ರೈತರ ಸಾಲ ಮನ್ನಾ ಅನಾವಶ್ಯಕ ಎಂದ ಬಿಜೆಪಿ ಕಾರ್ಯಕರ್ತನಿಗೆ ಧರ್ಮದೇಟು…!

ಬೀದರ್ ಜಿಲ್ಲೆಯಲ್ಲಿ ನೆನ್ನೆ( ಗುರುವಾರ ) ರೈತರಿಗೆ ಪ್ರೇರರಣೆ  ನೀಡುವ ಸಲುವಾಗಿ ಆಯೋಜಿಸಿದ್ದ ಮೊದಲ ರೈತ ಸ್ಪಂದನ ಕಾರ್ಯಕ್ರಮವು ಯಶಸ್ವಿಯಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿನಿಂದ ರೈತರ ಮನದಲ್ಲಿ ಹೊಸ ಚೈತನ್ಯ ಮೂಡಿದೆ.

ಕಾರ್ಯಕ್ರಮದಲ್ಲಿ ರೈತರ ಕಷ್ಟಗಳು ಹಾಗು ಅದಕ್ಕೆ ಸೂಕ್ತ ಪರಿಹಾರಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿರುವಾಗ, ಬಿಜೆಪಿ ಪಕ್ಷದ ಒಬ್ಬ ಪುಂಡ ಕಾರ್ಯಕರ್ತ, ಕುಮಾರಸ್ವಾಮಿ ಅವರನ್ನು ಅವಮಾನ ಮಾಡುವ ದುರುದ್ದೇಶದಿಂದ ‘ ಸಾಲ ಮನ್ನಾ ರೈತರಿಗೆ ಅವಶ್ಯಕತೆ ಇಲ್ಲ. ರೈತರೇ ನಿಮಗೆ ಸಾಲ ನೀಡುತ್ತಾರೆ ‘ ಎಂದು ಮುಖ್ಯಮಂತ್ರಿ ಅವರನ್ನು ಏಕವಚನದಲ್ಲಿ ಮಾತನಾಡಿಸಿ ಅವಹೇಳನೆ ಮಾಡಿದನು. ಆದರೆ ಇದಕ್ಕೆ ಶಾಂತವಾಗಿಯೇ ಪ್ರತಿಕ್ರಯಿಸಿದ ಕುಮಾರಸ್ವಾಮಿ ಅವರು ‘ ಆಗಲಿ ಬಿಡಿ. ರೈತರು ನಮಗೆ ಸಾಲ ಕೊಡುವಂತಾದರೆ, ನನಗಿಂತ ಖುಷಿ ಪಡುವಂತಹ ವ್ಯಕ್ತಿ ಮತ್ತೊಬ್ಬನಿಲ್ಲ ‘ ಎಂದು ಹೇಳಿದರು.

ಆದರೆ ಅವನ ವರ್ತನೆಯಿಂದ ಆಕ್ರೋಶಗೊಂಡ ಜನ ಅವನಿಗೆ ಹಿಗ್ಗಾ ಮುಗ್ಗ ಥಳಿಸಿ ಸಭಾಂಗಣದಿಂದ ಹೊರಗಟ್ಟಿದರು. ನಂತರ ಅವನೊಬ್ಬ ಎಂಜಿಲು ಕಾಸಿಗೆ ಕೈಚಾಚುವ ಬಿಜೆಪಿ ಕಾರ್ಯಕರ್ತ ಎಂದು ತಿಳಿದುಬಂದಿತು.

Leave a Reply