ಸರ್ಕಾರದಿಂದ ರಾಜ್ಯದ ಜನರಿಗೆ ಬಂಪರ್ ಕೊಡುಗೆ…! ನೀವು ಸರ್ಕಾರದಿಂದ ಮನೆ ಪಡೆದುಕೊಳ್ಳುವುದು ಹೇಗೆ ಎಂದು ಕ್ಲಿಕ್ ಮಾಡಿ ನೋಡಿ…!

ರಾಜ್ಯ ಸರ್ಕಾರ ಬಡವರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ಬಡವರ ಏಳಿಗೆಗೆ ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರ ಸರ್ಕಾರ, ಈಗ ಅವರಿಗೆ ವಸತಿ ನಿರ್ಮಿಸಿ ಕೊಡಲು ಮುಂದಾಗಿದ್ದಾರೆ.

ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಮಾರ್ಪಾಡುಗೊಳಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ನೆಲಮಹಡಿ ಜತೆಗೆ ಮೂರು ಮಹಡಿ  ಬದಲಿಗೆ ನೆಲಮಹಡಿ ಜತೆಗೆ 14 ಮಹಡಿಗಳನ್ನು ನಿರ್ಮಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕುಮಾರಸ್ವಾಮಿ ಅವರು ನಿವೇಶನ ಮತ್ತು ಮನೆ ಇಲ್ಲದ ಬಡ ವರ್ಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ರೂಪಿಸಲಾಗಿತ್ತಿದೆ. ಬೆಂಗಳೂರು ಮತ್ತು ಸುತ್ತಮುತ್ತ ಭೂಮಿ ಲಭ್ಯತೆ ಕಷ್ಟವಾಗಿರುವ ಕಾರಣ ಇರುವ ಭೂಮಿಯಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಿ ಹೆಚ್ಚು ಮಂದಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ನೆಲಮಹಡಿ ಜತೆಗೆ ಮೂರು ಮಹಡಿ ನಿರ್ಮಾಣ ಮಾಡುವ ಬದಲು ನೆಲಮಹಡಿ ಜತೆಗೆ 14 ಮಹಡಿ ಮಾದರಿಯ ಅಪಾರ್ಟ್‌ಮೆಂಟ್‌ ನಿರ್ಮಿಸಲು ನಿರ್ಧರಿಸಲಾಗಿದೆ. ವಸತಿ ಯೋಜನೆಯನ್ನು ಲಿಫ್ಟ್‌ ಸಹಿತ ನಿರ್ಮಾಣಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಡವರಿಗೆ ಕೈಗೆಟುವ ದರದಲ್ಲಿ ವಸತಿಗಳನ್ನು ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ. ಯೋಜನೆಯಲ್ಲಿ ಒಂದು ಬೆಡ್‌ ರೂಂ ಮತ್ತು ಎರಡು ಬೆಡ್‌ ರೂಂನ ವಸತಿಗಳನ್ನು ನಿರ್ಮಿಸಲಾಗುವುದು. ಯೋಜನೆಯಡಿ ವಸತಿ ಹಂಚಿಕೆಯಾಗುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು .1.5 ಲಕ್ಷ ಆರ್ಥಿಕ ನೆರವು ನೀಡಲಿದೆ. ಸಾಮಾನ್ಯ ವರ್ಗದವರಿಗೆ .1.2 ಲಕ್ಷ ಮತ್ತು ಎಸ್‌ಸಿ/ಎಸ್‌ಟಿ ವರ್ಗದವರಿಗೆ .2 ಲಕ್ಷ ನೆರವನ್ನು ರಾಜ್ಯಸರ್ಕಾರವು ನೆರವು ಒದಗಿಸಲಿದೆ ಎಂದು ಹೇಳಿದರು.

 

One thought on “ಸರ್ಕಾರದಿಂದ ರಾಜ್ಯದ ಜನರಿಗೆ ಬಂಪರ್ ಕೊಡುಗೆ…! ನೀವು ಸರ್ಕಾರದಿಂದ ಮನೆ ಪಡೆದುಕೊಳ್ಳುವುದು ಹೇಗೆ ಎಂದು ಕ್ಲಿಕ್ ಮಾಡಿ ನೋಡಿ…!

Leave a Reply