ಕುಮಾರಸ್ವಾಮಿ ಅವರು ಹೇಳಿದ್ದೇನು, ಎಂಜಿಲು ಕಾಸಿನ ಆಸೆಗೆ ಮಾಧ್ಯಮಗಳು ತಿರುಚಿ ಪ್ರಸಾರ ಮಾಡುತ್ತಿರೋದೇನು?

ಬಿಜೆಪಿ ಪಕ್ಷದವರು ನೀಡುವ ಎಂಜಿಲು ಕಾಸು ಆಸೆಗೆ ಕುಮಾರಸ್ವಾಮಿ ಅವರ ಹೆಸರಿಗೆ ಮಸಿ ಬಳಿಯಲು, ಹಾಗು ಟಿಆರ್ ಪಿ ಗಾಗಿ ಇಲ್ಲ ಸಲ್ಲದ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ ಮಾಧ್ಯಮಗಳು. ಬಿಜೆಪಿ ಕಾರ್ಯಕರ್ತೆ ಜಯಶ್ರೀ ಗುರುನ್ನವರ್ ಕುಮಾರಸ್ವಾಮಿ ಅವರ ಮುಖಕ್ಕೆ ಮಸಿ ಬಳಿಯಲು, ದುಡ್ಡು ಕೊಟ್ಟು ಜನರನ್ನು ಸೇರಿಸಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡಿಸಿದರು. ಸರ್ಕಾರ ಕಬ್ಬಿನ ಬಾಕಿ ಕೊಡಿಸಲಿಲ್ಲ ಎಂಬ ಕಾರಣ ಹೇಳಿ ‘ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಲು ನಾಲಾಯಕ್ ‘ ಎಂದು ಅವಹೇಳನೆ ಮಾಡಿದರು.

ನನ್ನ ತಾಳ್ಮೆಗೂ ಮಿತಿ ಇದೆ 

ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ‘ ನನ್ನ ತಾಳ್ಮೆಗೂ ಮಿತಿ ಇದೆ. ನಾಲ್ಕು ವರ್ಷದಿಂದ ದುಡ್ಡು ಕೊಡದ ಸಕ್ಕರೆ ಕಾರ್ಖಾನೆ ಕಂಪನಿಯ ಮಾಲೀಕರಿಗೆ ಚುನಾವಣೆಯಲ್ಲಿ ಮತ ಹಾಕಿ ಶಾಸಕರು, ಸಚಿವರನ್ನಾಗಿ ಮಾಡಿದ್ದೀರಾ. ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ದುಡ್ಡು ಕೊಡಿಸಲಿಲ್ಲ ಎಂದು ಗಧಾ ಪ್ರಹಾರ ಮಾಡಿ, ಸುವರ್ಣ ಸೌಧದ ಬೀಗ ಒಡಿಯುತ್ತಿದ್ದಿರಾ ‘ ಎಂದು ಸಿಟ್ಟಾದರು.

ರೈತರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ

ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕೃಷಿ ಮೇಳದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೆಸರಿನಲ್ಲಿ ಕೆಲವರು ಬೆಳಗಾವಿ ಸುವರ್ಣಸೌಧ ಬೀಗ ಒಡೆಯುತ್ತಿದ್ದಾರೆ. ರೈತರು ಶಾಂತಿ ಪ್ರಿಯರು, ಅವರ ಹೆಸರಿನಲ್ಲಿ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ದರೋಡೆ ಮಾಡುವವರ ರೀತಿಯಲ್ಲಿ ಕಲ್ಲು ತೆಗೆದುಕೊಂಡು ಹೋಗಿ ಸುವರ್ಣ ಸೌಧದ ಬೀಗ ಒಡೆಯುತ್ತಿದ್ದಾರೆ, ಅವರು ನಿಜವಾದ ರೈತರಲ್ಲ, ರೈತರ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಕುತಂತ್ರ 

ಇದೇ ವೇಳೆ ಅವರು ‘ ನಾಲ್ಕು ವರ್ಷದಿಂದ ಕಬ್ಬಿನ ಬಾಕಿ ಕೊಡಿಸಿಲ್ಲ ಎಂದು ಈ ಮಹಿಳೆ ನನ್ನನ್ನು ದೂಷಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಕೇವಲ ಐದು ತಿಂಗಳಾಗಿದೆ. ಈಗ ಬಂದು ನಾಲ್ಕು ವರ್ಷದಿಂದ ಬಾಕಿ ಕೊಡಿಸಲಿಲ್ಲ ಎಂದು ಹೇಳಿದರೆ, ಅದಕ್ಕೆ ನಾನು ಹೇಗೆ ಜವಾಬ್ದಾರನಾಗುತ್ತೇನೆ ? ಇಷ್ಟು ವರ್ಷ ಇವರು ಎಲ್ಲಿ ಮಲಗಿದ್ದರು?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರು ಇಷ್ಟು ವರ್ಷ ಏನು ನಿದ್ದೆ ಮಾಡುತ್ತಿದ್ದರಾ? ಎಂದು ಕೇಳುವ ಉದ್ದೇಶದಿಂದ ಆ ಮಾತನ್ನು ಆಡಿರುವುದು ಕನ್ನಡ ಭಾಷೆ ಸರಿಯಾಗಿ ಬರದವನಿಗೂ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಆದರೆ ಬಿಜೆಪಿ ಪಕ್ಷದವರು ಮಾಧ್ಯಮಗಳಿಗೆ ಹಣ ನೀಡಿ, ಮಹಿಳೆಯನ್ನು ಕುಮಾರಸ್ವಾಮಿ ಅವರು ಅವಹೇಳನ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ಕಡು ಬಡವಳು ಎಂದವಳ ಬಳಿ ಐಫೋನ್ 

ತಾನು ಕಡು ಬಡವಳು, ತನ್ನ ಮಕ್ಕಳ ಫೀಸ್ ಕಟ್ಟಲು ಸಹ ಹಣವಿಲ್ಲಾ ಎಂದು ಮಾಧ್ಯಮಗಳ ಮುಂದೆ ನಟಿಸಿದ ರೈತ ಮಹಿಳೆ ಎಂದು ಹೇಳಿಕೊಳ್ಳುವ ಇವರು ಒಂದು ಲಕ್ಷ ಮೌಲ್ಯದ ಆಪಲ್ ಐಫೋನ್ ಹೊಂದಿದ್ದಾರೆ.

ಆಪರೇಷನ್ ಕಮಲ ಕನಸು ಕಟ್ಟುತ್ತಿರುವ ಬಿಜೆಪಿ ಪಕ್ಷದ ನಾಯಕರು, ಸರ್ಕಾರ ಬೀಳುಸಿವ ಹಗಲು ಕನಸು ಕಾಣುತ್ತಿದ್ದಾರೆ. ಇದೇ ಕಾರಣಕ್ಕೆ ಇಂತಹ ಚೀಪ್ ಗಿಮಿಕ್ ಗಳನ್ನೂ ಮಾಡುತ್ತಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ.

Leave a Reply