ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರ ‘ಪೈಲ್ವಾನ್’ ಗಾಗಿ ಶ್ರದ್ದೆಯಿಂದ ಜಿಮ್ ನಲ್ಲಿ ಬೆವರು ಸುರಿಸಿ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ಇದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಅಭಿಮಾನಿಯೊಬ್ಬರು ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಅಚ್ಚರಿಪಡಿಸಿದ್ದಾರೆ. ಅಲ್ಲದೆ ಸ್ವತಃ ಸುದೀಪ್ ಅವರಿಂದ ಮೆಚ್ಚಿಗೆ ಗಳಿಸಿದ್ದಾರೆ.
ಸುಧೀಂದ್ರ ಕುಲಕರ್ಣಿ ಅವರು ಸುದೀಪ್ ಸ್ಫೂರ್ತಿಯಿಂದ ತೂಕ ಇಳಿಸಿಕೊಂಡಿರುವ ಯುವಕನಾಗಿದ್ದು, 4 ತಿಂಗಳ ಪರಿಶ್ರಮದಿಂದ 25 ಕೆ.ಜಿ ತೂಕ ಇಳಿಸಿದ್ದಾರೆ. 44 ಇಂಚಿದ್ದ ಸೊಂಟದ ಅಳತೆಯನ್ನು 36ಕ್ಕೆ ಇಳಿಸಿಕೊಂಡಿದ್ದು ಇದಕ್ಕೆ ಕಾರಣ ಸುದೀಪ್ ಅವರೇ ಅಂತ ಟ್ವಿಟ್ ಮಾಡಿದ್ದಾರೆ.
ಸುದೀಪ್ ಕೂಡ ಸುಧೀಂದ್ರ ಕುಲಕರ್ಣಿ ಅವರ ಟ್ವಿಟ್ ಅನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುದೀಪ್ ನಟನೆಯ ಚಿತ್ರವನ್ನು ಹೆಬ್ಬುಲಿ ನಿರ್ದೇಶಕ ಕೃಷ್ಣ ಅವರು ನಿರ್ದೇಶಿಸುತ್ತಿದ್ದು, ನಿರ್ಮಾಣದ ಹೊರೆಯನ್ನು ಅವರೇ ಹೊರಲಿದ್ದಾರೆ.