ಅಂದು ಬಿಜೆಪಿಗೆ ಬೆಂಬಲಿಸಿದವರು ಇಂದು ಬೀದಿ ಪಾಲು…!

ಅಂದು ಬಿಜೆಪಿಗೆ ಬೆಂಬಲಿಸಿದವರು ಇಂದು ಸಮಾಜದಲ್ಲಿ ತಮ್ಮ ಘನತೆ ಗೌರವ ಕಳೆದುಕೊಂಡು, ಬೀದಿಗೆ ಬಂದಿದ್ದಾರೆ. ಹಿಂದುತ್ವದ ಮುಖವಾಡ ತೊಟ್ಟ ಈ ಪಕ್ಷದ ನಾಯಕರು ಗೋಮುಖವ್ಯಾಘ್ರಿಗಳೆಂದು ಅರಿಯದೆ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ತಮ್ಮ ಸ್ಥಾನ ಮಾನ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದ್ದಾರೆ. ಈ ಪಟ್ಟಿಯಲ್ಲಿ ಹಲವಾರು ಜನರಿದ್ದು, ಜನಾರ್ಧನ ರೆಡ್ಡಿ, ಚೈತ್ರ ಕುಂದಾಪುರ ಹಾಗು ಶರತ್ ಮಡಿವಾಳ ಬಿಜೆಪಿ ಪಕ್ಷವನ್ನು ಬೆಂಬಲಿಸಿ ನಂತರ ಬಲಿಪಶುಗಳಾದ ಉದಾಹರಣೆಗಳು.
ಜನರಾಧನ ರೆಡ್ಡಿ ಸಾವಿರಾರು ಕೋಟಿ ಒಡೆಯನೆಂದು ತಿಳಿದು, ಬಿಜೆಪಿ ಪಕ್ಷದ ನಾಯಕರು ಅವನಿಗೆ ಬಲೆ ಬೀಸಿದರು. ರೆಡ್ಡಿಯ ಅಕ್ರಮ ದಂಧೆಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಿ, ಅವನಿಂದ ಸಾಧ್ಯವಾದಷ್ಟು ದೋಚಿದರು. ನಂತರ ರೆಡ್ಡಿ ಜೈಲು ಪಾಲಾಗುವ ಸಂಧರ್ಭ ಬಂದಾಗ ಬಿಜೆಪಿ ಪಕ್ಷದ ನಾಯಕರು – ‘ ನಮಗು ಜನಾರ್ಧನ ರೆಡ್ಡಿಗು ಯಾವ ಸಂಬಂಧವೂ ಇಲ್ಲ ‘ ಎಂದು ಹೇಳಿ ಕೈ ತೊಳೆದುಕೊಂಡರು.
ಚೈತ್ರ ಕುಂದಾಪುರ ಹಿಂದೂ ಪರ ಹೋರಾಟಗರಾಗಿದ್ದವರು. ತಮ್ಮ ತತ್ವ ಸಿದ್ಧಾಂತಗಳಿಗೆ ಹೋಲುತ್ತದೆ ಎಂದು ಬಿಜೆಪಿ ಪಕ್ಷ ಸೇರಿದರು. ಆದರೆ ಇದು ಕೇವಲ ನಾಮಕಾವಸ್ತಿ ಹಿಂದೂ ಪಕ್ಷ. ಈ ಪಕ್ಷದ ಬಹುತೇಕ ತತ್ವಗಳು ಹಿಂದುತ್ವದ ತತ್ವಗಳಿಗೆ ವಿರುದ್ಧವೇ ಇರುವುದು. ಇವರು ಕೇವಲ ಮತಗಳ ದಾಹದಿಂದ ಹಿಂದುತ್ವದ ಹೆಸರು ದುರ್ಬಳಿಕೆ ಮಾಡಿಕೊಳ್ಳುವವರು ಎಂದು ಅವರಿಗೆ ಪಕ್ಷ ಸೇರಿದ ಮೇಲೆಯೇ ಅರಿವಾಗಿದ್ದು. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಈಗ ಬಿಜೆಪಿಯ ಹಲವಾರು ವಿವಾಧಗಳ ಸುಳಿಯಲ್ಲಿ ಸಿಕ್ಕಿಬಿದ್ದು, ಜೈಲುಪಾಲಾಗಿದ್ದರೆ.
ಇನ್ನು ಜನರ ಬಟ್ಟೆ ಮೇಲಿದ್ದ ಕಲೆಯನ್ನು ತೆಗಿಯುತ್ತಿದ್ದ ಶರತ್ ಮಡಿವಾಳ ಅವರ ಮೇಲೆ ಬಿಜೆಪಿಯ ರಾಜಕೀಯ ಕೆಸರು ಅಂಟಿ ನೆತ್ತರದ ಹೊಳೆಯಲ್ಲಿ ಮುಳುಗಿ ಹೋದರು. ಬಿಜೆಪಿಗೆ ಬೆಂಬಲಿಸಿದ ಕಾರಣಕ್ಕೆ ಅವರಿಗೆ ದೊರೆತ ಕೊಡುಗೆ, ಸಾವು. ಮನೆಯ ಜವಾಬ್ದಾರಿ ಹೊತ್ತ ಮಗನನ್ನು ಕಳೆದುಕೊಂಡ ಶರತ್ ಮಡಿವಾಳ ಅವರ  ವೃದ್ಧ ತಂದೆ, ಹಾಗು ಶರತ್ ಅವರ ತಂಗಿ ದಿನವೂ ಬಿಜೆಪಿ ಪಕ್ಷವನ್ನು ಶಪಿಸುತ್ತ ಕಣ್ಣೀರಿನಲ್ಲಿ ಕೈ ತೊಳಿಯುತ್ತಿದ್ದಾರೆ.
ಬಿಜೆಪಿ ನಾಯಕರ ಸ್ವಭಾವವನ್ನು ಸರಳವಾಗಿ ಹೇಳಬೇಕಂದರೆ, ಸಧಸ್ಯರು, ಕಾರ್ಯಕರ್ತರು ಹಾಗು ಬೆಂಬಲಿಗರನ್ನು, ಕಬ್ಬಿನ ರಸ ತಯಾರಿಕೆಯ ಯಂತ್ರದಂತೆ ಹಿಂಡಿ, ಅವರಿಂದ ಬೇಕಾದ ಉಪಯೋಗ ಪಡೆದುಕೊಂಡು, ಅವರನ್ನು ತಿಪ್ಪೆಗೆ ಎಸೆಯುವ ಜಾಯಮಾನ ಎಂದು ಹೇಳಬಹುದು.

Leave a Reply