ಮತ್ತೆ ತವರು ಸೇರುತ್ತಾರಾ ಯಡಿಯೂರಪ್ಪ…?

ಈಗಾಗಲೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಒಮ್ಮೆ ಜೈಲೂಟದ ರುಚಿ ಕಂಡಿರುವ ಯಡಿಯೂರಪ್ಪ ಈಗ ಮ್ಯಾಟ್ ಜೈಲು ಸೇರುವಂತಿದೆ. ಪಕ್ಷದ ಕಾರ್ಯಕರ್ತರು ಚುನಾವಣೆ ನೀತಿ ಸಂಹಿತಿ ಉಲ್ಲಂಘನೆ ಮಾಡಿರುವುದನ್ನು ಕೇಳಿರುತ್ತೇವೆ. ಆದರೆ ಒಬ್ಬ ನಾಯಕ ನೀತಿ ಸಂಹಿತಿಯನ್ನು ಉಲ್ಲಂಘನೆ ಮಾಡಿದ್ದಾನೆ ಎಂದರೆ ಅವನ ನಾಯಕತ್ವದ ಬಗ್ಗೆ ನೀವೇ ಯೋಚನೆ ಮಾಡಿ. ಅದು ಬೇರೆ ಯಾರು ಅಲ್ಲ ನಮ್ಮ ಸಾಮಾನ್ಯ ಶ್ರೀ ಮಾಜಿ ಜೈಲುವಾಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು.

ಹಳ್ಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಆಮಿಶ 

ಗುಂಡ್ಲುಪೇಟೆ ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಭೀಮನಬೀಡು ಗ್ರಾಮಕ್ಕೆ ಹೋಗಿದ್ದ ಯಡಿಯೂರಪ್ಪ ಕಮಲದ ಗುರುತಿಗೆ ಮತ ನೀಡುವಿರಿ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಕೈ ಎತ್ತಿ ಎಂದಿದ್ದರು. ಅಲ್ಲದೆ ನಾನು ಅಧಿಕಾರಕ್ಕೆ ಬಂದರೆ ಗುಂಡ್ಲು ಪೇಟೆಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಪೊಳ್ಳು ಆಮಿಶಗಳ್ಳನ್ನು ಒಡ್ಡಿದ್ದಾರೆ.

ಗರಿಷ್ಠ ಒಂದು ವರ್ಷ ಜೈಲು, ದಂಡ:

ಈ ಕುರಿತು ದಾಖಲಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ವಿಶೇಷ ನ್ಯಾಯಾಲಯ ನ.29ಕ್ಕೆ ತೀರ್ಪು ಕಾಯ್ದಿರಿಸಿದೆ. ಯಡಿಯೂರಪ್ಪ ವಿರುದ್ಧ ಪ್ರಕರಣ ಸಾಬೀತಾದರೆ ಐಪಿಸಿ ಕಲಾಂ 171 ಎಫ್ ಅಡಿ ಗರಿಷ್ಠ 1 ವರ್ಷ ಜೈಲು ಖಚಿತ.

Leave a Reply