ಅಮೆಜಾನ್ ಗ್ರಾಹಕರಿಗೆ ಬಾರಿ ಆಫರ್! 4000 ರೂ. ಮೌಲ್ಯದ ವಸ್ತು ಈಗ ಕೇವಲ 10 ರೂ…..!

ಫ್ಲಿಪ್ಕಾರ್ಟ್ ನ ಬಿಗ್ ಬಿಲಿಯನ್ ಡೇ ಆಫರ್ ನಂತೆ ಅಮೆಜಾನ್ ನಲ್ಲೂ ಬಿಗ್ ಬಿಲಿಯನ್ ಡೇ ಆಫರ್ ನೀಡಲಾಗುತ್ತದೆ. ಈ ಆಫರ್ ನ ಅವಧಿಯಲ್ಲಿ ಶೇ. 99 ರಷ್ಟು ರಿಯಾಯಿತಿ ದೊರೆಯುತ್ತದೆ. ಅದರಲ್ಲಿ 4461 ರು. ಬೆಲೆಯ ಮಿಕ್ಸರ್ ಗ್ರೈಂಡರ್ ಕೇವಲ 10 ರು. ಹೀಗೆ ಇತ್ಯಾದಿ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿವೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದೊಂದಿದೆ ಲಿಂಕ್ ಒಂದನ್ನು ಲಗತ್ತಿಸಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಯಾವ ಯಾವ ವಸ್ತುಗಳ ಮೇಲೆ ರಿಯಾಯಿತಿ ಇದೆ ಎಂಬುದು ಪರದೆಯ ಮೇಲೆ ಗೋಚರವಾಗುತ್ತದೆ. ಆದರೆ ನಿಜಕ್ಕೂ ಅಮೆಜಾನ್ ಬಿಗ್ ಬಿಲಿಯನ್ ಡೇ ಪ್ರಯುಕ್ತ ಉತ್ಪನ್ನಗಳ ಮೇಲೆ ಶೇ.99 ರಷ್ಟು ರಿಯಾಯಿತಿ ನೀಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ವಾಟ್ಸ್ಆಪ್ ಸ್ಕ್ಯಾಮ್ ಎಂದು ಸಾಬೀತಾಗಿದೆ.

ಏಕೆಂದರೆ ವಾಟ್ಸ್ ಆಯಪ್ ಸಂದೇಶದೊಂದಿಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಉತ್ಪನ್ನಗಳು ಮತ್ತು ಅವುಗಳ ಬೆಲೆ ತಿಳಿಯುತ್ತದೆ. ಕೊಳ್ಳಲು ಬಯಸುವವರು ಯಾವ ಉತ್ಪನ್ನ ಬೇಕು ಅದರ ಮೇಲೆ ಕ್ಲಿಕ್ ಮಾಡಿ
ವಿವಿರಗಳನ್ನು ಭರ್ತಿ ಮಾಡಬೇಕು. ಅನಂತರ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಈ ಸಂದೇಶವನ್ನು ೧೦ ಜನರಿಗೆ ಕಳುಹಿಸುವುದು ಕಡ್ಡಾಯ ಎಂದು ಹೇಳಲಾಗಿದೆ. ಅಲ್ಲಿಗೆ ಇದೊಂದು ವಾಟ್ಸ್‌ಆಯಪ್ ಸ್ಕ್ಯಾಮ್ ಎಂಬುದು ಸ್ಪಷ್ಟ. ಈ ಸಂದೇಶವನ್ನು ನಂಬಿದರೆ ನಿಮಗೆ ಯಾವ ಬಿಗ್‌ಬಿಲಿಯನ್ ಡೇ ಆಫರ್‌ಗಳೂ ಸಿಗುವುದಿಲ್ಲ. ಬದಲಾಗಿ ಈ ನಕಲಿ ವೆಬ್‌ಸೈಟ್‌ಗಳ ಮಾಲೀಕರು ಹಣ ಮಾಡಿಕೊಳ್ಳುತ್ತಾರೆ.

Leave a Reply