ಜೈಲೂಟ ತಿಂದು ಸಿಎಂ ಯಾರು ಪಿಎಂ ಯಾರು ಎಂಬುದನ್ನೇ ಮರೆತ ಜನಾರ್ಧನ ರೆಡ್ಡಿ…!

ಆಂಬಿಡೆಂಟ್ ಸಂಸ್ಥೆಯ ಮಾಲೀಕನಿಂದ ಲಂಚವಾಗಿ 20 ಕೋಟಿ ಹಣ ಅಥವಾ ಚಿನ್ನದ ದೊಡ್ಡ ಗಟ್ಟಿಯನ್ನು ಪಡೆದಿರುವ ವಂಚನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬುಧವಾರ ಕೊನೆಗೂ ಜಾಮೀನು ದೊರಕಿದೆ.

ವ್ಯಂಗ್ಯಮಾಡಲು ಹೋಗಿ ತನ್ನ ಮೂರ್ಖತನ ಪ್ರದರ್ಶಿಸಿದ ರೆಡ್ಡಿ!
ಜಾಮೀನು ದೊರೆತ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಜನಾರ್ಧನ ರೆಡ್ಡಿ ಸಿಸಿಬಿ ಕಮಿಷ್ನರ್ ಅಲೋಕ್ ಕುಮಾರ್ ಹಾಗು ಡಿಸಿಪಿ ಎಸ್.ಗಿರೀಶ್ ಅವರನ್ನು ಹೀಯಾಳಿಸಲು ಹೋಗಿ ಮಾಧ್ಯಮಗಳ ಮುಂದೆ ತಾವೇ ನಗೆಪಾಟಲಾಗಿದ್ದರೆ. ಜನಾರ್ಧನ ರೆಡ್ಡಿ ಇಷ್ಟು ದಿವಸ ಹಣದ ಬಲದಿಂದ ಮಾಡುತ್ತಿದ್ದ ಅಪರಾಧಗಳನ್ನು ಮುಚ್ಚಿ ಹಾಕಿ ಆಡುತ್ತಿದ್ದ ಆಟ ಅಲೋಕ್ ಕುಮಾರ್ ಹಾಗು ಗಿರೀಶ್ ಅವರ ಮುಂದೆ ನಡೆದಿಲ್ಲ. ಇದರಿಂದ ಕಿರಿ ಕಿರಿಗೆ ಒಳಗಾದ ರೆಡ್ಡಿ ತನ್ನ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ವ್ಯಂಗ್ಯದ ರೂಪದಲ್ಲಿ ಹೊರಹಾಕುವ ಸಲುವಾಗಿ ” ಸನ್ಮಾನ್ಯ ಅಲೋಕ್ ಕುಮಾರ್ ಹಾಗು ಡಿಸಿಪಿ ಗಿರೀಶ್ ಅವರು ಪ್ರಾಮಾಣಿಕತೆಯಲ್ಲಿ ನಂಬರ್ ಒನ್. ಇಂತಹ ಪ್ರಾಮಾಣಿಕ ಅಧಿಕಾರಿಗಳು ಕರ್ನಾಟಕಕ್ಕೆ ಅವಶ್ಯಕತೆ ಇಲ್ಲ. ಆದ್ದರಿಂದ ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ದೇಶದಲ್ಲಿ ಬಹಳಷ್ಟು ಪ್ರಮಾಧಕರಿ ಘಟನೆಗಳು ನಡೆಯುವ ಜಮ್ಮು ಕಾಶ್ಮೀರಕ್ಕೆ ಇಂತ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ . ಆಗ ಇಡೀ ದೇಶವೇ ಕುಮಾರಸ್ವಾಮಿ ಅವರನ್ನು ಕೊಂಡಾಡುತ್ತದೆ ” ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆ 
ಈ ವಿಡಿಯೋ ನೋಡಿದ ಜನರು, ‘ ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿ. ಅವರು ಕಾಶ್ಮೀರಕ್ಕೆ ಹೇಗೆ ಅಧಿಕಾರಿಗಳನ್ನು ವರ್ಗಾಯಿಸಲು ಸಾಧ್ಯ? ಇಷ್ಟೂ ಸಾಮಾನ್ಯ ಜ್ಞಾನವಿಲ್ಲದ ರೆಡ್ಡಿ ಕೋಟಿ ಗಟ್ಟಲೆ ಹಣ ಸಂಪಾದಿಸಿರುವುದು ಅಕ್ರಮವಾಗಿಯೇ ಎಂಬುದು ಎಂಥವರಿಗಾದರೂ ಅರಿವಾಗುತ್ತದೆ. ಬಹುಷಃ ರೆಡ್ಡಿಗೆ ಜೈಲೂಟ ತಿಂದು ಮುಖ್ಯಮಂತ್ರಿಗೂ ಪ್ರಧಾನ ಮಂತ್ರಿಗೂ ವ್ಯತ್ಯಾಸ ಮರೆತು ಹೋಗಿದೆ’ ; ‘ಇಷ್ಟು ಮಾತನಾಡುವ ರೆಡ್ಡಿ ತನ್ನ ಪಕ್ಷದ ನಾಯಕ ಮೋದಿಯನ್ನೇ ಮನವಿ ಮಾಡಿಕೊಳ್ಳಬಹುದಲ್ಲ.’ ಹಾಗು ‘ ತನಗೆ ಬೆಂಡ್ ಎತ್ತಿರುವುದಕ್ಕೆ ಸಿಟ್ಟಾಗಿ, ವರ್ಗಾವಣೆ ಮಾಡಿಸಿ ಕೊಲೆ ಮಾಡಿಸುವ ಸಂಚು ಇರಬೇಕು ‘ ಎಂದು ಟೀಕಿಸುತ್ತಿದ್ದಾರೆ.

Leave a Reply