ರಾಜನಾಗಿ ಬಾಳಿದವರನ್ನು ರಾಜನಾಗೆ ಕಳುಹಿಸಿಕೊಟ್ಟ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದ – ಸುಮಲತಾ ಅಂಬರೀಷ್

ಕರ್ನಾಟಕ ಜನತೆ ಅತ್ಯಂತ ಪ್ರೀತಿಸುವ ನಟ ಹಾಗು ರಾಜಕಾರಣಿ ರೆಬೆಲ್ ಸ್ಟಾರ್ ಡಾ. ಅಂಬರೀಷ್ ಅವರು ಈಗ ನಮ್ಮ ಮನದಲ್ಲಿ ಕೇವಲ ನೆನಪಾಗಿ ಉಳಿದಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ಸಕಲ ಗೌರವಗಳಿಂದ, ಕೇವಲ ಜವಾಬ್ದಾರಿಯಂತೆ ಕಾಣದೆ ಪ್ರೀತಿ ಗೌರವದಿಂದ ಸುಲಲಿತವಾಗಿ ನಡೆಯುವಂತೆ ನೋಡಿಕೊಂಡ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ಸೇವೆ ಶ್ಲಾಘನೀಯ. ಇಂದು ಕನ್ನಡ ಚಲನಚಿತ್ರವಾಣಿಜ್ಯ ಮಂಡಳಿ ಮತ್ತು ಚಿತ್ರೋದ್ಯಮದಿಂದ ಹಮ್ಮಿಕೊಂಡಿದ್ದ ‘ಅಂಬಿ ನಮನ’ ಶ್ರಧಾಂಜಲಿ  ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ, ಅಂಬರೀಶ್ ಅವರ ಪತ್ನಿ ಸುಮಲತಾ, ಮಗ ಅಭಿಷೇಕ್ ಉಪಸ್ಥಿತರಿದ್ದರು.

 

 

ರಾಜನಾಗಿ ಬಾಳಿದವರು ರಾಜನಾಗೆ ಹೋದರು…!

ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಅವರು “ಅಂಬರೀಷ್ ಅವರನ್ನು ಎಂದಿಗೂ ‘ನನ್ನ ಅಂಬರೀಷ್’ ಎಂದು ಹೇಳಿಕೊಳ್ಲಲು ಆಗಲಿಲ್ಲ. ಏಕೆಂದರು ಅವರು ನಿಮ್ಮ ಅಂಬರೀಷ್. ಅಭಿಮಾನಿಗಳ ಅಂಬರೀಷ್ ಆಗಿ ಬಾಳಿದವರು. ರಾಜನಾಗಿ ಬದುಕಿದ ಅವರನ್ನು, ರಾಜನಾಗೆ ಹೋಗುವಂತ ಅವಕಾಶ ಕಲ್ಪಿಸಿಕೊಟ್ಟ ನಮ್ಮ ಮುಖ್ಯಮಂತ್ರಿ ಕುಮಾರಣ್ಣ ಅವರಿಗೆ ನಾನು ಕೈ ಮುಗಿದು ನಮನ ಸಲ್ಲಿಸುತ್ತೇನೆ. ಮಂಡ್ಯ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಅಂಬರೀಷ್’ರವರನ್ನು ಮಂಡ್ಯದ ಮಣ್ಣಿಗೆ ತಾಗಿಸಿದ ಸಿಎಂ ಕುಮಾರಣ್ಣನವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಅಲ್ಲದೆ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಕಾಪಾಡಿದ ಕರ್ನಾಟಕ ಪೊಲೀಸ್ ಅಧಿಕಾರಿಗಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ.” ಎಂದು ಹೇಳಿದರು.

 

 

ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ….!

ನಂತರ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ‘ ಚಿತ್ರರಂಗಕ್ಕೆ ಹಾಗು ರಾಜಕೀಯಕ್ಕೆ ಅಂಬರೀಷ್ ಅವರ ಕೊಡುಗೆ ಅಪಾರ. ಅಂಬರೀಷ್ ಅವರನ್ನು ನಾನು ರಾಜಕೀಯಕ್ಕೆ ಬರುವ ಮೊದಲೇ ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಹುಡುಗಾಟವೇ ಅವರ ವ್ಯಕ್ತಿತ್ವಕ್ಕೆ ಭೂಷಣ….’ ಎಂದು ಹೇಳಿ ಅಂಬರೀಷ್ ಅವರಿಗೆ ಶ್ರಧಾಂಜಲಿ ಅರ್ಪಿಸಿದರು.

Leave a Reply