ಕ್ಯಾಬಿನೆಟ್ ಸಚಿವರು ಹಾಗೂ ಗುಬ್ಬಿ ಕ್ಷೇತ್ರದ ಹ್ಯಾಟ್ರಿಕ್ ಶಾಸಕರಾದ ಎಸ್.ಆರ್.ಶ್ರೀನಿವಾಸ್ ರವರು ತಮ್ಮ ಸರಳತೆಯಿಂದ ಈಗ ಮತ್ತೊಮ್ಮೆ ಮನೆಮಾತಾಗಿದ್ದಾರೆ .!!!

ಸರಳತೆಯಲ್ಲಿ ಅಡಗಿದೆ ದೊಡ್ಡತನ

ರಾಜಕಾರಣಿಗಳೆಂದರೆ ಭ್ರಷ್ಟಾಚಾರ ಮಾಡಿ,ಹಣ ಲೂಟಿ ಮಾಡಿ,ಐಷಾರಾಮಿ ಜೀವನ ಮಾಡುವವರು,ಗೆದ್ದ ಮೇಲೆ ಜನರ ಸಮಸ್ಯೆಗೆ ಕಿವಿಕೊಡುವುದಿಲ್ಲ ಹೀಗೆ ಜನಸಾಮಾನ್ಯರ ಮನಸಿನಲ್ಲಿ ರಾಜಕಾರಣಿಗಳ ಬಗ್ಗೆ ನಕಾರಾತ್ಮಕ ಚಿತ್ರಣ ಮೂಡುವುದು ಸಾಮಾನ್ಯ.ಆದರೆ ತೀರ ವಿರಳವೆಂಬಂತೆ ಅಲ್ಲೊಬ್ಬ ಇಲ್ಲೊಬ್ಬ ರಾಜಕಾರಣಿಗಳು ತಮ್ಮ ಸರಳ ಜೀವನ,ಸರಳವಾದ ನಡೆನುಡಿಗಳಿಂದ ಜನರಲ್ಲಿ ಬೆರೆತು ತಾವು ಅವರಲ್ಲಿ ಒಬ್ಬರಾಗುತ್ತಾರೆ. ಅಂತಹವರಲ್ಲಿ ಒಬ್ಬರು ಗುಬ್ಬಿ ಕ್ಷೇತ್ರದ ಹ್ಯಾಟ್ರಿಕ್ ಶಾಸಕರು ಹಾಗೂ ಸಣ್ಣ ಕೈಗಾರಿಕಾ ಸಚಿವರಾದ ಎಸ್.ಆರ್.ಶ್ರೀನಿವಾಸ್ ರವರು.

ತಮ್ಮ ಸರಳ ವ್ಯಕ್ತಿತ್ವ,ಹಾಗೂ ನಗುಮೊಗದೊಂದಿಗೆ ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಸಮುದಾಯದ ಜನರೊಂದಿಗೆ ಬೆರೆಯುವ ಶ್ರೀನಿವಾಸ್ ರವರು ಈಗ ಮತ್ತೊಮ್ಮೆ ತಮ್ಮ ಸರಳತೆಯಿಂದ ಮನೆಮಾತಾಗಿದ್ದಾರೆ.

 

 

ವೈರಲ್ ಆಯ್ತು ಸಚಿವರ ಚಿತ್ರಗಳು

ಇತ್ತೀಚಿಗೆ ಸಚಿವರು ಹೋಟೆಲ್’ಗೆ ತೆರಳಿ ತಾವೇ ಟೋಕನ್ ಪಡೆದು ಕಾಫಿ ಕುಡಿದಿದ್ದರು.ಈ ಚಿತ್ರವನ್ನು ಸೆರೆಹಿಡಿದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.ಈ ಚಿತ್ರಗಳು ಈಗ ಎಲ್ಲೆಡೆ ವೈರಲ್ ಆಗಿದ್ದು,ಸಚಿವರ ಸರಳತೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜಕೀಯದ ಚದುರಂಗದಾಟದಲ್ಲಿ ಜೆಡಿಎಸ್ ಪಾಲಿಗೆ ಸಿಎಂ ಪಟ್ಟ ಒಲಿದು ಎಸ್.ಆರ್.ಶ್ರೀನಿವಾಸ್ ರವರು ಸಣ್ಣ ಕೈಗಾರಿಕಾ ಸಚಿವರು ಮತ್ತು ದಾವಣಗೆರೆ ಜೆಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಸರಳತೆಯನ್ನೇ ಮೈಗೂಡಿಸಿಕೊಂಡಿರುವ ಶ್ರೀನಿವಾಸ್’ರವರು ಶಾಸಕರಾಗುವ ಮುನ್ನ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಹೇಗೆ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳನ್ನು ಕೇಳುತ್ತಿದ್ದರೋ ಈಗಲೂ ಜನಸಮಾನ್ಯರೊಂದಿಗೆ ಅದೇ ರೀತಿ ಬೆರೆಯುತ್ತಾರೆ.ಬೇರೆಯ ರಾಜಕಾರಣಿಗಳನ್ನು ಭೇಟಿ ಆಗಬೇಕಾದರೆ ಇರುವ ಯಾವ ನೀತಿ ನಿಯಮಗಳು ಇಲ್ಲಿ ಕಾಣಿಸುವುದಿಲ್ಲ.

