ಮೋದಿಯ ಫಸಲ್ ಬಿಮಾ ಯೋಜನೆಯ ಅಸಲೀಯತೇ ಕಂಡು ತಬ್ಬಿಬ್ಬಾದ ಅಧಿಕಾರಿಗಳು….!

ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಆಗುವ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಆರ್ಥಿಕ ಬೆಂಬಲ ಒದಗಿಸಲು ಪ್ರಧಾನಿ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಮೋದಿ ಜಾರಿಗೊಳಿಸಿದರು. ಆದರೆ ಯಾವೊಬ್ಬ ರೈತನಿಗೂ ಇದರಿಂದ ನಯಾ ಪೈಸದ ಪರಿಹಾರ ದೊರೆತ್ತಿಲ್ಲ..ಕೇವಲ ವಿಮಾ ಕಂಪನಿಗಳು ಇದರಿಂದ ಕೊಳ್ಳೆ ಹೊಡಿಯುತ್ತಿದ್ದಾರೆ. ಇದು ಮೋದಿಯ ಅತ್ಯಂತೆ ದೊಡ್ಡ ಹಗರಣಗಳಲ್ಲಿ ಒಂದು ಎಂದು ಹೇಳಬಹುದು.

ಇನ್ಷೂರೆನ್ಸ್‌ ಕಟ್ಟಿದ್ದು 350, ಪರಿಹಾರ ಬಂದಿದ್ದು 2 ರೂ.!
ಪ್ರಧಾನ ಮಂತ್ರಿ ಫಸಲ್‌ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸುವಂತೆ ಕೃಷಿ ಅಧಿಕಾರಿಗಳು ಹೇಳಿದ್ದಕ್ಕೆ ಕಳೆದ ಎರಡು ವರ್ಷಗಳಿಂದ ವಿಮೆ ಕಟ್ಟಲಾಗಿದೆ. ಆದರೆ ಇನ್ಷೂರೆನ್ಸ್‌ ಮೊತ್ತ ಮಾತ್ರ ಇನ್ನೂ ಬಂದಿಲ್ಲ. ಕಳೆದ ವರ್ಷದ ಇನ್ಷಾರೆನ್ಸ್‌ ಕ್ಲೇಮ್‌ ಆಗಿ ಕೇವಲ 2ರೂ. ಚೆಕ್‌ ಬಂದಿದೆ ಎಂದು ರೈತ ಶರಣೇಗೌಡ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ಪ್ರಸ್ತಾಪಿಸಿದರು.

ತಬ್ಬಿಬ್ಬಾದ ಅಧಿಕಾರಿಗಳು…!
ಮೋದಿಯ ಈ ಹಗರಣ ಬಗ್ಗೆ ಕೇಳಿದ ಅಧಿಕಾರಿಗಳು ತಬ್ಬಿಬ್ಬಾದರು. ಹೌದಾ! ಇಷ್ಟು ಕಡಿಮೆ ಇನ್ಷೂರೆನ್ಸ್‌ ಬಂದಿದೆಯಾ? ಯಾವ ಕಂಪನಿ ಪಾವತಿ ಮಾಡಿದ್ದು? ಇಷ್ಟು ಕಡಿಮೆ ಮೊತ್ತ ಪಾವತಿ ಮಾಡಿದ್ದಕ್ಕೆ ಸಾಕ್ಷಿ ಇದೆಯಾ? ಎಂದು ದಿಲ್ಲಿಯ ಕನ್ಸಲ್ಟೆಂಟ್‌ ಆಶ್ಚರ್ಯದಿಂದ ಪ್ರಶ್ನಿಸಿದರು. ಬ್ಯಾಂಕ್‌ ಖಾತೆಗೆ ಜಮೆಯಾಗಿರುವ ಡೀಟೇಲ್ಸ್‌ ಇದೆ. ಪಾಸ್‌ಬುಕ್‌ನಲ್ಲಿ ಎಂಟ್ರಿ ಕೂಡ ಆಗಿದೆ ಎಂದು ರೈತ ಶರಣೇಗೌಡ ಪ್ರತಿಕ್ರಿಯಿಸಿದರು.
ನೆರೆದ ರೈತರು ಇದಕ್ಕೆ ಧ್ವನಿಗೂಡಿಸಿ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಪ್ರತಿ ವರ್ಷವೂ ವಿಮೆ ಕಂತು ಪಾವತಿ ಮಾಡಲಾಗುತ್ತಿದೆ. ಆದರೆ ಇನ್ಷೂರೆನ್ಸ್‌ ಕ್ಲೇಮ್‌ ಮಾತ್ರ ಆಗುತ್ತಿಲ್ಲ.
ನಿರಂತರ ಬರಗಾಲದ ನಡುವೆ ಬೆಳೆ ವಿಮೆ ಕೂಡ ಪಾವತಿಯಾಗದೇ ಇರುವುದು ರೈತರಿಗೆ ಸಂಕಷ್ಟ ತಂದಿದೆ ಎಂದು ವಿವರಿಸಿ, ಮೋದಿಯನ್ನು ನಂಬಿ ನಾವು ಕೆಟ್ಟೆವು ಎಂದು ಕೊರಗಿದರು.

Leave a Reply