ಕುಮಾರಸ್ವಾಮಿ ಅವರ ವಿರುದ್ಧ ಜನಸಾಮಾನ್ಯರನ್ನು ಎತ್ತಿ ಕಟ್ಟಲು ಬಿಜೆಪಿ ಮಾಡುತ್ತಿರುವ ಚೀಪ್ ಟ್ರಿಕ್ಸ್ ಏನು ಗೊತ್ತಾ …?!

ಎಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದು ಇಂದಿಗೆ ( ಶುಕ್ರವಾರ ) ಆರು ತಿಂಗಳು ಪೂರ್ಣಗೊಂಡಿದೆ. ವಿರೋಧ ಪಕ್ಷದವರ ನಿರಂತರ ಟೀಕೆಗಳು ಹಾಗು ರಾಜಕೀಯ ಷಡ್ಯಂತರಗಳ ನಡುವೆಯೇ ಕುಮಾರಸ್ವಾಮಿ ಅವರು ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆ, ನಗರದಲ್ಲಿನ ಇಸ್ಪೀಟ್ ಕ್ಲಬ್ ಗಳಿಗೆ ಹಾಗು ಪಬ್ ಗಳಿಗೆ ಬೀಗ, ಮೀಟರ್ ಬಡ್ಡಿ ದಂಧೆಕೋರರನ್ನು ಮಟ್ಟ ಹಾಕಿದ್ದು, ಜನತಾ ದರ್ಶನ ಹೀಗೆ ಸಾಲು ಸಾಲು ಜನಪರ ಯೋಜನೆಗಳ ಮೂಲಕ ವಿರೋಧ ಪಕ್ಷ ಹರಡಿಸುತ್ತಿರುವ ಅಭಾವಾತ್ಮಕತೆಯ ನಡುವೆಯೂ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಸಹಿಸಲಾರದೆ ಬಿಜೆಪಿ ಪಕ್ಷದ ನಾಯಕರು ಹಲವಾರು ರಾಜಕೀಯ ಷಡ್ಯಂತರಗಳನ್ನು ಮಾಡುತ್ತಿದ್ದಾರೆ. ಕಬ್ಬು ಬೆಳೆಗಾರರನ್ನು ಕುಮಾರಸ್ವಾಮಿ ಅವರ ವಿರುದ್ಧ ಎತ್ತಿಕಟ್ಟಲು ನಕಲಿ ರೈತ ಮಹಿಳೆಗೆ ಕಮ್ಮಕ್ಕು ನೀಡಿದ್ದು. ರೇಣುಕಾಚಾರ್ಯನನ್ನು ಅರ್ಥಹೀನ ಹೋರಾಟಕ್ಕೆ ಇಳಿಸಿರುವುದು. ಇವೆಲ್ಲವೂ ರಾಜಕೀಯ ಷಡ್ಯಂತರಗಳು ಎಂಬದು ಸುಲಭವಾಗಿ ರಾಜ್ಯದ ಜನತೆಗೆ ಈಗಾಗಲೇ ಅರಿವಾಗಿದೆ.

ಈಗ ಕುಮಾರಸ್ವಾಮಿ ಅವರ ವಿರುದ್ಧ ಸಾಮಾನ್ಯ ಜನರನ್ನು ಎತ್ತಿ ಕಟ್ಟಲು ಬಿಜೆಪಿ ಮಾಡುತ್ತಿರುವ ಮತ್ತೊಂದು ರಜಕೀಯ ಷಡ್ಯಂತ್ರ ಅಥವಾ ಚೀಪ್ ಟ್ರಿಕ್ ಎಂದೇ ಹೇಳಬಹುದಾದ ವಿಷಯ ಬಯಲಾಗಿದೆ.

ಸಾಮಾಜಿಕ ಜಾಲತಾಣ ಈಗ ಪ್ರತಿಯೊಂದಕ್ಕೂ ಉತ್ತಮ ವೇದಿಕೆ. ಇದರ ಮೂಲಕ ಸುಲಭವಾಗಿ ಸಕಾರಾತ್ಮಕ ಅಥವಾ ನಕಾರಾತ್ಮಕ ವಿಷಯಗಳನ್ನು ಜನರಿಗೆ ತಲುಪಿಸಬಹುದು. ನಕಾರಾತ್ಮಕ ವಿಷಯಗಳು ಸಹಜವಾಗಿ ಬೇಗ ಹರಡುತ್ತವೆ. ಇದನ್ನು ತಂತ್ರವಾಗಿ ಬಳಿಸಿಕೊಂಡು, ಬಿಜೆಪಿ ಈಗಾಗಲೇ ಕುಮಾರಸ್ವಾಮಿ ಅವರ ಮೇಲೆ ಆಕ್ರೋಶವಿರುವ ಮೀಟರ್ ಬಡ್ಡಿ ದಂಧೆಕೋರರಿಗೆ ಕುಮ್ಮಕ್ಕು ನೀಡಿ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಜನರನ್ನು ಎತ್ತಿ ಕಟ್ಟುವ ಸಲುವಾಗಿ 500 ಮಂದಿಯ ಗ್ಯಾಂಗ್ ಒಂದನ್ನು ತಯಾರಿಸಿದೆ. ಪತ್ರಿಕೋದ್ಯಮದ ಹೆಸರಿನಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಬರೆದು ಅದನ್ನು ಶೇರ್ ಮಾಡುವುದೇ ಇವರ ಕೆಲಸ.

ಇದನ್ನು ಗಮನಿಸಿರುವ ಜೆಡಿಎಸ್ ಪಕ್ಷದವರು ಈಗ ಮೂವರ ಮೇಲೆ ಪೊಲೀಸ್ ದೂರನ್ನು ನೀಡಿದ್ದಾರೆ.

Leave a Reply