ಜನಾರ್ಧನ ರೆಡ್ಡಿಗೆ ಶರವಣ ಖಡಕ್ ಎಚ್ಚರಿಕೆ

ಸಾಕ್ಷ್ಯಾಧಾರಗಳನ್ನು ತನ್ನ ಹಣದ ಬಲದಿಂದ ನಶಿಸಿ, ಪೋಲೀಸರ ಕಣ್ಣಿಗೆ ತಾತ್ಕಾಲಿಕವಾಗಿ ಕಣ್ಣಿಗೆ ಮಣ್ಣು ಎರಚಿ ಮೆರೆಯುತ್ತಿರುವ ಜನಾರ್ಧನ ರೆಡ್ಡಿ, ಬುಧವಾರ ಜಾಮೀನು ದೊರೆತ ನಂತರ, ಸಿಸಿಬಿ ಕಮಿಷ್ನರ್ ಅಲೋಕ್ ಕುಮಾರ್ ಹಾಗು ಡಿಸಿಪಿ ಎಸ್. ಗಿರೀಶ್ ಅವರ ಬಗ್ಗೆ ವ್ಯಂಗ್ಯವಾಡಿದ್ದಲ್ಲದೆ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರೆಡ್ಡಿ ವಿರುದ್ಧ ಗರಂ 
ಇದನ್ನು ತಿಳಿದ ಜನ ಸಾಮಾಜಿಕ ಜಾಲತಾಣದಲ್ಲಿ ಜನಾರ್ಧನ ರೆಡ್ಡಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ. ಅಲ್ಲದೆ ವಿಧಾನಪರಿಷತ್ ಸದಸ್ಯ ಶರವಣ ‘ಭೂತದ ಬಾಯಲ್ಲಿ ಭಗವದ್ಗೀತೆ’ ಹೇಳಿದಂತೆ ಅಂತ ರೆಡ್ಡಿ ಪುಣ್ಯಕೋಟಿ ಹೇಳಿಕೆಗೆ ಅವರು ಕೂಡ ಜನಾರ್ಧನ್ ರೆಡ್ಡಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರೆಡ್ಡಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರೆಡ್ಡಿ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶರವಣ ಕಿಡಿ ಕಾರಿದರು.
ರೆಡ್ಡಿಯವರೇ ನೀವು ಭೂತಾಯಿಯ ಒಡಲನ್ನು ಒಡೆದು ಸಂಪಾದನೆ ಮಾಡಿದ್ದಿರಿ. ಜೈಲಿನಲ್ಲಿ ಮಹಾಭಾರತ ಓದಿದರೆ ಸಾಲದು, ಅದನ್ನು ಕೆಲಸದಲ್ಲಿ ತೋರಿಸಬೇಕು ಅಂತ ಗರಂ ಆಗಿಯೇ ಸಲಹೆ ನೀಡಿದರು.
ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ ಅಂತ ರಾಜ್ಯ ಜೆಡಿಎಸ್ ನಾಯಕರು ಗಾಲಿ ಜನಾರ್ದನ ರೆಡ್ಡಿಗೆ ಎಚ್ಚರಿಕೆ ನೀಡಿದರು.

 

Leave a Reply