ಪತ್ರಿಕೋದ್ಯಮದ ನೈತಿಕತೆ ಮರೆತಿರುವ TV5 ಸುದ್ದಿ ವಾಹಿನಿಗೆ ಜೆಡಿಎಸ್ ಕಾರ್ಯಕರ್ತರು ಚಳಿ ಬಿಡಿಸಿದ ವಿಡಿಯೋ ಈಗ ವೈರಲ್…..!

ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಸುದ್ದಿ ವಾಹಿನಿಗಳನ್ನು ನಿಯಮಿತವಾಗಿ ವೀಕ್ಷಿಸುತ್ತಾರೆ. ಹೀಗಿರುವಾಗ ಸುದ್ದಿ ಬಹುಬೇಗ ಬಿತ್ತರಿಸಬೇಕೆಂದು ಮಾಧ್ಯಮಗಳ ನಡುವೆ ಇರುವ ತೀವ್ರ ಪೈಪೋಟಿ, ಧಾವಂತ, ಒತ್ತಡಗಳಿಂದ ವರದಿಗಳಲ್ಲಿ ಸಾಕಷ್ಟು ಪ್ರಮಾದ ನಡೆಯುವುದು ಸಹಜ ಹಾಗು ನಿರ್ಲಕ್ಷಿಸಬಹುದಾದ ತಪ್ಪು. ಆದರೆ ಟಿಆರ್ ಪಿಗಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದು ಅಕ್ಷಮ್ಯ ಅಪರಾಧ. ಒಬ್ಬ ವ್ಯಕ್ತಿಯ ಮೇಲೆ ಅಪಪ್ರಚಾರ ಮಾಡುವ, ಪತ್ರಿಕೋದ್ಯಮದ ನೈತಿಕತೆ ಮರೆತಿರುವ ಇಂತಹ ಸುದ್ದಿ ವಾಹಿನಿಗಳು ಸಮಾಜಕ್ಕೆ ಕಂಟಕ.

ಮುಖ್ಯಮಂತ್ರಿ ರಾಜೀನಾಮೆ…!

TV5 ಎಂಬ ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದು ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕೆತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಹೀಗಾಗಿ ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ನೆನ್ನೆ (ಬುಧವಾರ) ಸಂಜೆ ಸುಮಾರು 6 ಘಂಟೆಯಿಂದ ನಿರಂತರವಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಈ ಕಾರ್ಯಕ್ರಮದ ನಿರೂಪಕ ದಶರಥ್, ‘ಇದು ಸುಳ್ಳು ಸುದ್ದಿಯಲ್ಲ ಅಲ್ಲ, ಅಕ್ಷರಶಃ ಸತ್ಯ’ ಎಂದು ಕಾರ್ಯಕ್ರಮದ ಉದ್ದಕ್ಕೂ ಹೇಳಿದ್ದು, ನಿಜಕ್ಕೂ ಹಾಸ್ಯಾಸ್ಪದ ಹಾಗು ಇದರಿಂದ ಅವರು ನಗೆಪಾಟಲಾಗಿದ್ದಾರೆ.

 

 

TV5 ವಿರುದ್ಧ ದೂರು ದಾಖಲು…!

ಮುಖ್ಯಮಂತ್ರಿ ಅವರು ಸಂಪೂರ್ಣವಾಗಿ ಆರೋಗ್ಯಕರವಾಗಿದ್ದರೆ. ದಿನಕ್ಕೆ ಸುಮಾರು 14 ರಿಂದ 16 ಘಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ಯೋಜನೆಗಳನ್ನು ಜಾರಿಗೊಳಿಸಿ, ಸರ್ಕಾರಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಹೀಗಿರುವಾಗ ಅನಾರೋಗ್ಯದಿಂದ ಅವರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿ ರಾಜ್ಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ TV5 ವರದಿಗಾರರು ಹಾಗು ಮುಖ್ಯಸ್ಥರ ವಿರುದ್ಧ ಕಾನೂನು ರೀತ್ಯ  ಸೂಕ್ತ ಕ್ರಮ ಕೈಗೊಂಡು ಸಮಾಜದ ಸ್ವಾಸ್ತ್ಯ ಕಾಪಾಡಬೇಕೆಂದು ಪೊಲೀಸರಿಗೆ ಜೆಡಿಎಸ್ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ.

ಚಳಿ ಬಿಡಿಸಿದ ಜೆಡಿಎಸ್ ಕಾರ್ಯಕರ್ತರು…!

ತಮ್ಮ ಬೇಳೆ ಬೆಯ್ಯಿಸಿಕೊಳ್ಳಲು, ತಾವು ಪ್ರಸಾರ ಮಾಡುವ ಸುಳ್ಳು ಸುದ್ದಿಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸದೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಅಪಪ್ರಚಾರ ಮಾಡಿರುವ TV5 ಸುದ್ದಿ ವಾಹಿನಿಯ ಕಚೇರಿ ಎದುರು ಇಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು TV5 ಸುದ್ದಿ ವಾಹಿನಿಯ ವರದಿಗಾರರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

 

 

Leave a Reply