ಉದ್ಯೋಗ ಸೃಷ್ಟಿಯಲ್ಲಿ ದೇಶದಲ್ಲಿ ಕರ್ನಾಟಕ ಯಾವ ಸ್ಥಾನದಲ್ಲಿದೆ ಗೊತ್ತಾ…?

ಅಖಂಡ ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯೇ ದೊಡ್ಡ ತಲೆ ನೋವ್ವು. ಹೆಚ್ಚುತ್ತಿರುವ ಜನಸಂಖ್ಯೆಗೆ ಉದ್ಯೋಗ ಸೃಷ್ಟಿಸುವುದಕ್ಕೆ ದೇಶದ ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ, ಉತ್ತಮ ನಾಯಕತ್ವ ಹಾಗು ಎಲ್ಲಾ ಕ್ಷೇತ್ರದ ಬಗ್ಗೆಯೂ ಒಂದು ಕನಿಷ್ಠ ತಿಳುವಳಿಕೆ. ನಮ್ಮ ರಾಜ್ಯ ಕರ್ನಾಟಕ ಅಂತಹ ಒಂದು ನಾಯಕನನ್ನು ಪಡೆದುಕೊಂಡಿದೆ ಎಂದು ಗರ್ವದಿಂದ ಹೇಳಿಕೊಳ್ಳಬಹುದು.

ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕರ್ನಾಟಕ ರಾಜಧಾನಿ ‘ಸ್ಟಾರ್ಟ್ ಅಪ್’ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರ ಉದ್ಯೋಗ ಸೃಷ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕರ್ನಾಟಕದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸಿ ರಾಜ್ಯದ ಪ್ರತಿ ನಾಗರಿಕನಿಗೂ ದುಡಿಯುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಪಣ ತೊಟ್ಟಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಕರ್ನಾಟಕ ರಾಜ್ಯವನ್ನು ನಂಬರ್ ೧ ಸ್ಥಾನಕ್ಕೆ ತಲುಪಿಸಿದ್ದಾರೆ.

ನಮ್ಮ ನಂತರದಲ್ಲಿ ತಮಿಳುನಾಡು ರಾಜಧಾನಿ ಚೆನ್ನೈಯಿದ್ದು, ಉಳಿದಂತೆ ಗುಂಟೂರು, ಲಕ್ನೋ, ಮುಂಬಯಿ, ನವದೆಹಲಿ, ನಾಸಿಕ್, ಪುಣೆ, ವಿಶಾಖಪಟ್ಟಣ, ಥಾಣೆಯಿದೆ.

                                                               ಉದ್ಯೋಗ ಮೇಳದ ಒಂದು ದೃಶ್ಯ 

ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಈ ವರ್ಷವೂ ಹೆಚ್ಚು ಉದ್ಯೋಗ ಸೃಷ್ಟಿಸುವ ಅವಕಾಶವಿದೆ ಎಂದು ಅಭಿಪ್ರಾಯಿಸಲಾಗಿದೆ.
ಪೀಪಲ್ ಸ್ಟ್ರಾಂಗ್, ವೀಬಾಕ್ಸ್ ಹಾಗೂ ಸಿಐಐ ಸಹಯೋಗದಲ್ಲಿ ಸ್ಕಿಲ್ ಇಂಡಿಯಾ ಸಿದ್ದಪಡಿಸಿದ ಸಮೀಕ್ಷೆಯಲ್ಲಿ ವಿವಿಧ ಪದವಿ ವ್ಯಾಸಂಗ ಮಾಡುತ್ತಿರುವ ದೇಶದ ಎಲ್ಲ ರಾಜ್ಯಗಳ ಮೂರು ಲಕ್ಷ ವಿದ್ಯಾರ್ಥಿಗಳು ಭಾಗವಹಿಇಸಿದ್ದು ಈ ಎಲ್ಲಾ ವಿದ್ಯಾರ್ಥಿಗಳ ಹಾಗೂ ವಿವಿಧ ಕೈಗಾರಿಕಾ ಪ್ರತಿನಿಧಿಗಳಿಂದ ಮಾಹಿತಿ ಪಡೆದು ಈ ವರದಿಯನ್ನು ಸಿದ್ದಪಡಿಸಲಾಗಿದೆ.

Leave a Reply