ಯಶ್ ಗೆ WARNING ಕೊಟ್ಟ ಸ್ಟಾರ್ ನಟ ಯಾರು ಗೊತ್ತಾ…!?

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಟ್ರೈಲರ್ ನೋ.9 ರಂದು ಕನ್ನಡ, ತೆಲುಗು,ತಮಿಳು ಮಲಯಾಳಂ ಹಾಗು ಹಿಂದಿ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಯೂಟ್ಯೂಬ್ ನಲ್ಲಿ ರೆಲೀಸ್ ಆಗಿದ್ದು, ಇಡೀ ದೇಶವೇ ಯಶ್ ಹಾಗು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಯೂಟ್ಯೂಬ್ ನಲ್ಲಿ  ಸಂಚಲನ ಮೂಡಿಸಿರುವ ಕೆಜಿಎಫ್ ಟ್ರೈಲರ್ ಅನ್ನು ವೀಕ್ಷಿಸಿದವರು, ಈ ಮಾಸ್ಟರ್ಪೀಸ್ ನ  ಹಿಂದೆ ಇರುವ ಜಾದುಗಾರ ನಿರ್ದೇಶಕ ಪ್ರಶಾಂತ್ ನೀಲ್ ರನ್ನು ಹಾಡಿ ಹೊಗಳುತ್ತಿದ್ದಾರೆ . ಯೂಟ್ಯೂಬ್ ನಲ್ಲಿ ಒಂದು ಕನ್ನಡ ಚಿತ್ರಕ್ಕೆ ಅತಿ ಹೆಚ್ಚು ವೀಕ್ಷಣೆ ಹಾಗು ಲೈಕ್ಸ್ ಪಡೆದಿರುವ ಚಿತ್ರ ಕೆಜಿಎಫ್ ಎಂಬ ಹೆಗ್ಗಳಿಕೆ ಇವರಿಗಿದೆ. ಕನ್ನಡದ ಚಿತ್ರವೊಂದು ಈ ಮಟ್ಟಿಗೆ ದಾಖಲೆ ಮಾಡಿರುವುದು ಬಹುಶಃ ಇದೇ ಮೊದಲು.ಹಿಂದಿ ಭಾಷೆಯ ಕೆಜಿಎಫ್ ಟ್ರೈಲರ್ ಅತಿ ಹೆಚ್ಚು ವೀವ್ಸ್ ಪಡೆದುಕೊಂಡಿದ್ರೆ, ತೆಲುಗು ಭಾಷೆಯ ಕೆಜಿಎಫ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಸತತ ಮೂರು ದಿನಗಳ ಕಾಲ ಸೌತ್ ಸ್ಟಾರ್ ನಟರನ್ನ, ಬಾಲಿವುಡ್ ನಟರನ್ನ ಹಿಂದಿಕ್ಕಿ ಅಗ್ರಸ್ಥಾನದಲ್ಲಿತ್ತು.
ಕೆಜಿಎಫ್ ಇಷ್ಟು ಸದ್ದು ಮಾಡುತ್ತಿರುವ ಕಾರಣ, ಕೆಜಿಎಫ್ ರಿಲೀಸ್ ( ಡಿ.21) ದಿನದಂದು ಬಾಲಿವುಡ್ ಬಾದ್ ಶಾಹ್ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಜೀರೋ’ ಹಾಗು ಸೂಪರ್ಸ್ಟಾರ್ ರಜಿನಿಕಾಂತ್ ನಟನೆಯ ‘ಎಂಥಿರನ್’ ಚಿತ್ರದ ಎರಡನೆ ಆವೃತ್ತಿ  ‘ 2.0 ‘ ರಿಲೀಸ್ ಆಗುತ್ತಿದೆ. ಶಾರುಖ್ ಹಾಗು ರಜಿನಿ ಗೆ ಹೋಲಿಸಿದರೆ ಯಶ್ ಇನ್ನು ಬೆಳೆಯಬೇಕಾಗಿರುವ ನಟ. ಆದರೆ ಕೆಜಿಎಫ್ ಟ್ರೈಲರ್ ವೀಕ್ಷಿಸಿರುವ ಶಾರುಖ್ ಅಭಿಮಾನಿಗಳ ಎದೆಯಲ್ಲಿ  ನಡುಕ ಉಂಟಾಗಿದೆ. ಯಶ್ ‘ಹವಾ’ಗೆ ದೊಡ್ಡ ಸ್ಟಾರ್ ನಟರು ಹಾಗು ಅವರ  ಅಭಿಮಾನಿಗಳು ದಂಗಾಗಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರದ ಕಲೆಕ್ಷನ್ ಗೆ ಹೊಡೆತ ಬೀಳುತ್ತದೆ ಎಂದು ಭಯಪಡುತ್ತಿದ್ದಾರೆ.
ಇದೇ ಕಾರಣಕ್ಕೆ ಶಾರುಖ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಯಶ್ ಗೆ ವಾರ್ನ್ ಮಾಡಿದ್ದಾರೆ. ‘ಶಾರುಖ್ ಎದುರು ಬಂದರೆ ನಿನಗೊಂದು ಗತಿ ಕಾಣಿಸಬೇಕಾಗುತ್ತದೆ. ಮರ್ಯಾದಿ ಇಂದ ನಿನ್ನ ಚಿತ್ರದ ರೆಲೀಸ್ ದಿನಾಂಕವನ್ನು ಮುಂದಕ್ಕೆ ಹಾಕು’ ಎಂದು ಟ್ವಿಟ್ಟರ್ ನಲ್ಲಿ ಬೆದರಿಕೆ ಹಾಕಿದ್ದಾರೆ.
ಒಂದು ಪ್ರತಿಭೆ ಬೆಳೆಯುತ್ತಿದ್ದರೆ ಇಷ್ಟು ಜನ ತುಳಿಯಲು ಪ್ರಯತ್ನಿಸುತ್ತಿದ್ದಾರಲ್ಲ ಎಂದು ಬೇಸರ ವ್ಯಕ್ತ ಪಡಿಸಬೇಕೋ ಅಥವಾ ಕನ್ನಡ ಚಿತ್ರದಿಂದ ದೊಡ್ಡ ಸ್ಟಾರ್ ನಟರು ಕಂಗಾಲಾಗಿದ್ದಾರೆ ಎಂದು ಗರ್ವ ಪಡಬೇಕೋ ನಿಮಗೆ ಬಿಟ್ಟಿದ್ದು.

Leave a Reply