ಕಾನೂನಿನ ವಿರುದ್ಧ ನಡೆದುಕೊಂಡರೆ ಮುಲಾಜಿಲ್ಲದೆ ಕಂಬಿ ಎಣಿಸುವಂತೆ ಮಾಡಬೇಕಾಗುತ್ತದೆ – ರೇಣುಕಾಚಾರ್ಯನನ್ನು ತರಾಟೆಗೆ ತೆಗೆದುಕೊಂಡ ಸಚಿವ ಎಸ್.ಆರ್ ಶ್ರೀನಿವಾಸ್

ಜನರಿಗೆ ಮರಳನ್ನು ಉಚಿತವಾಗಿ ನೀಡುವುದು ಕಾನೂನನ್ನು ಉಲ್ಲಂಘನೆ ಮಾಡಿದಂತೆ ಎನ್ನುವ  ಅರಿವಿದ್ದರೂ, ಒಬ್ಬ ಶಾಸಕನಿಗೆ  ಇರಬೇಕಾದ ಸಾಮಾನ್ಯ ಜ್ಞಾನವು  ಇಲ್ಲದ  ರೇಣುಕಾಚಾರ್ಯ ಜನರಿಗೆ ಉಚಿತವಾಗಿ ಮರಳನ್ನು ಕೊಡಬೇಕು ಎಂದು ಮೊಂಡು ವಾದ ಮಾಡುತ್ತ ತಮ್ಮ ಬೇಳೆ ಬೆಯ್ಯಿಸಿಕೊಳ್ಳಲು ಮುಗ್ದ ಜನರನ್ನು ಸರ್ಕಾರದ ವಿರುದ್ಧ ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರೇಣುಕಾಚಾರ್ಯನ ಮೂರ್ಖತನದ ಪರಮಾವಧಿ 

ಹೊನ್ನಾಳಿ ತಾಲೂಕಿನ ಮರಳು ನಮ್ಮ ಸಂಪತ್ತೇ  ಹೊರತು ಸರ್ಕಾರದ್ದಲ್ಲ ಎಂದು ಹೇಳಿ ತಮ್ಮ ಮೂರ್ಖತನದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ.  ದಾವಣಗೆರೆ ಜಿಲ್ಲೆಯ ಅಕ್ರಮ ಮರಳು ಮಾಫಿಯಾ ತಡೆಯಲು ಮುಂದಾಗಿದ್ದಕ್ಕೆ ಉಸ್ತುವಾರಿ ಸಚಿವ ಗುಬ್ಬಿ ಶ್ರೀನಿವಾಸ್ ರವರ ಬಗ್ಗೆ ಏಕ ವಚನದಲ್ಲಿ, ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ.

ಮುಲಾಜಿಲ್ಲದೆ ಕಂಬಿ ಎಣಿಸುವಂತೆ ಮಾಡುತ್ತೇನೆ

ಜನರ ಹೆಸರಲ್ಲಿ ಅಕ್ರಮ ಮರಳು ದಂಧೆ ನೆಡಸುವ ಕುತಂತ್ರಕ್ಕೆ ಮುಂದಾಗಿರುವ ಶಾಸಕ  ರೇಣುಕಾಚಾರ್ಯನನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.ನದಿಗೆ ನುಗ್ಗಿ ಮರಳು ತುಂಬುವವರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿಗೆ ಪ್ರತಿಯೊಬ್ಬರೂ ಬೆಲೆ ನೀಡಬೇಕಾಗುತ್ತದೆ. ಇದಕ್ಕೆ ರೇಣುಕಾಚಾರ್ಯ ಏನು ಹೊರತಲ್ಲ. ಅವರೇನು ಆಕಾಶದಿಂದ ಇಳಿದು ಬಂದಿಲ್ಲ. ಹಾಗೇನಾದ್ರೂ ಕಾನೂನಿನ ವಿರುದ್ಧ ನಡೆದುಕೊಂಡರೆ, ಮುಲಾಜಿಲ್ಲದೆ ಕಂಬಿ ಎಣಿಸುವಂತೆ ಮಾಡಬೇಕಾಗುತ್ತದೆ ಎಂದು ಸಣ್ಣ ಕೈಗಾರಿಕಾ ಸಚಿವರಾದ ಎಸ್.ಆರ್ ಶ್ರೀನಿವಾಸ್ ಅವರು  ಎಚ್ಚರಿಕೆ ನೀಡಿದ್ದಾರೆ.

ಸದ್ಯದಲ್ಲೇ ಸಾರ್ವಜನಿಕರಿಗೆ ಮರಳು ಸಿಗಲಿದೆ 

ಈ ಕುರಿತು ವಿಚಾರಿಸಿದಾಗ  ಸುದ್ದಿ ಸಮಾಚಾರದೊಂದಿಗೆ ಮಾತಾಡಿದ ಸಚಿವರು ” ಮರಳು ಟೆಂಡರ್ ಮುಗಿದಿದೆ.ಸದ್ಯದಲ್ಲಿಯೇ ಸಾರ್ವಜನಿಕರಿಗೆ ಮರಳು ಸಿಗಲಿದೆ.ಮರಳು ನೀತಿಯನ್ನು ಸರಳೀಕರಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.ಆದ್ದರಿಂದ ಜನತೆ ರೇಣುಕಾಚಾರ್ಯರವರ ಮಾತುಗಳಿಗೆ ಕಿವಿಗೊಡಬೇಡಿ” ಎಂದು ಸಣ್ಣ ಕೈಗಾರಿಕಾ ಸಚಿವರು ತಿಳಿಸಿದರು.

One thought on “ಕಾನೂನಿನ ವಿರುದ್ಧ ನಡೆದುಕೊಂಡರೆ ಮುಲಾಜಿಲ್ಲದೆ ಕಂಬಿ ಎಣಿಸುವಂತೆ ಮಾಡಬೇಕಾಗುತ್ತದೆ – ರೇಣುಕಾಚಾರ್ಯನನ್ನು ತರಾಟೆಗೆ ತೆಗೆದುಕೊಂಡ ಸಚಿವ ಎಸ್.ಆರ್ ಶ್ರೀನಿವಾಸ್

  1. Sreenivas Bandihalli Seenu says:

    SUPPER BOSS VASANNA

Leave a Reply