ಕಾರ್ಯಕ್ರಮದಲ್ಲಿ ಕಾಜಲ್ ಅಗರ್ವಾಲ್ ಗೆ ಮುತ್ತಿಟ್ಟ ನಟ ಯಾರು ಗೊತ್ತಾ ?

ನಟಿ ಕಾಜಲ್ ಅಗರ್ವಾಲ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸ್ವಲ್ಪ ತಬ್ಬಿಬ್ಬಾದ ಘಟನೆ ನಡೆದಿದೆ. ಕವಚಂ ಚಿತ್ರದ ಟೀಸರ್ ಬಿಡುಗಡೆ ವೇಳೆ ಸಹ ಕಲಾವಿದ ಎಲ್ಲರ ಮುಂದೆಯೇ ಕಾಜಲ್ ಅಗರ್ವಾಲ್ ಗೆ ಮುತ್ತಿಟ್ಟಿದ್ದಾರೆ.

ಸೋಮವಾರ ಕವಚಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಕಾಜಲ್, ಸಹ ನಟರು, ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಈ ವೇಳೆ ಛೋಟಾ ಕೆ ನಾಯ್ಡು ಅವ್ರಿಗೂ ಕಾಜಲ್ ಧನ್ಯವಾದ ಹೇಳಿದ್ದಾರೆ. ಕಾಜಲ್ ಕರೆಯುತ್ತಿದ್ದಂತೆ ಅಲ್ಲಿಗೆ ಬಂದ ಛೋಟಾ, ಕಾಜಲ್ ಕತ್ತಿಗೆ ಮುತ್ತಿಟ್ಟಿದ್ದಾರೆ.

ಛೋಟಾ ನಾಯ್ಡು ವರ್ತನೆ ನೋಡಿ ಕಾಜಲ್ ಒಮ್ಮೆ ತಬ್ಬಿಬ್ಬಾಗಿದ್ದಾರೆ. ಆದ್ರೆ ಪರಿಸ್ಥಿತಿಯನ್ನು ಶಾಂತವಾಗಿ ಎದುರಿಸಿದ್ದಾರೆ. ಗಲಾಟೆ ಮಾಡದೆ ವಿವೇಚನೆಯಿಂದ ವರ್ತಿಸಿದ್ದಾರೆ. ಕಿಸ್ ಕೊಟ್ಟಿದ್ದು ಏಕೆ ಎಂಬುದನ್ನು ನಾಯ್ಡು ಅಲ್ಲಿಯೇ ಹೇಳ್ತಾರೆ. ಇರಲಿ, ನೀವು ನನ್ನ ಕುಟುಂಬವೇ ಎಂದು ಕಾಜಲ್ ಪ್ರತಿಕ್ರಿಯೆ ನೀಡ್ತಾರೆ. ಕಾಜಲ್ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply