ಅಂದು ಅನಂತ್ ಕುಮಾರ್ ಅವರಿಗೆ ಕಣ್ಣೀರು ಹಾಕಿಸಿ ಇಂದು ಅವರ ಶವದ ಮುಂದೆ ಮೊಸಳೆ ಕಣ್ಣೀರಿಟ್ಟ ಮೋದಿ…! 

ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆದು ಕೊಳ್ಳುವುದರ ಬಗ್ಗೆ ಗಮನ ಹರಿಸದೆ ಚುನಾವಣೆ ಪ್ರಚಾರ ಮಾಡುತ್ತ ಬಿಜೆಪಿ ಪಕ್ಷಕ್ಕೆ ದುಡಿದವರು ದಿ.ಅನಂತ್ ಕುಮಾರ್. ಇಂತಹ ಒಬ್ಬ ಭಾವೋದ್ರಿಕ್ತ ರಾಜಕಾರಣಿಯನ್ನು ಬಹುಷಃ ನಾವು ಎಂದು ಕಂಡಿರುವುದಿಲ್ಲ. ವಿಪರ್ಯಾಸವೆಂದರೆ, ಪಕ್ಷಕ್ಕೆ ತನ್ನ ಜೀವವನ್ನೇ ಅರ್ಪಿಸಲು ಸಿದ್ದವಾಗಿದ್ದ ಅನಂತ್ ಕುಮಾರ ಅವರನ್ನು, ಅವರ ಪಕ್ಷವೇ ಹೀನಾಯವಾಗಿ ನಡೆಸಿಕೊಂಡಿತ್ತು.
ಅನಂತ್ ಕುಮಾರ್ ಒಬ್ಬ ಪ್ರಬಲ ರಾಜಕಾರಣಿ. ಒಬ್ಬ ಅರ್ಹ ಅಭ್ಯರ್ಥಿಯಾಗಿ, 2014ರಲ್ಲಿ  ತಮಗೆ  ದಕ್ಕಬೇಕಾದ ಸ್ಥಾನವನ್ನು ಪಡೆಯಲು ಅನಂತ್ ಕುಮಾರ್ ಅವರು ಹರಸಾಹಸ ಪಡಬೇಕಾಯಿತು. 2 ಲಕ್ಷ ಮತಗಳ ಪ್ರಚಂಡ ಗೆಲುವು ಸಾಧಿಸಿದರು, ಸಚಿವ ಸಂಪುಟದಲ್ಲಿ ಅರ್ಹ ಸ್ಥಾನ ನೀಡಲು ಮೋದಿ ಬಹಳ ಸತಾಯಿಸಿದ್ದರು. ನಂತರ ಆರ್ ಎಸ್ಎಸ್ ನಿಂದ ಒತ್ತಡ ಹೇರಿಸಿ ತಮಗೆ ದಕ್ಕಬೇಕಾದ ಸ್ಥಾನವನ್ನು ಪಡೆದುಕೊಂಡರು.
ಇಷ್ಟೆಲ್ಲ  ದ್ರೋಹ ಬಗೆದ ಮೋದಿ, ಅನಂತ್ ಕುಮಾರ್ ಅವರು ಧೈವಾಧೀನರಾದಾಗ ಅಂತಿಮ ದರ್ಶನಕ್ಕೆ ಆಗಮಿಸಿ ಮೊಸಳೆ ಕಣ್ಣೀರಿಟ್ಟು ಡ್ರಾಮಾ ಮಾಡಿದರು.  ಸದಾ ಜನರ ಮುಂದೆ ಪೊಳ್ಳು ನುಡಿಗಳನ್ನು ಆಡುತ್ತಾ, ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ, ನಟಿಸುವ ಮೋದಿ ಅವರಿಗೆ ಶವದ ಮುಂದೆ ನಟಿಸುವುದು ಕಷ್ಟವಾಗಲಿಲ್ಲ.

Leave a Reply