ರೈತರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವ ಎಚ್.ಡಿ ಕುಮಾರಸ್ವಾಮಿ ಸರ್ಕಾರ

ರೈತರು ಆರ್ಥಿಕ ಸ್ವಾವಲಂಬನೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ತೋಟಗಾರಿಕೆ ಸಚಿವ ಎಂ.ಸಿ ಮನಗೊಳಿ ಅವರು ಸಿರಿ ದಾನ್ಯಗಳ ನೂತನ ತಳಿಗಳನ್ನು ಪರಿಚಯಿಸುತ್ತಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಈ ಬಾರಿಯ ಕೃಷಿ ಮೇಳದ ಸಂದರ್ಭದಲ್ಲಿ ರಾಗಿ ಕೆಎಂಆರ್-630, ಸೂರ್ಯಕಾಂತಿ- ಕೆಬಿಎಸ್‍ಎಚ್-78, ಸೋಯಾ ಅವರೆ-ಕೆಬಿಎಸ್-23 ಮತ್ತು ಅಕ್ಕಿ ಅವರೆ-ಕೆಬಿಆರ್-1 ಹೊಸ ತಳಿಗಳನ್ನು ರೈತರಿಗೆ ಪರಿಚಯಿಸುತ್ತಿದೆ.
ಕಡಿಮೆ ಅವಧಿಯಲ್ಲಿ ಬೆಳೆಯುವ ಈ ತಳಿಗಳು ಹೆಚ್ಚು ಇಳುವರಿ, ಕೀಟ ಬಾಧೆಯಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೆಚ್ಚಿನ ರೋಗ ನಿರೋಧಕ ಶಕ್ತಿಯಿಂದ ಕೂಡಿವೆ. ರೈತರ ಆರ್ಥಿಕ ಸ್ವಾವಲಂಬನೆಗೂ ಹೆಚ್ಚು ಸಹಕಾರಿಯಾಗಲಿವೆ.
ಹಿಂಗಾರು, ಮುಂಗಾರು ಹಾಗೂ ಬೇಸಿಗೆಯಲ್ಲೂ ಈ ತಳಿಗಳಿಂದ ಉತ್ತಮ ಇಳುವರಿ ಸಿಗಲಿದೆ. ಅವುಗಳನ್ನು ಕೃಷಿ ವಲಯ 5 ಮತ್ತು 6ರಲ್ಲಿ ಬೆಳೆಸುವುದಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಎಂ.ಸಿ ಮನಗೊಳಿಯವರು ಅಭಿಪ್ರಾಯ ಪಟ್ಟಿದ್ದಾರೆ.
‘ಎಲ್ಲ ಮಣ್ಣಿನಲ್ಲೂ ಉತ್ತಮ ಇಳುವರಿ’ ‘ಮಂಡ್ಯ, ಚಾಮರಾಜನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ 10 ಜಿಲ್ಲೆಗಳಲ್ಲಿ ಈ ನಾಲ್ಕು ತಳಿಗಳನ್ನು ಬೆಳೆಯಬಹುದು. ಚಾಮರಾಜನಗರದ ರೈತರಿಗೆ ಸೂರ್ಯಕಾಂತಿ ಬೆಳೆ ಅಧಿಕ ಇಳುವರಿ ನೀಡಲಿದೆ. ತಳಿಗಳ ಬೀಜಗಳು ಬಿಡುಗಡೆಯಾದ ಬಳಿಕ ರೈತರು ಕೃಷಿ ಕೇಂದ್ರಗಳಲ್ಲಿ ಶೇ 50ರಷ್ಟು (10 ವರ್ಷ ಅವಧಿವರೆಗೆ ಮಾತ್ರ) ರಿಯಾಯಿತಿ ದರದಲ್ಲಿ ಖರೀದಿಸಬಹುದು’ ಎಂದು ವೈ.ಜಿ.ಷಡಕ್ಷರಿ ವಿವರಿಸಿದರು.

Leave a Reply