ನಾಲ್ಕು ವರ್ಷಗಳಿಂದ ಸರ್ಕಾರದ ಕೈಯಲ್ಲಿ ಆಗದ್ದನ್ನು ಕೇವಲ ಮೂರೇ ದಿನಗಳಲ್ಲಿ ಮಾಡಿ ತೋರಿಸಿದ ಕುಮಾರಸ್ವಾಮಿ

ಕಬ್ಬು ಬೆಳೆಗಾರರಿಗೆ ನಾಲ್ಕು ವರ್ಷಗಳಿಂದ ಎಫ್‌ಆರ್‌ಪಿ ಹಣ ದೊರಕಿಲ್ಲ ಎಂದು, ರೈತರು ಸರ್ಕಾರದ ವಿರುದ್ಧ ದಂಗೆ ಎದಿದ್ದರು. ಸಿಎಂ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದು ಕೇವಲ ಐದು ತಿಂಗಳಾಗಿದೆ. ಆದರೆ ನಾಲ್ಕು ವರ್ಷದಿಂದ ಬಾಕಿ ಹಣ ಪಾವತಿಸದಕ್ಕೆ ಏಕಾಏಕಿ ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನೆ ಮಾಡಿದರು. ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮತ ನೀಡಿ, ಶಾಸಕ ಹಾಗು ಸಚಿವರನ್ನಾಗಿ ಮಾಡಿ, ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟಿಸಿದಾಗ ಇದೊಂದು ವಿರೋಧ ಪಕ್ಷದ ರಾಜಕೀಯ ಷಡ್ಯಂತರ ಎಂದು ಬಯಲಾಗಿದೆ.

ಆದರೂ ಇದಕೆಲ್ಲ ತಲೆ ಕೆಡಿಸಿಕೊಳ್ಳದೆ, ಎಚ್.ಡಿ ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರಿಗೆ ನೆರವಾಗಿ ತಮ್ಮ ಕಾರ್ಯನಿಷ್ಠೆಯನ್ನು ಸಾಬೀತು ಪಡಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಕುಮಾರಸ್ವಾಮಿ ಅವರ ಅದ್ಯಕ್ಷತೆಯಲ್ಲಿ ನೆನ್ನೆ( ಗುರುವಾರ ) ಸಂಜೆ ಸಿಎಂ ಕುಮಾರಸ್ವಾಮಿ ಅವರು ಬಳ್ಳಾರಿ ಪ್ರವಾಸ ರದ್ದುಗೊಳಿಸಿ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆಸಿದ ಸಭೆ ಸಫಲವಾಗಿದ್ದು, ಕಬ್ಬು ಬೆಳೆಗಾರರ ಪರವಾಗಿ ಫಲಿತಾಂಶ ದೊರಕಿದೆ.

ಕಾರ್ಖಾನೆ ಮಾಲೀಕರಿಗೆ ತಾಕೀತು 

”ವ್ಯವಹಾರದಲ್ಲಿ ಏರುಪೇರು ಸರಿಪಡಿಸಿಕೊಳ್ಳುವ ಸಾಮರ್ಥ್ಯ ಕಾರ್ಖಾನೆಗಳ ಮಾಲೀಕರಿಗೆ ಇರುತ್ತದೆ. ಆದರೆ, ರೈತರಿಗೆ ಸೂಕ್ತ ಬೆಲೆ ಸಿಗದಿದ್ದರೆ ಸುಧಾರಿಸಿಕೊಳ್ಳುವುದು ಕಷ್ಟ. ರೈತರ ಹಿತರಕ್ಷಣೆ ಮಾಡುವುದು ಸರಕಾರದ ಕರ್ತವ್ಯ. ಹೀಗಾಗಿ ರೈತರೊಂದಿಗೆ ವಿಶ್ವಾಸದ ಮೇಲೆ ಮಾಡಿಕೊಂಡಿರುವ ಒಪ್ಪಂದದಂತೆ ನಡೆದುಕೊಳ್ಳುವುದು ನಿಮ್ಮ (ಮಾಲೀಕರು) ಜವಾಬ್ದಾರಿ. ರೈತರಿಗೆ ಕೊಟ್ಟ ಮಾತಿನಂತೆ ಬಾಕಿ ಹಣ ಪಾವತಿಸಿ,” ಎಂದು ಕಾರ್ಖಾನೆ ಮಾಲೀಕರಿಗೆ ಸಿಎಂ ತಾಕೀತು ಮಾಡಿದರು.

