆಗಸ್ಟ್ ತನಕ ಕರ್ನಾಟಕವು ರೂ. 79,866 ಕೋಟಿ ಹೂಡಿಕೆ ಬಾಚಿಕೊಂಡಿದ್ದರೆ, ಗುಜರಾತ್ ರಾಜ್ಯದಲ್ಲಿ ರೂ. 51,586 ಕೋಟಿ ಮೌಲ್ಯದ ಮೊತ್ತವನ್ನಷ್ಟೇ ಆಕರ್ಷಿಸಿದೆ. ಅಂದರೆ ಗುಜರಾತ್ ಗೆ ಹೋಲಿಸಿದರೆ ನಮ್ಮ ರಾಜ್ಯವು ಶೇ. 60ರಷ್ಟು ಹೆಚ್ಚಿನ ಮೊತ್ತವನ್ನು ಆಕರ್ಷಿಸಿದೆ.

2013ರಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕವು 2016, 2017 ಮತ್ತು 2018ರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಹೂಡಿಕೆಗೆ ನಮ್ಮ ರಾಜ್ಯ ಪ್ರಶಸ್ತ್ಯವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Leave a Reply