ಬಯಲಾಯ್ತು ಆಕ್ಷನ್ ಪ್ರಿನ್ಸ್ ಹೃದಯ ಕದ್ದ ಚೋರಿಯ ಹೆಸರು…!

ಕೇವಲ ಮೂರು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿರುವ ಸರ್ಜಾ ಕುಟುಂಬದ ಯಶಸ್ವಿ ನಾಯಕ ಧ್ರುವ ಸರ್ಜಾ ಅವರ ಮಾಡುವೆ ಸೆಟ್ಟೇರಿದೆ. ಧ್ರುವ ಅವರ ಹುಟ್ಟು ಹಬ್ಬದ ದಿನದಂದು ತಮ್ಮ ಮುಂದಿನ ಚಿತ್ರ ಪೊಗರು ಟೀಸರ್ ಲಾಂಚ್ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ‘ ನಾನು ಸದ್ಯಧಲ್ಲೇ ಮದುವೆ ಆಗುತ್ತಿದ್ದೇನೆ. ಖಂಡಿತವಾಗಲೂ ನನ್ನದು ಲುವ್ ಮ್ಯಾರೇಜ್.’ ಎಂದು ಹೇಳಿ ತಮ್ಮ ಮದುವೆಯ ಬಗ್ಗೆ ಒಂದು ಹಿಂಟ್ ನೀಡಿ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದರು. ಅಭಿಮಾನಿಗಳು ಕುತೂಹಲದಿಂದ ಹಲವಾರು ನಟಿಯರನ್ನು ಊಹೆ ಮಾಡಿದ್ದರು. ಈಗ ಆ ಕುತೂಹಲಕ್ಕೆ ಧ್ರುವ ಅವರೇ ತೆರೆ ಎಳೆದಿದ್ದಾರೆ.

ಧ್ರುವ ಸರ್ಜಾ ತಮ್ಮ ಸಂಬಂಧಿಕರ ಮಗಳಾದ ಪ್ರೇರಣಾ ಎಂಬ ಹುಡುಗಿಯನ್ನು ಮೂರೂ ವರ್ಷದಿಂದ ಪ್ರೀತಿಸುತ್ತಿದ್ದು, ಇದೇ ಡಿ.9 ರಂದು ಭನಶಂಕರಿಯ ದೇವಗಿರಿ ದೇವಸ್ಥಾನದಲ್ಲಿ ನಿಷ್ಚಿತಾರ್ಥವಾಗಲಿದ್ದಾರೆ. ಧ್ರುವ ಆಂಜನೇಯನ ಭಕ್ತರಾಗಿದ್ದು, ಮದುವೆ ಹಾಗು ನಿಷ್ಚಿತಾರ್ಥಕ್ಕೆ ಸೆಟ್ ಹಾಕುವ ಹೊರೆಯನ್ನು ಹೊತ್ತಿರುವ ಅರುಣ್ ಸಾಗರ್ ಆಂಜನೇಯನ ಸೆಟ್ ಹಾಕಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಪ್ರೇರಣಾ ಅವರು ಸರ್ಜಾ ಕುಟುಂಬದ ಸಂಬಂಧಿಕರೇ ಆಗಿದ್ದು, ಇತ್ತೀಚೆಗೆ ನಡೆದ ಧ್ರುವ ಅವರ ಅಣ್ಣ ಚಿರಂಜೀವಿ ಸರ್ಜಾ ಅವರ ಮದುವೆಯಲ್ಲಿ ಲಾವಳಿಕೆಯಿಂದ ಓಡಾಡಿದ್ದರು. ಹಾಗು ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಅವರ ಪೊಗರು ಚಿತ್ರದ ಟೀಸರ್ ಅನ್ನು ಶೇರ್ ಮಾಡಿ ಸಂಭ್ರಮಿಸಿದ್ದರು. ಈಗ ಇವರಿಬ್ಬರ ಮೂರೂ ವರ್ಷದ ಪ್ರೀತಿಗೆ ಫಲ ಸಿಗಲಿದೆ.
ಧ್ರುವ ಅವರು ಮುಂದಿನ ವರುಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Leave a Reply