ರೈತರಿಗೆ ಆಭಾರಿಯಾಗಿದ್ದೇನೆ

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಏನೋ ಮಾತನಾಡಿದೇ ಅಂತ ಪ್ರತಿಭಟನೆ ನಡೆಯಿತು. ಇವತ್ತಿನ ಸಭೆಗೆ ರೈತರ ಮುಖಂಡರನ್ನು ಕರೆದು ಸುದೀರ್ಘವಾಗಿ ಮಾತನಾಡಿದ್ದೇನೆ. ಬೆಳಗ್ಗಿನಿಂದಲೂ ಮಾಧ್ಯಮಗಳಲ್ಲಿ ಕಬ್ಬು ಬೆಳಗಾರರಿಗೆ ಕಹಿಯೋ, ಸಿಹಿಯೋ ಅಂತ ಸುದ್ದಿ ಮಾಡಿದ್ದೀರಿ. ಆದರೂ ರೈತರು ಸರ್ಕಾರದ ಕೆಲವು ಸಲಹೆಗೆ ಒಪ್ಪಿಗೆ ನೀಡಿದ್ದಾರೆ. ನಾನು ರೈತರಿಗೆ ಅಭಾರಿಯಾಗಿದ್ದೇನೆಂದು ಹೇಳಿದ್ದಾರೆ.

ಮಾಲೀಕರ ಒಪ್ಪಿಗೆ ಇನ್ನೂ ದೊರಕಿಲ್ಲ

ಸಭೆಯಲ್ಲಿ ಕೆಲ ನಿರ್ಣಯ ಮಾಡಿದ್ದೇನೆ. ಸಮಸ್ಯೆ ಬಗ್ಗೆ ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿದ್ದೇನೆ. ಇದಕ್ಕೆ ಮಾಲೀಕರು ಇನ್ನು ಒಪ್ಪಿಲ್ಲ. ಅವರ ಪ್ರತಿನಿಧಿಯೊಬ್ಬರು ಸಭೆಗೆ ಬಂದಿದ್ದರು. ಹೀಗಾಗಿ ಇದೇ 22ನೇ ತಾರೀಕಿನ ಒಳಗೆ, ಮಾಲೀಕರ ಸಭೆ ಮಾಡಲು ನಿರ್ಧಾರ ಮಾಡಿದ್ದೇನೆ.

ಇಳುವರಿಗೆ ಹೊಸ ಯಂತ್ರ 

ತಮ್ಮ 13 ಸಮಸ್ಯೆಗಳ ಬಗ್ಗೆ ರೈತರು ಮಾಹಿತಿ ನೀಡಿದ್ದರು. ಇಳುವರಿಯಲ್ಲಿ ಕಡಿಮೆ ತೋರಿಸುವುದು, ತೂಕ ಕಡಿಮೆ ಮಾಡುವ ವಿಚಾರವನ್ನು ಸಹ ಪ್ರಸ್ತಾಪ ಮಾಡಿದ್ದಾರೆ. ಇಳುವಾರಿ ಸರಿಯಾಗಿ ತೋರಿಸಲು ಹೊಸ ಯಂತ್ರ ಖರೀದಿಗೆ ಸೂಚನೆ ನೀಡಿದ್ದೇನೆ. ಎಫ್ಆರ್​ಪಿ ದರವನ್ನೇ ಮಾಲೀಕರಿಗೆ ನೀಡಲು ಸೂಚನೆ ನೀಡಲಾಗಿದೆ. ದರ ನಿಗದಿ ಬಗ್ಗೆ ಆಯುಕ್ತರಿಗೆ ಅಧಿಕಾರ ನೀಡಿದ್ದೇನೆ. ಈ ಬಗ್ಗೆ ಮಾಲೀಕರ ಜೊತೆ ಚರ್ಚೆ ಮಾಡಿ ದರ ನಿಗದಿಗೆ ಮಾಡುವಂತೆ ತಿಳಿಸಿದ್ದೇನೆ.

 

 

ಇದೇ ಕೊನೆಯ ಸಭೆಯಲ್ಲ 

ಇದು ರೈತರ ಅಂತಿಮ ಸಭೆ ಅಲ್ಲ. ಹಂತ ಹಂತವಾಗಿ ಸಭೆ ಮಾಡುತ್ತೀನಿ. ಅಗತ್ಯ ಸಮಯದಲ್ಲಿ ಸಭೆಯನ್ನು ಕರೆಯುತ್ತೇನೆ. ರೈತ ಮುಖಂಡರು ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಅವರಿಗಾಗಿ ಮುಕ್ತ ಅವಕಾಶ ನೀಡಿದ್ದೇನೆ. ಕಳೆದ ವರ್ಷದ ಕಬ್ಬು ಮೊತ್ತ ಬಿಡುಗಡೆ ಮಾಡಲು, ಅಧಿಕಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಮಾಲೀಕರಿಗೂ ಸಹ ಈ ಬಗ್ಗೆ ಸೂಚನೆ ನೀಡಿ, ಎಲ್ಲಾ ಹಣವನ್ನು ನೀಡಲು ಸೂಚಿಸಿದ್ದೇನೆ.