 

 

ಇಂದಿಗೂ ಅದೇ ಜೀವನಶೈಲಿ.
ಎಸ್.ಆರ್.ಶ್ರೀನಿವಾಸ್’ರವರು ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾಗ ಹೇಗಿದ್ದರೋ ಈಗಲೂ ಹಾಗೆ ಇದ್ದಾರೆ, ಈಗಲೂ ಅದೇ ಸರಳ ಜೀವನಶೈಲಿಯನ್ನು ಪಾಲಿಸಿಕೊಂಡು ಬಂದಿದ್ದಾರೆ.
ತಮ್ಮ ಹಳೆಯ ಸ್ಯಾಂಟ್ರೋ ಕಾರಿನಲ್ಲಿ ಬ್ಯಾಡ್ಮಿಂಟನ್ ಆಡಲು ವಿಶ್ವವಿದ್ಯಾನಿಲಯದ ಮೈದಾನಕ್ಕೆ ಪ್ರತಿನಿತ್ಯ ಹೋಗುತ್ತಾರೆ.
ಮಾರ್ಗ ಮಧ್ಯೆ ತಮ್ಮ ಹಳೆಯ ಸ್ನೇಹಿತರು ಪರಿಚಯಸ್ತರನ್ನು ಸಿಕ್ಕರೆ ಸೌಜನ್ಯಯುತವಾಗಿ ಮಾತಾಡಿಸುತ್ತಾರೆ.
ಅಂಬಿಕಾ ಹೋಟೆಲ್’ಗೆ ಹೋಗಿ ಭಟ್ಟರನ್ನು ಪಕ್ಕಕ್ಕೆ ಸರಿಸಿ ತಾವೇ ಕಾಫಿ ಬೆರಸಿಕೊಂಡು ಕುಡಿದು ಬರುತ್ತಾರೆ.
35 ವರ್ಷದಿಂದ ಅದೇ ಕಟಿಂಗ್ ಶಾಪ್
35 ವರ್ಷದಿಂದ ಸಚಿವರು ಎಸ್ ಐ ಟಿ ಮುಖ್ಯ ಗೇಟಿನ ಬಳಿ ಇರುವ ಪುಟ್ಟ ಅಂಗಡಿಯಾದ “ಸಿಂಚನ ಜೆoಟ್ಸ್ ಪಾರ್ಲರ್”ಗೆ ತಾವೇ ಬೈಕ್’ನಲ್ಲಿ ಹೋಗಿ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಳ್ಳುತ್ತಿರುವುದು ಅವರ ಸರಳತೆಗೆ ಹಿಡಿದ ಗೈನ್ನಡಿಯಾಗಿದೆ.

 

 

ಈ ದೃಶ್ಯಾoತವನ್ನು ನೋಡಿದಾಗ ವಿಷ್ಣುವರ್ಧನ್’ರವರ ಆಪ್ತರಕ್ಷಕ ಚಿತ್ರದ ಗೀತೆಯ ಸಾಲುಗಳು ನೆನಪಾಗುತ್ತವೆ.
” ಎತ್ತರ ಎಷ್ಟೇ ಏರು ಮಣ್ಣಲೇ ಇರಲಿ ಬೇರು “.
ಮನುಷ್ಯ ತಾನು ಜೀವನಯಾನದಲ್ಲಿ ಎಷ್ಟೇ ಸಾಧನೆಗಳನ್ನು ಮಾಡಬಹುದು,ಎಷ್ಟೇ ಎತ್ತರಕ್ಕೆ ಏರಬಹುದು ಆದರೆ ತಾನು ಬೆಳೆದು ಬಂದ ಹಾದಿ,ತನನ್ನು ಬೆಳೆಸಿದ ವಾತಾವರಣವನ್ನು ಎಂದೂ ಮರೆಯಬಾರದು.ಯಶಸ್ಸು ಸಿಕ್ಕ ನಂತರ ಆಕಾಶದಲ್ಲಿ ಹಾರಾಡುವುದನ್ನು ಬಿಟ್ಟು ನೆಲಕ್ಕೆ ಅಂಟಿಕೊಂಡಿದ್ದರೆ ಚೆನ್ನ. ಪ್ರತಿಯೊಬ್ಬ ರಾಜಕಾರಣಿಗಳು ಹಾಗೂ ಯುವಜನತೆಗೂ ಪಾಠ ಎಸ್.ಆರ್.ಶ್ರೀನಿವಾಸ್’ರವರ ಸರಳತೆ.

One thought on “ಕ್ಯಾಬಿನೆಟ್ ಸಚಿವರು ಹಾಗೂ ಗುಬ್ಬಿ ಕ್ಷೇತ್ರದ ಹ್ಯಾಟ್ರಿಕ್ ಶಾಸಕರಾದ ಎಸ್.ಆರ್.ಶ್ರೀನಿವಾಸ್ ರವರು ತಮ್ಮ ಸರಳತೆಯಿಂದ ಈಗ ಮತ್ತೊಮ್ಮೆ ಮನೆಮಾತಾಗಿದ್ದಾರೆ .!!!

  1. Chidanandamurthy says:

    ನಮ್ಮ ವಾಸಣ್ಣ : ನಮ್ಮ ಹೆಮ್ಮೆ

Leave a Reply