ಕುರ್ಚಿ ಉಳಿಸಿಕೊಳ್ಳಲು ಮೋದಿ ಮಾಡುತ್ತಿರುವ ಚೀಪ್ ಎಲೆಕ್ಷನ್ ಗಿಮಿಕ್ಸ್ ಬಿಜೆಪಿ ರಾಜ್ಯಾಧ್ಯಕ್ಷನಿಂದಲೇ ಬಯಲು….!

ಈಗಾಗಲೇ ಒಮ್ಮೆ ಜನರು ನೀಡಿದ ಸದಾವಕಾಶವನ್ನು ದುರುಪಯೋಗ ಪಡಿಸಿಕೊಂಡಿರುವ ಮೋದಿ, ಮುಂದಿನ ಚುನಾವಣೆಯಲ್ಲಿ ಗೆದ್ದು ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧವಿರುವ ಮೋದಿ ಹಾಗು ಬಿಜೆಪಿ ಪಕ್ಷದ ನಾಯಕರು, ಮುಗ್ದ ಜನರನ್ನು ಹಿಂದುತ್ವದ ನೆಪವೊಡ್ಡು ಪ್ರೋಚಧನೆ ನೀಡುತ್ತಿದ್ದಾರೆ.

ಇಷ್ಟು ವರ್ಷ ಇಲ್ಲದ ಕಾಳಜಿ ದಿಢೀರನೆ ಮೂಡಿದೆ !

ಅಯೋಧ್ಯೆಯ ರಾಮ ಮಂದಿರ ನಿರ್ಮಿಸುವ ಬಗ್ಗೆ ಬಿಜೆಪಿ ಪಕ್ಷಕ್ಕೆ ನಾಲ್ಕು ವರ್ಷಗಳ ಕಾಲ ಇಲ್ಲದ ಕಾಳಜಿ ದಿಢೀರನೆ ಚುನಾವಣೆ ಹತ್ತಿರ ಬಂದಂತೆ ಮನದಲ್ಲಿ ಮೂಡಿದೆ. ರಾಮ ಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿಕೊಟ್ಟರು, ಮೊಸರಿನಲ್ಲಿ ಕಲ್ಲು ಹುಡುಕುವಂತೆ ಕ್ಷುಲಕ ಕಾರಣಗಳನ್ನು ಇಟ್ಟುಕೊಂಡು ಹಿಂದೂ ಪ್ರಜೆಗಳನ್ನು ಸೆಳೆಯಲು ಸುಪ್ರೀಂ ಕೋರ್ಟ್ ವಿರುದ್ಧ ದಂಗೆ ಏರುವಂತ ಚೀಪ್ ಗಿಮಿಕ್ ಗಳನ್ನು ಮಾಡುತ್ತಿದ್ದಾರೆ.

ಕೇರಳದಲ್ಲಿ ಕಿಂಚಿತ್ತೂ ಗೌರವವಿಲ್ಲದ ಬಿಜೆಪಿ ಪಕ್ಷ!
ಕೇರಳದಲ್ಲಿ ಬಿಜೆಪಿ ಪಕ್ಷಕ್ಕೆ ಕಿಂಚಿತ್ತೂ ಬೆಲೆಯಲ್ಲಿ. ಅದೊಂದು ರಾಷ್ಟೀಯ ಪಕ್ಷ ಎಂದು ಹೇಳಿಕೊಳ್ಳಲು ನಾಚಿಕೆ ಆಗುವಂತ ಸ್ಥಿತಿಯಲ್ಲಿದ್ದಾರೆ. ಇತ್ತೀಚಿಗೆ ಬಹಳ ವಿವಾದ ಸೃಷ್ಟಿಸಿರುವ  ಶಬರಿಮಲೆಯ ಪ್ರಸಿದ್ಧ ಅಯ್ಯಪ ಸ್ವಾಮಿ ದೇವಾಲಯಕ್ಕೆ 10 ರಿಂದ 50  ವರ್ಷದೊಳಗಿನ ಮಹಿಳೆಯರನ್ನು ಪ್ರವೇಶಿಸಲು ಅನುಮತಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ನ  ಆದೇಶವನ್ನು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಅಯ್ಯಪ ಸ್ವಾಮಿ ಭಕ್ತರನ್ನು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಎತ್ತಿಕಟ್ಟಿ, ತಾವು ಹಿಂದೂ ಪರ ನಿಲ್ಲುವವರು ಎಂದು ಸಾಭೀತಿಸಲು ಈ ಪ್ರಕರಣವನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಿಂದಲೇ ಪಕ್ಷದ ಬಂಡವಾಳ ಬಯಲು!  
ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ‘ ಗಲಭೆ ಸೃಷ್ಟಿಸಲು ಶಬರಿಮಲೆ ವಿವಾದ ನಮಗೊಂದು ಸುವರ್ಣಾವಕಾಶ ಎಂದು ಬಹಿರಂಗ ಹೇಳಿಕೆ ಕೊಟ್ಟು, ಪಕ್ಷದ ನಿಜ್ಜ ಬಣ್ಣ ತಾವೇ ಬಯಲು ಮಾಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಜೆಗಳು ಬಿಜೆಪಿಗೆ ಚೀಮಾರಿ ಹಾಕುತ್ತಿದ್ದಾರೆ.
ಅಧಿಕಾರದ ಆಸೆಗೆ ಇಂತಹ ಜನರ ಮುಗ್ದತೆಯನ್ನು ದುರುಪಯೋಗ ಪಡೆಸಿಕೊಂಡು ಚೀಪ್ ಗಿಮ್ಮಿಕ್ಸ್ ಮಾಡುವ ಪಕ್ಷಕ್ಕೆ ನಾವು ಮತ್ತೆ ಮತ ಹಾಕಬೇಕಾ?

Leave a Reply