ಸಿಎಂ ಕುಮಾರಸ್ವಾಮಿ ಅವರು ಇನ್ನೆಂದು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ ಎಂದು ಹೇಳಿದ್ದೇಕೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್…!

ಸಿಎಂ ಕುಮಾರಸ್ವಾಮಿ ಅವರಿಗೆ ಮಾಧ್ಯಮಗಳ ಮೇಲಿನ ಮುನಿಸು ತಣ್ಣಗಾಗುವಂತೆ ಕಾಣುತ್ತಿಲ್ಲ. ಗುರುವಾರ ಯಶವಂತಪುರ ಎಪಿಎಂಸಿ ವಾರ್ಡ್ ನಲ್ಲಿ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಸದುದ್ದೇಶದಿಂದ ಮಾತನಾಡುವುದನ್ನೂ ಮಾಧ್ಯಮಗಳಲ್ಲಿ ನಕಾರಾತ್ಮಕವಾಗಿ ಬಿಂಬಿಸುತ್ತೀರ. ಬಹುಷಃ ನಾನು ಪತ್ರಿಕಾ ಗೋಷ್ಠಿಯಲ್ಲಿ ಏನು ಮಾತನಾಡಬೇಕೆಂದು ಒಂದು ತಂಡ ರಚಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ  =ಎಂದು ವ್ಯಂಗ್ಯವಾಡಿದರು.

ನಾನು ಸಮಾರಂಭಗಳಲ್ಲಿ ವೇದಿಕೆ ಮೇಲೆ ಏನು ಮಾತನಾಡುತ್ತೇನೋ ಅಷ್ಟಕ್ಕೆ ಸೀಮಿತ ಪಡಿಸುತ್ತೇನೆ. ಮಾಧ್ಯಮಗಳನ್ನು ಉದ್ದೇಶಿಸಿ ಇನ್ನು ಮುಂದೆ ಎಂದಿಗೂ ಮಾತನಾಡುವುದಿಲ್ಲ. ಪತ್ರಿಕೆ ಗೋಷ್ಠಿಯನ್ನು ಸಹ ನಡೆಸುವುದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮಾಧ್ಯಮಗಳ ವಿರುದ್ಧ ಇಷ್ಟರ ಮಟ್ಟಿಗೆ ಕಿಡಿಕಾರಲು ಕರಣವಾದರು ಏನು?

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳುಗಳಾಗಿವೆ. ಆರು ತಿಂಗಳಲ್ಲಿ ರೈತರ ಸಾಲ ಮನ್ನಾ, ಜನತಾ ದರ್ಶನ, ಬಡವರ ಬಂಧು ಯೋಜನೆ , ಹೀಗೆ  ಹಲವಾರು ಜನಪರ ಯೋಜನೆಗಳ ಮೂಲಕ ರಾಜ್ಯದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಾಧ್ಯಮಗಳು ಮಾತ್ರ ಕುಮಾರಸ್ವಾಮಿ ಅವರ ಹೆಸರಿಗೆ ಮಸಿ ಬಳಿಯುವಂತ ಕೆಲಸ ಮಾಡುತ್ತಿದ್ದಾರೆ. ಮೊಸರಿನಲ್ಲಿ ಕಲ್ಲು ಹುಡುಕುವಂತೆ, ಅವರ ಪ್ರತಿ ಹೇಳಿಕೆಯಲ್ಲೂ ತಪ್ಪು ಹುಡುಕುತ್ತಿದ್ದಾರೆ. ಅಲ್ಲದೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.

ಜುಲೈ ತಿಂಗಳಲ್ಲಿ ಮಾಧ್ಯಮಗಳು ತಮ್ಮ ಚರ್ಚೆಗಳ ಮೂಲಕ ಉತ್ತರ ಕರ್ನಾಟಕದಲ್ಲಿ ಅನಾವಶ್ಯಕ ಚಳುವಳಿಗಳಿಗೆ ಕಾರಣರಾಗಿದ್ದು, ಕುಮಾರಸ್ವಾಮಿ ಅವರಿಗೆ ತೀವ್ರ ಆಕ್ರೋಶ ಉಂಟು ಮಾಡಿದೆ. ನಂತರ ಗುಲ್ಬರ್ಗದಲ್ಲಿ ಸಿಎಂ ಲೋಡ್ ಶೆಡ್ಡಿಂಗ್ ಗೆ ಆದೇಶ ನೀಡಿದ್ದಾರೆ ಎಂದು ಸುಳ್ಳು ವದಂತಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಕೂಡ ಕುಮಾರಸ್ವಾಮಿ ಅವರಿಗೆ ಬಹಳ ಬೇಸರ ಉಂಟು ಮಾಡಿತು. ‘ ಸರ್ಕಾರ ತಪ್ಪು ಮಾಡಿದಾಗ ಬೇಕಾದರೆ ನೀವು ಟೀಕಿಸಿ. ಆದರೆ ನಿಮ್ಮ ಬೇಳೆ ಬೆಯ್ಯಿಸಿಕೊಳ್ಳಲು ನಮ್ಮ ಸರ್ಕಾರದ ಹೆಸರಿಗೆ ಮಸಿ ಬಳಿಯಬೇಡಿ ‘ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಇತ್ತೀಚೆಗಷ್ಟೇ ಕಬ್ಬು ಬೆಳೆಗಾರರು ಮಾಡಿದ  ಹೋರಾಟದ ಕುರಿತು ಕುಮಾರಸ್ವಾಮಿ ಅವರು ಮಾತನಾಡುವಾಗ ‘ ಇಷ್ಟು ದಿನ ಎಲ್ಲಿ ಮಲಗಿದ್ದೆ ತಾಯಿ ‘ ಎಂಬ ಹೇಳಿಕೆಯನ್ನು  ‘ಇಷ್ಟು ದಿನ ಯಾರ ಜೊತೆಯಲ್ಲಿ ಮಲಗಿದ್ದೆ ‘ ಎಂಬ ರೀತಿಯಲ್ಲಿ ಮಾಧ್ಯಮಗಳು ಬಿಂಬಿಸಿದವು.

ಇದಕ್ಕೆ ಮನನೊಂದ ಎಚ್.ಡಿ ಕುಮಾರಸ್ವಾಮಿ ಅವರು ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Leave a Reply