‘ದಯವಿಟ್ಟು ಕ್ಷಮಿಸಿ’ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಕ್ಷಮೆಯಾಚಿಸಿದ ಡಾ. ವಿಷ್ಣುವರ್ಧನ್ ಅವರ ಪತ್ನಿ ಹಾಗು ಅಳಿಯ….!

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ವಿಷಯದಲ್ಲಿ ತಕರಾರಿರುವುದು ಎಲ್ಲರಿಗೂ ಗೊತ್ತೇ ಇದೆ. ಡಾ. ವಿಷ್ಣುವರ್ಧನ್ ಅವರು ಅಗಲಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ವಿಷ್ಣು ಸ್ಮಾರಕ ನಿರ್ಮಾಣದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದ ಕಾರಣ ಈ ಸಮಸ್ಯೆ ಪರಿಹಾರ ಮಾಡಲಾಗದಷ್ಟು ದೊಡ್ಡದಾಗಿ ಬೆಳೆದಿದೆ.

ಇವರು ಉಡಾಫೆ ಸಿಎಂ…!

ನೊ.24 ರಂದು ಡಾ. ಅಂಬರೀಷ್ ಅವರು ನಿಧನರಾದಾಗ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಸಕಲ ಗೌರವದಿಂದ ಯಾವುದೇ ರೀತಿಯ ಗಲಾಟೆ ಆಗದಂತೆ ನೋಡಿಕೊಂಡು, ಅವರ ಅಂತಿಮ ಸಂಸ್ಕಾರ ಸುಲಲಿತವಾಗಿ ನಡೆಯುವಂತೆ ಮಾಡಿದ ಸಿಎಂ ಎಚ್. ಡಿ ಕುಮಾರಸ್ವಾಮಿ ಅವರು ‘ ಡಾ. ರಾಜಕುಮಾರ್ ಅವರ ಸ್ಮಾರಕದ ಪಕ್ಕದಲ್ಲೇ ಡಾ. ವಿಷ್ಣುವರ್ಧನ್ ಹಾಗು ಡಾ. ಅಂಬರೀಷ್ ಅವರ ಸ್ಮಾರಕವನ್ನು ನಿರ್ಮಾಣ ಮಾಡುತ್ತೇವೆ ‘ ಎಂದು ಹೇಳಿದರು. ಆದರೆ ೯ ವರ್ಷಗಳಿಂದ ಸ್ಮಾರಕ ನಿರ್ಮಾಣಕ್ಕಾಗಿ ಹೆಣೆದಡುತ್ತಿರುವ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುಧ್ ‘ ಇವರು ಉಡಾಫೆ ಸಿಎಂ. ಸರ್ಕಾರಕ್ಕೆ ಮಾನ ಮರ್ಯಾದಿ ಇದ್ದರೆ ಸ್ಮಾರಕ ಕಟ್ಟಿಸಲಿ ‘ ಎಂದು ಕಿಡಿ ಕಾರಿದ್ದರು.

 

 

ಪದಬಳಿಕೆಯ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು…!!

ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ‘ ವಿಷ್ಣುವರ್ಧನ್ ಅವರೊಂದಿಗೆ ನಮ್ಮ ಕುಟುಂಬಕ್ಕೆ ಒಂದು ಭಾವನಾತ್ಮಕ ಸಂಬಂಧವಿತ್ತು. ಇದೇ ಕಾರಣಕ್ಕೆ ವಿಷ್ಣುವರ್ಧನ್ ಅವರು ನಿಧನರಾದಾಗಲೂ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಖುದ್ದಾಗಿ ನಾನೇ ಕರೆ ಮಾಡಿ ಡಾ. ರಾಜಕುಮಾರ್ ಅವರ ಸ್ಮಾರಕದ ಪಕ್ಕದಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಟ್ಟಿಸಿ ಎಂದು ಮನವಿ ಮಾಡಿದ್ದೆ. ಈ ಇಬ್ಬರು ದಿಗ್ಗಜರ ಸ್ಮಾರಕವನ್ನು ಕಟ್ಟಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದೇನೆ. ಅನಿರುಧ್ ಅವರು ಪದಬಳಿಕೆ ಮಾಡುವ ಮುನ್ನ ಅದು ಬೀರುವ ಪ್ರಭಾವದ ಬಗ್ಗೆ ಆಲೋಚಿಸಬೇಕು’ ಎಂದು ಖಾರವಾಗೇ ಮಾತನಾಡಿದರು.

 

 

ನಾನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿಲ್ಲ ದಯವಿಟ್ಟು ಕ್ಷಮಿಸಿ…!

ಅನಿರುಧ್ ಅವರ ನಿರ್ಲಕ್ಷ್ಯ ಪದಬಳಿಕೆಯ ಬಗ್ಗೆ ಮಾಧ್ಯಮಗಳು ಅವರನ್ನು ಸಂಪರ್ಕಿಸಿದಾಗ ” ನಾನು ಒಂಬತ್ತು ವರ್ಷ ಕಾದಿರುವ ನೋವ್ವಿನಿಂದ ಆ ರೀತಿ ಮಾತನಾಡಿದೆ. ಆದರೆ ನಂತರ ನನಗೆ ನಾನು ಮಾತನಾಡಿದ ರೀತಿ ತಪ್ಪು ಎಂದು ಅರಿವಾಯಿತು. ನಾನು ಪ್ರಸ್ತುತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿಲ್ಲ.  ಸರ್ಕಾರದ ಬಗ್ಗೆ ಮಾತನಾಡಿದ್ದು. ನನಗೆ ಅವರ ಮೇಲೆ ನಂಬಿಕೆಯಿದೆ. ನನ್ನ ನಡುವಳಿಕೆಯಿಂದ ಕುಮಾರಸ್ವಾಮಿ ಅವರಿಗೆ ಬೇಸರವಾಗಿದ್ದರೆ, ದಯವಿಟ್ಟು ಕ್ಷಮಿಸಿ ‘ ಎಂದು ಕ್ಷಮೆಯಾಚಿಸಿದರು.

ನಿಮ್ಮ ಮನಸ್ಸಿಗೆ ಬೇಸರವಾಗಿದ್ದರೆ ಕ್ಷಮಿಸಿ…! 

ನಂತರ ಇದರ ಬಗ್ಗೆ ಮಾಧ್ಯಮಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಭಾರತಿ ವಿಷ್ಣುವರ್ಧನ್ ಅವರು ‘ ನನ್ನ ಅಳಿಯ ಅನಿರುಧ್ ಮಾತನಾಡಿದ ರೀತಿ ಕೇಳಿ ನನಗೆ ಆಶ್ಚರ್ಯವಾಯಿತು. ಅವರ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಸಿಎಂ ಕುಮಾರಸ್ವಾಮಿ ಅವರ ಮನಸ್ಸಿಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಅವರು ಸಹ ಕ್ಷಮೆ ಕೋರಿದರು.

Leave a Reply