ಹನುಮಂತನನ್ನು ದಲಿತ ಎಂದು ಕರೆದ ಬಿಜೆಪಿ ನಾಯಕ…!

ಹಿಂದುತ್ವವನ್ನು ಬಂಡವಾಳ ಮಾಡಿಕೊಂಡು ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಪ್ರಯತ್ನಿಸುವ ಬಿಜೆಪಿ ನಾಯಕರ ಅಸಲಿ ‘ಹಿಂದುತ್ವ’ ಹಲವು ಬಾರಿ ಜನರ ಮುಂದೆ ಬಯಲಾಗಿದೆ. ಬಿಜೆಪಿ ನಾಯಕರು ಜಾತಿಭೇದ ಮಾಡುವ ನೀಚ ಬುದ್ಧಿ ಉಳ್ಳವರು ಎಂದು ಸಹ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈಗ ಜಾತಿಬೇಧ ಮಾಡುವುದರಲ್ಲಿ ಬಿಜೆಪಿ ನಾಯಕರು ಹೊಸ ಹಂತವನ್ನೇ ತಲುಪಿದ್ದಾರೆ. ಮೊದಲು ಕೇವಲ ಜನಸಾಮಾನ್ಯರಲ್ಲಿ ಜಾತಿಬೇಧ ಮಾಡುತ್ತಿದ್ದ ಬಿಜೆಪಿ ನಾಯಕರು ಈಗ ದೇವರನ್ನು ಕೂಡ ಜಾತಿ ಹೆಸರಿನಲ್ಲಿ ಕಡೆಗಣಿಸವಂತಹ ನೀಚ ಮಟ್ಟಕ್ಕೆ ತಲುಪಿದ್ದಾರೆ! ಹೌದು ಇದು ಎಲ್ಲರ ಹುಬ್ಬೇರಿಸುವಂತಹ ಸುದ್ದಿ. ವಿರೋಧ ಪಕ್ಷದ ನಾಯಕರು ಬಿಜೆಪಿಯ ಡಾಂಭಿಕ ಹಿಂದುತ್ವವನ್ನು ಎಷ್ಟೇ ಟೀಕಿಸಿದರೂ, ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸರಲಿಲ್ಲ.

ಹನುಮಂತ ಒಬ್ಬ ದಲಿತ…!

ಬಿಜೆಪಿ ನಾಯಕ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಅಲ್ವಾರ್ ಜಿಲ್ಲೆಯ ಮಾಳಖೇಡದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದರು. ಈ ವೇಳೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಹನುಮಂತ ಒಬ್ಬ ಅರಣ್ಯ ನಿವಾಸಿ. ರಾಮನ ಆಶಯದಂತೆ ಎಲ್ಲರನ್ನು ಒಂದುಗೂಡಿಸುವುದು ಹನುಮಂತನ ನಿರ್ಧಾರವಾಗಿತ್ತು. ಹೀಗಾಗಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಭಾರತೀಯ ಸಮುದಾಯಗಳನ್ನು ಸಂಪರ್ಕಿಸುವ ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದಾರೆ. ಜನರಲ್ಲಿ ಜಾತಿಬೇಧ ಮಾಡುವುದನ್ನು ನಾವು ಕೇಳಿರುತ್ತೇವೆ. ಆದರೆ ತಮ್ಮ ರಾಜಕೀಯ ಬಂಡವಾಳಕ್ಕಾಗಿ ದೇವರನ್ನು ಸಹ ಜಾತಿ ಹೆಸರಿನಲ್ಲಿ ಕಡೆಗಣಿಸಿ ಸಮಾಜದಲ್ಲಿ ಒಡಕು ಮೂಡಿಸುವಂತಹ ನೀಚ ರಾಜಕಾರಣವನ್ನು ಇದೆ ಮೊದಲ ಬಾರಿಗೆ ಕೇಳುತ್ತಿದ್ದೇವೆ.

 

 

ಯೋಗಿ ಆದಿತ್ಯನಾಥ್ ಗೆ ನೋಟೀಸ್…!

ಯೋಗಿ ಅವರ ಹೇಳಿಕೆಯಿಂದಾಗಿ ಹನುಮಂತನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ರಾಜಕೀಯ ಲಾಭಕ್ಕಾಗಿ ದೇವರ ಹೆಸರನ್ನು ಬಳಸಿಕೊಳ್ಳುವುದು ಸರಿಯಲ್ಲ. ಹೀಗಾಗಿ ಮೂರು ದಿನಗಳ ಒಳಗಾಗಿ ಯೋಗಿ ಆದಿತ್ಯನಾಥ್ ಕ್ಷಮೆ ಕೇಳಬೇಕು ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

Leave a Reply