ಹೆಣ್ಣಿನ ಮೋಹಕ್ಕೆ ಸಿಲುಕಿ ಮರ್ಯಾದೆ ಕಳೆದುಕೊಂಡಿದ್ದ ರೇಣುಕಾಚಾರ್ಯನಿಗೆ ಈಗ ಮರಳಿನ ಮೇಲೆ ಕಣ್ಣು

ಹೆಣ್ಣು, ಹೊನ್ನು ಹಾಗು ಮಣ್ಣಿನ ಮೋಹಕ್ಕೆ ಸಿಲುಕಿದವರು ಎಂದೂ ಉದ್ಧಾರವಾಗುವುದಿಲ್ಲ ಎಂಬ ಗಾದೆ ಮಾತೇ ಇದೆ. ರೇಣುಕಾಚಾರ್ಯನಿಗೆ ಈ ಗಾದೆ ಮಾತು ಹೇಳಿ ಮಾಡಿಸಿದಂತ್ತಿದೆ. ಸಾಮಾನ್ಯವಾಗಿ ಜನರು ತಮ್ಮ ಸಾಧನೆಗಳ ಮೂಲಕ ಪ್ರಖ್ಯಾತರಾದರೆ, ಈತ ತನ್ನ ಕಾಮಲೀಲೆಗಳ ಮೂಲಕ ಮನೆಮಾತಾಗಿದ್ದವನು. ಹಿಂದೆ ನರ್ಸ್ ಜಯಲಕ್ಷ್ಮಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರೇಣುಕಾಚಾರ್ಯನ ಕಾಮಲೀಲೆ ಬಯಲಾಗಿ, ಇಡೀ ರಾಜ್ಯದ ಜನತೆ ಚೀಮಾರಿ ಹಾಕಿದ್ದರು. ಇಷ್ಟಾದರು ಇವನು ಇನ್ನೂ ಬುದ್ದಿ ಕಲಿತಿಲ್ಲ.

ಜನರಿಗೆ ಮರಳನ್ನು ಉಚಿತವಾಗಿ ನೀಡುವುದು ಕಾನೂನನ್ನು ಉಲ್ಲಂಘನೆ ಮಾಡಿದಂತೆ ಎನ್ನುವ  ಅರಿವಿದ್ದರೂ, ಒಬ್ಬ ಶಾಸಕನಿಗೆ  ಇರಬೇಕಾದ ಸಾಮಾನ್ಯ ಜ್ಞಾನವು  ಇಲ್ಲದ  ರೇಣುಕಾಚಾರ್ಯ ಜನರಿಗೆ ಉಚಿತವಾಗಿ ಮರಳನ್ನು ಕೊಡಬೇಕು ಎಂದು ಮೊಂಡು ವಾದ ಮಾಡುತ್ತಾ ತನ್ನ ಬೇಳೆ ಬೆಯ್ಯಿಸಿಕೊಳ್ಳಲು ಮುಗ್ದ ಜನರನ್ನು ಸರ್ಕಾರದ ವಿರುದ್ಧ ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾನೆ.

ಈಗಾಗಲೇ ಸಣ್ಣ ಕೈಗಾರಿಕಾ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಮರಳು ಟೆಂಡರ್ ಮುಗಿದಿದೆ, ಸಾಮಾನ್ಯ ಜನರಿಗೆ ಮರಳು ಸದ್ಯದಲ್ಲೇ ದೊರಕಲಿದೆ ಎಂಬ ಆಶ್ವಾಸನೆ ನೀಡಿದ್ದಾರೆ.

ರೇಣುಕಾಚಾರ್ಯ ಸದುದ್ದೇಶದಿಂದ ಹೋರಾಡುವವನಾಗಿದ್ದರೆ, ಈ ಹೇಳಿಕೆ ನಂತರ ತೃಪ್ತನಾಗುತ್ತಿದ್ದ. ಆದರೆ ಇವನ ಉದ್ದೇಶ ಜನ ಸೇವೆ ಅಲ್ಲ. ಮುಗ್ದ ಜನರ ಹೆಸರಲ್ಲಿ, ಅಕ್ರಮ ಮರಳು ಸಾಗಾಣಿಕೆ ಮಾಡಿ ಹಣ ಬಾಚುವುದು. ಆದ್ದರಿಂದ ಇವನ ‘ಪ್ರಾಮಾಣಿಕ’ ಹೋರಾಟ ಇನ್ನೂ ನಿಂತಿಲ್ಲ.

ಹರಸಾಹಸ ಪಟ್ಟರು ಸಿಎಂ ಪಟ್ಟ ದೊರಕಲಿಲ್ಲ ಎಂಬ ಹತಾಶೆಯಿಂದ ಬಿ.ಎಸ್ ಯಡಿಯೂರಪ್ಪ, ಕೈಲಾಗದವನು ಮೈ ಪರಚಿಕೊಂಡಂತೆ,ರಾಜ್ಯದ ಜನತೆಯ ಆಸೆಯಂತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕುಮಾರಸ್ವಾಮಿ ಅವರ ಹೆಸರಿಗೆ ಮಸಿ ಬಳಿಯಲು, ತನ್ನ ಪಕ್ಷದ ನಾಯಕರನ್ನು ಛೂ ಬಿಡುತ್ತಿದ್ದಾರೆ. ಯಡಿಯೂರಪ್ಪ ನವರ ಆಟದ ಬೊಂಬೆಗಳಲ್ಲಿ ರೇಣುಕಾಚಾರ್ಯನೂ ಒಬ್ಬನು ಎಂಬ ಮಾತುಗಳು ಕೇಳಿ ಬರುತ್ತಿವೆ.

Leave a Reply