ಸ್ವಾರ್ಥ ರಾಜಕಾರಣಿ ಯಡಿಯೂರಪ್ಪನಿಗೆ ಬಿಜೆಪಿ ಪಕ್ಷದಿಂದ ಛೀಮಾರಿ…!? 

ಇಷ್ಟು ದಿನ ರಾಜ್ಯದ ಜನತೆಯ ಮುಂದೆ ತನ್ನ ಮರ್ಯಾದಿ ಕಳೆದುಕೊಂಡಿದ್ದ  ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್ ಯಡಿಯೂರಪ್ಪನನ್ನ  ಈಗ ಸ್ವತಃ ತನ್ನ ಪಕ್ಷದವರೇ ಛೀಮಾರಿ ಹಾಕುತ್ತಿದ್ದಾರೆ. ಇದರಿಂದ ಯಡಿಯೂರಪ್ಪನನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಬಹುತೇಕ ಖಚಿತವಾಗಿದೆ.
ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮುಖ್ಯ ಕಾರಣ 
ಇತ್ತೀಚಿಗೆ ನಡೆದ ಪಂಚ ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಳ್ಳಾರಿ, ಜಮಖಂಡಿ, ಮಂಡ್ಯ ಹಾಗು ರಾಮನಗರ ಹೀಗೆ ನಾಲ್ಕು ಕ್ಷೇತ್ರಗಳಲ್ಲಿ ಹೀನಾಯಿ ಸೋಲು ಅನುಭವಿಸಿದೆ. ಅಲ್ಲದೆ ತನ್ನ ಭದ್ರಕೋಟೆ ಎಂದು ಮೆರೆಯುತ್ತಿದ್ದ ಶಿವಮೊಗ್ಗ ಕ್ಷೇತ್ರದಲ್ಲೂ ಮುಕ್ಕರಿದು ಜಯ ಗಳಿಸಿದೆ.
ಇದಕ್ಕೆ ಮೂಲ ಕಾರಣ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ. ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಿ ಅವರ ಪರ ಪ್ರಚಾರ ಮಾಡುವುದು ನಾಯಕನ ಕರ್ತವ್ಯ. ಆದರೆ ಸ್ವಾರ್ಥ ಯಡಿಯೂರಪ್ಪ ಕೇವಲ ತನ್ನ ಮಗ ಬಿ.ವೈ ರಾಘವೇಂದ್ರ ಸ್ಪರ್ದಿಸಿದ ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡಿರುವುದು ಬಿಜೆಪಿ ಪಕ್ಷದ ಇತರ ನಾಯಕರಿಗೆ ಹಾಗು ಪಕ್ಷದ ಸಧಸ್ಯರಿಗೆ ಬೇಸರ ಉಂಟುಮಾಡಿದೆ.
ಇದೇ ಕಾರಣದಿಂದ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣೆಗೆ ಎರಡು ದಿನ ಇರುವಾಗ ಕಣದಿಂದ ಹಿಂದೆ ಸರಿದು, ಪಕ್ಷ ತೊರೆದರು.
ಅಮಿತ್ ಶಾ ಹೇಳಿದ್ದೇನು?
ಈ ಎಲ್ಲಾ ವದಂತಿಗಳಿಂದ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಹೀನಾಯ ಸ್ಥಿತಿ ಕಂಡು ಕಂಗಾಲಾಗಿರುವ ಅಮಿತ್ ಶಾ ಮಂಗಳೂರಿನಲ್ಲಿ ಬಿಜೆಪಿ ನಾಯಕರ ಜೊತೆ ಮಾತನಾಡಿ, ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಸ್ಥಾನಕ್ಕೆ ಯಾರನ್ನು ತರುವುದು ಸೂಕ್ತ ಎಂದು ಕೇಳಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಗೂ ಮುನ್ನವೇ ಯಡಿಯೂರಪ್ಪರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸವುದು ಬಹುತೇಕ ಖಚಿತವಾಗಿದೆ.

Leave a Reply