” ನಿಮ್ಮ ಬೆತ್ತಲೆ ಫೋಟೋ ನೀಡಿದರೆ ನೀವು ಕೇಳಿದಷ್ಟು ಸಾಲ ಕೊಡುತ್ತೇನೆ…!”

ಸಾಮಾನ್ಯವಾಗಿ ಸಾಲ ಪಡೆಯಬೇಕಾದರೆ ಆಸ್ತಿ ಪತ್ರ, ಚಿನ್ನಾಭರಣ ಸೇರಿದಂತೆ ಇತ್ಯಾದಿಗಳನ್ನ ಅಡ ಇಟ್ಟು ಸಾಲ ಪಡೆಯಲಾಗುತ್ತದೆ. ಆದರೆ ಚೀನಾದಲ್ಲಿ ನಗ್ನ ಫೋಟೋಗಳನ್ನು ಒತ್ತೆಯಾಗಿರಿಸಿಕೊಂಡು ಸಾಲ ನೀಡುವ ದಂಧೆ ಪತ್ತೆಯಾಗಿದೆ.

ಚೀನಾದಲ್ಲಿ ಇ-ಕಾಮರ್ಸ್ ಮೂಲಕ ‘ನಗ್ನ ಸಾಲ ಸೇವೆ’ ಎಂಬ ದಂಧೆ ನಡೆಯುತ್ತಿದೆ. ಈಗಾಗಲೇ ಚೀನಾದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ವಿದ್ಯಾರ್ಥಿಗಳು ಬೇಗ ಹಣ ಗಳಿಸಲು ಬೇರೆ ಬೇರೆ ಮಾರ್ಗ ಹುಡುಕುತ್ತಾರೆ. ಆದ್ದರಿಂದ ಈ ಕಂಪನಿ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಈ ದಂಧೆ ