ಇಂಧನ ಸಚಿವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಂದ ಸರ್ಕಾರಿ ಆಸ್ಪತ್ರೆಗಳ ವಿದ್ಯುತ್ ಸ್ವಾವಲಂಬನೆಗೆ ಮಹತ್ವದ ಹೆಜ್ಜೆ

ಬೆಳಗಾಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಉಂಟಾಗುತ್ತಿದ್ದ ಸಮಸ್ಯೆಯನ್ನು ವಿಶ್ಲೇಷಿಸಿ ಇಂಧನ ಸಚಿವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅರೋಗ್ಯ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸೌರಶಕ್ತಿಯನ್ನು ಅಳವಡಿಸಲು ನಿರ್ಧರಿಸಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, 139 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 16 ಸಮುದಾಯ ಆರೋಗ್ಯ ಕೇಂದ್ರಗಳು, 9 ತಾಲ್ಲೂಕು ಆಸ್ಪತ್ರೆ ಹಾಗೂ 12 ನಗರ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ 80 ಆಸ್ಪತ್ರೆಗಳು ದಿನದ 24 ತಾಸೂ ಸೇವೆ ಒದಗಿಸುತ್ತಿವೆ. ಇಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾದಾಗ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಜನರೇಟರ್‌ಗಳ ಮೊರೆ ಹೋಗಲಾಗಿತ್ತು. ಆದರೆ, ಜನರೇಟರ್‌ಗಳ ಜೊತೆ ಜೊತೆಗೇ ಸೌರಶಕ್ತಿಯನ್ನೂ ಬಳಸಿ ಕೊಳ್ಳುವ ಬಗ್ಗೆ ಯೋಚಿಸಿ, ಇತ್ತೀಚಿನ ದಿನಗಳಲ್ಲಿ ಕಟ್ಟಡಗಳ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತಿದೆ.

ಬಹುತೇಕ ಕಡೆ, ಕನಿಷ್ಠ 5 ಕಿಲೋವಾಟ್‌ನಿಂದ ಗರಿಷ್ಠ 10 ಕಿಲೋವಾಟ್‌ ಸಾಮರ್ಥ್ಯದ ಫಲಕಗಳನ್ನು ಅಳವಡಿಸಲಾಗಿದೆ. ಪ್ರತಿ 10 ಕೆ.ವಿ. ಸೋಲಾರ್‌ ಘಟಕದಿಂದ ನಿತ್ಯ 40ರಿಂದ 60 ಕೆ.ವಿ. ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಇದರಿಂದ ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ತಗ್ಗಿದೆ.

60ಕ್ಕೂ ಹೆಚ್ಚು ಕಡೆ ಸೌರ ಶಕ್ತಿಯ ಸದ್ಬಳಕೆ ಇಂದಿನ ಅಗತ್ಯಗಳಲ್ಲೊಂದಾಗಿದೆ. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌರಶಕ್ತಿ ಘಟಕ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಕೇಂದ್ರ ಕಚೇರಿಯಿಂದಲೇ ಕೆಲವು ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಾಗಿದೆ.

ರಾಜ್ಯದ ಜನತೆಯ ಅವಶ್ಯಕತೆಗೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜನಪರ ನವ ಯೋಜನೆಗಳನ್ನು ಪರಿಚಿಯಿಸುತ್ತಿರುವ ಎಚ್.ಡಿ ಕುಮಾರಸ್ವಾಮಿ ಅವರ ಕ್ರಿಯಾಶೀಲತೆಗೆ ಒಂದು ಸಲಾಂ.

Leave a Reply