ಭಾಷಿಕ ಭೇದವಿಲ್ಲದೆ ಕನ್ನಡ ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡುವುದು ನನ್ನ ಸಂಕಲ್ಪ – ಎಚ್.ಡಿ ಕುಮಾರಸ್ವಾಮಿ 

ಹೊರನಾಡ ಕನ್ನಡಿಗರಲ್ಲೇ ಮತ್ತೊಂದು ಪ್ರಭೇದವಿದೆ. ಅದು ಗಡಿನಾಡ ಕನ್ನಡಿಗರು. ರಾಜ್ಯಗಳ ರಚನೆಯ ವೇಳೆ ಕೆಲವು ಕನ್ನಡದ ಪ್ರದೇಶಗಳು ನಮ್ಮ ನೆರೆಮನೆಯ ರಾಜ್ಯಗಳಲ್ಲಿ  ಉಳಿದುಹೋದವು. ಅಲ್ಲಿ ಅವರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಇಚ್ಛಿಸಿದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಿದ್ದರೆ ಶಿಕ್ಷಕರಿಲ್ಲ, ಶಿಕ್ಷಕರಿದ್ದರೆ  ಪಠ್ಯಗಳಿಲ್ಲ ಎಂಬಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಗಡಿನಾಡಿನ ಜ್ವಲಂತ ಸಮಸ್ಯೆಗಳು, ಹಾಗು ಅಲ್ಲಿನ ಜನರು ಅನುಭವಿಸುತ್ತಿರುವ ಸಂಕಟಗಳ ಬಗ್ಗೆ ಖಾಸಗಿ ಪತ್ರಿಕೆ ಪ್ರಕಟಿಸಿದ ಒಂದು ಲೇಖನಿಯಲ್ಲಿ ಓದಿ, ಅದನ್ನು ಗಂಬೀರವಾಗಿ ಪರಿಗಣಿಸಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ನಾಡಿನೊಳಗಿರುವ ಯಾರಲ್ಲೂ ಪರಕೀಯ, ಅನಾಥ ಭಾವನೆ ಬರದಂತೆ ನೋಡಿಕೊಳ್ಳುವುದು, ಇದ್ದಾರೆ ಹೋಗಲಾಡಿಸುವುದು ಮೈತ್ರಿ ಸರ್ಕಾರದ ಪ್ರಧಾನ ಧ್ಯೇಯವಾಗಿರಲಿದೆ ಎಂದು ಹೇಳಿದ್ದಾರೆ.
ಇದರ ಮೊದಲ ಹೆಜ್ಜೆಯಾಗಿ ನಾಡಿನ ಬಗ್ಗೆ ಕಳಕಳಿಯುಳ್ಳ ಹಿರಿಯ ಮುತ್ಸದ್ದಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರಿ, ಗಡಿ ಅಭಿವೃದ್ಧಿ ಪ್ರಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಹಾಗು ಹಾಲಿ ಅಧ್ಯಕ್ಷರು, ಗಡಿ ಅಭಿವೃದ್ದಿಗಾಗಿ ಹೋರಾಟ ನಡೆಸುತ್ತಿರುವ ಮಹನೀಯರನ್ನು ಸೇರಿಸಿ ಒಂದು ತುರ್ತು ಸಭೆ ಆಯೋಜಿಸಿ ಅವರಿಂದ ಸಲಹೆ ಪಡೆಯುತ್ತೇನೆ. ತಜ್ಞರು ಹಾಗು ಹಿರಿಯರ ಸಲಹೆ ಆಧರಿಸಿ ಸರ್ಕಾರ ತನ್ನ ಮುಂದಿನ ಹೆಜ್ಜೆ ಇಡಲಿದೆ. ಗಡಿ ಅಭಿವೃದ್ದಿಗಾಗಿ ಪಕ್ಷ ಭೇದವಿಲ್ಲದೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಅಪೇಕ್ಷೆ. ಇದಕ್ಕೆ ಎಲ್ಲರ ಸಹಕಾರ ಬಯಸುವೆ.
ಗಡಿ ಜಿಲ್ಲೆ, ಉತ್ತರ – ದಕ್ಷಿಣ, ಭಾಷಿಕ ಭೇದವಿಲ್ಲದೆ ಕನ್ನಡ ನಾಡನ್ನು ಮಾದರಿ ರಾಜ್ಯನ್ನಾಗಿ ಮಾಡುವುದು ನನ್ನ ಸಂಕಲ್ಪ ಎಂದು ಹೇಳಿದ್ದಾರೆ.

Leave a Reply