ತಮ್ಮ ಜನಪರ ಯೋಜನೆಗಳಿಂದ ರೈತರ ಮನಗೆದ್ದಿರುವ ತಂದೆ; ಇಂಪಾದ ಹಾಡಿನಿಂದ ಯುವಕರನ್ನು ಮನಸೆಳೆದ ಮಗ…!

‘ ಜಾಗ್ವರ್ ‘ ಚಿತ್ರದ ಮೂಲಕ ಕನ್ನಡ ಹಾಗು ತೆಲುಗು ಚಿತ್ರರಂಗಕ್ಕೆ ಯುವರಾಜ ನಿಖಿಲ್ ಕುಮಾರಸ್ವಾಮಿ ಭರ್ಜರಿ ಎಂಟ್ರಿ ನೀಡಿದರು. ಜಾಗ್ವರ್ ಚಿತ್ರ ತನ್ನ ರಿಚ್ ಮೇಕಿಂಗ್ ಹಾಗು ಚಿತ್ರದಲ್ಲಿ ನಿಖಿಲ್ ಪ್ರಬುದ್ಧ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಬರೆದಿದೆ. ಈಗ ನಿಖಿಲ್ ರ ಎರಡನೇ ಚಿತ್ರ ‘ ಸೀತಾರಾಮ ಕಲ್ಯಾಣ ‘ ಬಿಡುಗಡೆಗೆ ಮುನ್ನವೇ ತನ್ನ ಟೀಸರ್ ಹಾಗು ಹಾಡುಗಳ ಮೂಲಕ ಹೊಸ ದಾಖಲೆಗಳನ್ನು ಹುಟ್ಟು ಹಾಕಿದೆ.

68 ಲಕ್ಷಕ್ಕೂ ಹೆಚ್ಚು ವೀಕ್ಷಣೆ !

ಕೆಲವು ತಿಂಗಳ ಹಿಂದೆ ಯೂಟ್ಯೂಬ್ ನಲ್ಲಿ ರಿಲೀಸ್ ಆದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್  ಅತಿ ಹೆಚ್ಚು ಮಂದಿ ವೀಕ್ಷಿಸಿರುವ ಕನ್ನಡ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಲವೇ ದಿನಗಳಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವ ಈ ಟೀಸರ್, ಭಾರತದ ಟ್ರೆಂಡಿಂಗ್ ವೀಡಿಯೋಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು.

 

 

ಇಂಪಾದ ಹಾಡಿಗೆ ಕ್ಲೀನ್ ಬೋಲ್ಡ್ ಆದ ಯುವಕರು !

ಸೀತಾರಾಮ ಕಲ್ಯಾಣ ಚಿತ್ರದ ‘ ನಿನ್ನ ರಾಜ ನಾನು ನನ್ನ ರಾಣಿ ನೀನು ‘ ಹಾಡಿನ ಲಿರಿಕಲ್ ವಿಡಿಯೋ ನೆನ್ನೆ( ಶುಕ್ರವಾರ ) ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯವಕರ ಮನಸೆಳೆದಿರುವ ಈ ಮನಮೋಹಕ ಗೀತೆ, ಪ್ರತಿಯೊಬ್ಬರ ಮೊಬೈಲ್ ಫೋನ್ ಗಳಲ್ಲೂ ಹರಿದಾಡುತ್ತಿದೆ. ಭಾರತ ಟ್ರೆಂಡಿಂಗ್ ವಿಡಿಯೋಗಳ ಪಟ್ಟಿಯಲ್ಲಿ 20ನೇ ಸ್ಥಾನ ಅಲಂಕರಿಸಿದೆ.

 

 

ಭಾರತದ ಅತಿ ದೊಡ್ಡ ಮ್ಯೂಸಿಕ್ ಸಂಸ್ಥೆಯಿಂದ ಚಿತ್ರದ ಹಾಡುಗಳ ಹಕ್ಕು ಖರೀದಿ

ಭಾರತದ ಅತಿ ದೊಡ್ಡ ಮ್ಯೂಸಿಕ್ ಸಂಸ್ಥೆಗಳಲ್ಲಿ ಒಂದಾದ ‘ ಪ್ರೇಮಲೋಕ ‘ , ‘ ಬಾಹುಬಲಿ ‘ ಚಿತ್ರಗಳ ಹಾಡುಗಳ ಹಕ್ಕನ್ನು ಖರೀದಿಸಿದ್ದ ಲಹರಿ ಮ್ಯೂಸಿಕ್ ಸಂಸ್ಥೆಯೇ ಈ ಚಿತ್ರದ ಹಾಡುಗಳನ್ನೂ ಖರೀಧಿಸಿದೆ.

‘ ಭಜರಂಗಿ ‘, ‘ ವಜ್ರಕಾಯ ‘ ಖ್ಯಾತಿಯ ಎ. ಹರ್ಷ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅನಿತಾ ಕುಮಾರಸ್ವಾಮಿ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ರಚಿತಾ ರಾಮ್ ಚಿತ್ರದ ನಾಯಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನೂ ಸಾಧು ಕೋಕಿಲ, ಚಿಕ್ಕಣ್ಣ, ಗಿರಿಜಾ ಲೋಕೇಶ್ ಸೇರಿ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಭಾಗಿಯಾಗಿದೆ. ಸಂಗೀತ ಸಂಯೋಜನೆಯನ್ನು ಅನೂಪ್ ರೂಬೆನ್ಸ್ ಅವರು ಮಾಡಿದ್ದು , ಸ್ವಾಮಿ ಅವರು ನೃತ್ಯ ರಚನೆ ಮಾಡಿದ್ದಾರೆ

Leave a Reply