ರೂಪಾಯಿ ಮೌಲ್ಯ ಡಾಲರ್ ಎದುರು ಹೀನಾಯವಾಗಿ ಕುಸಿತ ,ಮುಗಿಲು ಮುಟ್ಟಿರುವ ತೈಲ ಬೆಲೆ, ಗ್ಯಾಸ್ ಸ್ಟವ್ ಹತ್ತಿಸುವ ಮುನ್ನ ನೂರು ಬಾರಿ ಯೋಚನೆ ಮಾಡುವಷ್ಟು ಎಲ್ ಪಿಜಿ ಗ್ಯಾಸ್ ಸಿಲೆಂಡರ್ ಗಳ ಬೆಲೆ ಏರಿಕೆ. ದೇಶದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ನಮಗೆ ದೊರೆತಿರುವ ‘ಅಚ್ಛೇ ದಿನ್’ ಇದು. ಸಾಮಾನ್ಯ ಪ್ರಜೆಗಳು ಜೀವನ ನಡೆಸೋಕೆ ಹೆಣಗಾಡುತ್ತಿರುವುದನ್ನು ಗಮನಿಸಿರುವ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ, ರಾಜ್ಯದ ಜನತೆಯ ಜೀವನ ಸುಧಾರಿಸಲು ‘ಅನಿಲ ಭಾಗ್ಯ’ ಜಾರಿಗೊಳಿಸುತ್ತಿದೆ.
ಏನಿದು ಅನಿಲ ಭಾಗ್ಯ ಯೋಜನೆ?
ಅನಿಲ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್ಪಿಜಿ), ಒಲೆ ವಿತರಿಸಲಾಗುವುದು.
ಎಲ್ಲಿ ಅರ್ಜಿ ಸಲ್ಲಿಸುವುದು?
ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಹೊಂದದಿರುವ ಬಿಪಿಎಲ್ ಕುಟುಂಬದವರು ಇದೇ ತಿಂಗಳಿನಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಆಹಾರ ಇಲಾಖೆ ಹಾಗೂ ಇದಕ್ಕೆ ಸಂಬಂಧಿತ ಅನಿಲ ವಿತರಕರು ಅರ್ಜಿಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಲಿದ್ದಾರೆ.
ಸೌಲಭ್ಯಗಳೇನು?
ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಂಡದ್ದು 30 ಲಕ್ಷ ಫಲಾನುಭವಿಗಳಿಗೆ 14.2 ಕೆ.ಜಿ ಸಿಲಿಂಡರ್, ಒಲೆ, ರೆಗ್ಯುಲೇಟರ್ ವಿತರಣೆ ಮಾಡಲಾಗುವುದು. ಅಲ್ಲದೆ ಈ ಯೋಜನೆ ಅಡಿ ಫಲಾನುಭವಿಗಳು ಎರಡು ಬಾರಿ ಉಚಿತವಾಗಿ ಸಿಲಿಂಡರ್ ಭರ್ತಿ ಮಾಡಿಕೊಡಲಾಗುವುದು.
ನೀವು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸುವುತಿರುವ ಈ ಯೋಜನೆಯಿಂದ ಸದುಪಯೋಗ ಪಡೆದುಕೊಳ್ಳಿ.