ಕೊಹ್ಲಿ ದಂಪತಿ ಜೀವನಕ್ಕೆ ಬೇಬಿ ಪ್ರಿನ್ಸ್ ನ ಆಗಮನ..!? ತಂದೆ ಆಗುತ್ತಿದ್ದಾರ ಕಿಂಗ್ ಕೊಹ್ಲಿ?

ಕ್ರಿಕೆಟ್ ಜಗತ್ತಿನ ಕಿಂಗ್ ಎಂದೇ ಖ್ಯಾತರಾಗಿರುವ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷವಾಗುತ್ತಿದೆ. ಒಂದು ಚಿಕ್ಕ ಸುಳಿವನ್ನು ನೀಡದೆ ಕೊಹ್ಲಿ ತನ್ನ ಮಹಿಳಾ ಫ್ಯಾನ್ ಬಳಗಕ್ಕೆ ಎದೆಗುಂದುವಂತೆ ಗುಪ್ತವಾಗಿ ಇಟಲಿಯಲ್ಲಿ ಮದುವೆ ಆಗಿದ್ದರು.

ಅಭಿಮಾನಿಗಳು ಈಗ ಕೊಹ್ಲಿ ದಂಪತಿಯರಿಂದ ಸಿಹಿ ಸುದ್ದಿಯ ನಿರೀಕ್ಷಣೆಯಲ್ಲಿರುವಾಗಲೇ ಅನುಷ್ಕಾ ಶರ್ಮ ಅವರ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಅನುಷ್ಕಾ ಅವರ ಹೊಟ್ಟೆ ಸ್ವಲ್ಪ ದಪ್ಪವಾಗಿ ಕಾಣುತ್ತಿರುವುದರಿಂದ, ಜನರು ಅನುಷ್ಕಾ ಗರ್ಭಿಣಿ ಇರಬಹುದು ಎಂದು ಊಹಿಸುತ್ತಿದ್ದರೆ.

ಆದರೆ ಅನುಷ್ಕಾ ಶರ್ಮ ಇದರ ಬಗ್ಗೆ ಇನ್ನು ಏನು ಮಾಹಿತಿ ಬಹಿರಂಗ ಪಡಿಸಿಲ್ಲ. ಸೂಯಿ ಧಾಗ ಚಿತ್ರದ ಯಶಸ್ಸನ್ನು ಮೆಲುಕು ಹಾಕುತ್ತಿರುವ ಅನುಷ್ಕಾ ಈಗ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರದಲ್ಲಿ ಬ್ಯುಸಿ ಆಗಿದ್ದರೆ.

Leave a Reply