ಸ್ವಯಂ ಉದ್ಯೋಗ ಮಾಡಿ ನಿಮಗೆ ನೀವೇ ‘ಬಾಸ್’ ಆಗಲು ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಸಾಲ….!

ಪ್ರತಿಯೊಬ್ಬನಿಗೂ ತನ್ನ ಜೀವನದಲ್ಲಿ ಉತ್ತಮ ಮಟ್ಟಕ್ಕೆ ತಲುಪಲು ಒಂದು ಸದವಾಕಾಶ ದೊರಕುತ್ತದೆ. ಆದರೆ ಅದನ್ನು ಕೆಲವರು ಮಾತ್ರ ಉಪಯೋಗಿಸಿಕೊಂಡು, ಮಹಾನ್ ಸಾಧಕರಾಗುತ್ತಾರೆ. ರಾಜ್ಯದ ಜನರು ಬೆಳೆದರೆ, ರಾಜ್ಯವೇ ಬೆಳೆದಂತೆ. ರಾಜ್ಯದ ಪ್ರಗತಿಗೆ ದುಡಿಯುತ್ತಿರುವ ಸಿಎಂ ಕುಮಾರಸ್ವಾಮಿ ಹಾಗು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ಈಗ ರಾಜ್ಯದ ಪ್ರತಿಯೊಬ್ಬನಿಗೂ ಅಂತಹ ಒಂದು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ನಿಮಗೆ ಇಡೀ ಜಗತ್ತೇ ತಿರುಗಿ ನೋಡುವಂತಹ ಒಂದು ಉದ್ಯಮ ಮಾಡುವ ಸಾಮರ್ಥ್ಯವಿದ್ದರೂ, ಆ ಉದ್ಯಮ ಪ್ರಾರಂಭಿಸಲು ಹಣದ ಕೊರತೆ ಎದುರಾಗಿ ನಿಮ್ಮ ಜೀವನದ ಅಮೂಲ್ಯ ಕನಸ್ಸುಗಳು ನುಚ್ಚು ನೂರಾಗಬಹುದು. ಇದಕ್ಕೆ ಈಗ ಕರ್ನಾಟಕ ರಾಜ್ಯ ಸರ್ಕಾರ ‘ಕಾಯಕ’ ಯೋಜನೆಯ ಮೂಲಕ ಸೂಕ್ತ ಪರಿಹಾರ ಒದಗಿಸಕೊಟ್ಟಿದೆ.

೧೦ ಲಕ್ಷದವರೆಗೆ ಸಾಲ….!

ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗು ಎಸ್. ಆರ್ ಶ್ರೀನಿವಾಸ್ ಅವರು ರೂಪಿಸಿರುವ ‘ಕಾಯಕ’ ಯೋಜನೆಯಡಿ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ರೂ.10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.

 

 

ಸಾಲ ಕೊಡುತ್ತಾರೆ…ಅದರಲ್ಲಿ ಏನ್ ಇದೆ ದೊಡ್ಡ ವಿಷಯ…?’

‘ಸಾಲ ಕೊಡುತ್ತಾರೆ…ಅದರಲ್ಲಿ ಏನ್ ಇದೆ ದೊಡ್ಡ ವಿಷಯ…?’ಎಂದು ನೀವು ಅಂದು ಕೊಳ್ಳಬಹುದು. ಆದರೆ ಕುಮಾರಸ್ವಾಮಿ ಅವರು ಹಾಗು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ರೂಪಿಸಲಾಗಿರುವ ಈ ಯೋಜನೆಯಲ್ಲಿ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ರೂ.10 ಲಕ್ಷದವರೆಗೆ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಬಹುದು 

ಆಹಾರ ಉತ್ಪನ್ನಗಳ ತಯಾರಿಕೆ, ಮಡಕೆ ಮತ್ತು ಅದರ ಉಪ ಉತ್ಪನ್ನಗಳು, ಗಾರ್ಮೆಂಟ್ಸ್‌, ಅಡಿಕೆ ಹಾಳೆಯ ವಿವಿಧ ಉತ್ಪನ್ನಗಳ ತಯಾರಿಕೆ ಸೇರಿ ಹಲವು ಬಗೆಯ ಸಣ್ಣ ಉದ್ಯಮಗಳನ್ನು ಆರಂಭಿಸಲು ಸಾಲ ನೀಡಲಾಗುತ್ತದೆ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಬಹುದು’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

 

 

ಚಾಲನೆ ಎಂದು?

ಸ್ವಸಹಾಯ ಗುಂಪುಗಳ ಮೂಲಕ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ರೂ.10 ಲಕ್ಷದವರೆಗೆ ಸಾಲ ನೀಡುವ ‘ಕಾಯಕ’ ಯೋಜನೆಗೆ ರಾಜ್ಯ ಸರ್ಕಾರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಿದೆ.

ಹೀಗಾಗಿ ನಿಮಗೆ ಸ್ವ ಉದ್ಯೋಗ ಮಾಡುವ ಆಸೆ ಇದ್ದು, ಹಣದ ಕೊರತೆ ಎದುರಿಸುತ್ತಿದ್ದರೆ ಸಿಎಂ ಕುಮಾರಸ್ವಾಮಿ ಅವರು ಹಾಗು ಎಸ್.ಆರ್ ಶ್ರೀನಿವಾಸ್ ಅವರು ರೂಪಿಸಿರುವ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ.

 

 

One thought on “ಸ್ವಯಂ ಉದ್ಯೋಗ ಮಾಡಿ ನಿಮಗೆ ನೀವೇ ‘ಬಾಸ್’ ಆಗಲು ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಸಾಲ….!

  1. Good job sar I am hadsape u sar

Leave a Reply