ಸತ್ಯಕ್ಕೆ ಜಯವಿದೆ ಎಂದು ಪೊಲೀಸರಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿ ಕುಮಾರಸ್ವಾಮಿ….!

ಆಂಬಿಡೆಂಟ್ ಕಂಪನಿ ಮಾಲಿಕನಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಜನಾರ್ಧನ ರೆಡ್ಡಿಗೆ ಬುಧವಾರ ಕೊನೆಗೂ ಜಾಮೀನು ದೊರಕಿದೆ. ರೆಡ್ಡಿ ತನ್ನ ಹಣದ ಪ್ರಾಬಲ್ಯದಿಂದ ಸಾಕ್ಷ್ಯಾಧಾರಗಳನ್ನು ನಶಿಸಿರಿರುವ ಕಾರಣ ಸಿಸಿಬಿ ಕಮಿಷ್ನರ್ ಅಲೋಕ್ ಕುಮಾರ್ ಹಾಗು ಡಿಸಿಪಿ ಗಿರೀಶ್ ಅವರಿಗೆ ಕೊಂಚ ಹಿನ್ನಡೆ ಉಂಟಾಗಿದೆ.

ವ್ಯಂಗ್ಯವಾಡಿದ ರೆಡ್ಡಿ
ಜಾಮೀನು ದೊರೆತ ಮೇಲೆ ಮಾಧ್ಯಮಗಳ ಮುಂದೆ ಮಾತನಾಡಿದ ಜನಾರ್ಧನ ರೆಡ್ಡಿ, ತನಿಖೆಯಲ್ಲಿ ಅಲೋಕ್ ಕುಮಾರ್ ಹಾಗು ಗಿರೀಶ್ ಅವರಿಗೆ ಉಂಟಾಗಿರು ಹಿನ್ನಡೆಯನ್ನು ವ್ಯಂಗ್ಯವಾಗಿ ಹೀಯಾಳಿಸಿದ್ದಾರೆ. ‘ ಅಲೋಕ್ ಕುಮಾರ್ ಹಾಗು ಡಿಸಿಪಿ ಗಿರೀಶ್ ಪ್ರಾಮಾಣಿಕತನದಲ್ಲಿ ನಂಬರ್ 1. ಅವರನ್ನು ಬಹಳಷ್ಟು ಪ್ರಮಾಧಕರಿ ಘಟನೆಗಳು ನಡೆಯುವ ಜಮ್ಮು ಕಾಶ್ಮೀರಕ್ಕೆ ಸಿಎಂ ಕುಮಾರಸ್ವಾಮಿ ಅವರು ವರ್ಗಾಯಿಸಬೇಕು. ಆಗ ಅವರನ್ನು ಇಡೀ ದೇಶವೇ ಕೊಂಡಾಡುತ್ತದೆ’ ಎಂದು ವ್ಯಂಗ್ಯವಾಡಿದರು.

 

 

ಕುಮಾರಸ್ವಾಮಿ ಅವರ ಪ್ರತ್ಯುತ್ತರ 
ಇದಕ್ಕೆ ಪ್ರತ್ಯುತ್ತರವಾಗಿ ಕುಮಾರಸ್ವಾಮಿ ಅವರು ಪೋಲೀಸರ ಪರ ನಿಂತು ಅವರಿಗೆ ಧೈರ್ಯ ತುಂಬಿದ್ದಾರೆ. ಜನಾರ್ಧನ ರೆಡ್ಡಿ ಮಾತಿನಿಂದ ಯಾವುದೇ ಕಾರಣಕ್ಕು ನೀವು ವಿಚಲಿತರಾಗಬೇಡಿ. ಇದು ನಿಮಗೆ ತಾತ್ಕಾಲಿಕ ಹಿನ್ನಡೆ ಮಾತ್ರ. ಸತ್ಯಕ್ಕೆ ಜಯ ಇದ್ದೇ ಇರುತ್ತದೆ. ನಿಮಗೂ ಒಂದು ದಿನ ಜಯ ದೊರಕುತ್ತದೆ. ಯಾವುದೇ ಕಾರಣಕ್ಕು ಎದೆಗುಂದಬೇಡಿ. ಇಲ್ಲಿಯವರೆಗೂ ಹೇಗೆ ಸಮಾಜ ಘಾತಕರನ್ನು, ವಂಚಕರನ್ನು ಮಟ್ಟ ಹಾಕುತ್ತಿದ್ದಿರೋ, ಇದೆ ರೀತಿ ಮಟ್ಟ ಹಾಕಿ’ ಎಂದು ಹೇಳಿದ್ದಾರೆ.

Leave a Reply