ರೈತರು ಆತಂಕಕ್ಕೆ ಒಳಗಾಗುವುದು ಬೇಡ 

ಇದು ರೈತರ ಪರ ಸರ್ಕಾರವಾಗಿದೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಸರಿಯಾದ ಸಮಯಕ್ಕೆ ಕಟಾವು ಮಾಡಲು ಸರ್ಕಾರ ನೇರ ಜವಾಬ್ದಾರಿ ತೆಗೆದುಕೊಂಡಿದೆ. ರೈತರ ಸಲಹೆ ಸ್ವೀಕಾರ ಮಾಡಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿಯೂ ರೈತರ ಜೊತೆ ಸಭೆ ಮಾಡುತ್ತೇನೆ. ಎಲ್ಲಾ ಸಮಸ್ಯೆಯನ್ನು ಪರಿಹಾರ ಮಾಡುತ್ತೇನೆ. ಅಲ್ಲದೇ ಭತ್ತ ಖರೀದಿ ವಿಚಾರವನ್ನು ಶುಕ್ರವಾರ ತೀರ್ಮಾನ ಮಾಡುತ್ತೇನೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದು, ಇದರ ಜೊತೆ ಈರುಳ್ಳಿಗೂ ಬೆಂಬಲ ಬೆಲೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

 

ಎಫ್ಆರ್​ಪಿ ಹಣವನ್ನು ಪಾವತಿಸಲು ಜಿಲ್ಲಾಧಿಕಾರಿಗೆ ಸೂಚನೆ

ರೈತರೊಂದಿಗಿನ ಇಂದಿನ ಸಭೆ ಸುಸೂತ್ರವಾಗಿ ನಡೆದಿದೆ. ಯಾವುದೇ ಸಮಸ್ಯೆ ಇಲ್ಲದೇ ಶಾಂತ ರೀತಿಯಲ್ಲಿ ಸಭೆ ನಡೆದಿದೆ. 2,750 ಎಫ್ಆರ್​ಪಿ ದರವನ್ನು ನಿಗದಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಬಾಗಲಕೋಟೆ ಕಾರ್ಖಾನೆಗಳು 2,500 ರೂಪಾಯಿ ನೀಡಿಲ್ಲ. ಅದನ್ನು ತಕ್ಷಣ ಕೊಡಿಸಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಎಫ್ಆರ್​ಪಿಯಲ್ಲಿ 36 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಐದಾರು ವರ್ಷದಿಂದ 2,900 ಕೊಡುತ್ತೀವಿ ಎಂದು ಘೋಷಣೆ ಮಾಡಿ, ಇಲ್ಲಿಯವರೆಗೂ ಹಣ ನೀಡಿಲ್ಲ. ಆದ್ದರಿಂದ ಆ ಬ್ಯಾಲೆನ್ಸ್ ಹೆಚ್ಚಿದೆ.

ಮುಂದಿನ ವರ್ಷದಿಂದ ಶಾಶ್ವತ ಪರಿಹಾರ

450 ಕೋಟಿ ರೂಪಾಯಿ ಬಾಕಿ ಇದೆ ಎಂದು ರೈತರು ಹೇಳುತ್ತಿದ್ದಾರೆ. ಈ ಬಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯನ್ನು ತರಸಿಕೊಳ್ಳಲು ಅಧಿಕಾರಿಗೆ ಹೇಳಿದ್ದೇನೆ. ಮುಂದಿನ ವರ್ಷದಿಂದ ಶಾಶ್ವತ ಪರಿಹಾರ ಯೋಜನೆಯನ್ನು ಜಾರಿಗೆ ತರುತ್ತೇವೆಂದು ಹೇಳಿದರು.

 

 

ಕೊಟ್ಟ ಮಾತಿಗೆ ಮಾಲೀಕರು ನಡೆದುಕೊಳ್ಳಬೇಕು

ಈಗಾಗಲೇ ಸಭೆಯ ಮಾಹಿತಿಯನ್ನು ಕಾರ್ಖಾನೆ ಮಾಲೀಕರಿಗೂ ಕಳುಹಿಸಿದ್ದೇನೆ. ಕೊಟ್ಟ ಮಾತಿಗೆ ಮಾಲೀಕರು ನಡೆದುಕೊಳ್ಳಬೇಕು. ಮಾಲೀಕರು ಸರ್ಕಾರದ ಸಭೆಗೆ ಗೈರಾದರೆ, ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದು ನಮಗೆ ಗೊತ್ತಿದೆ. ನಮ್ಮ ಬಳಿ ಅವರ ಕೀಗಳು ಇವೆ. ಸಕ್ಕರೆ ಕಾರ್ಖಾನೆಗಳ ನಿಯಂತ್ರಣ ವಿಧೇಯಕದ ಲೋಪದೋಷಗಳನ್ನು ಸರಿಪಡಿಸುತ್ತೇವೆಂದು ತಿಳಿಸಿದರು.

ರೈತರ ಹೋರಾಟದ ಸಮಯದಲ್ಲಿ ಹಾಕಿದ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೇ ಈ ಬಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೀನಿ. ಸೋಮವಾರದ ಹೋರಾಟ ಸೇರಿದಂತೆ ಎಲ್ಲಾ ಕೇಸುಗಳನ್ನು ತೆಗೆಯುವ ಕುರಿತು ಕ್ಯಾಬಿನೆಟ್ ನಲ್ಲಿಯೇ ನಿರ್ಧಾರ ಮಾಡುತ್ತೇನೆಂದು ಸ್ಪಷ್ಟಪಡಿಸಿದರು.

Leave a Reply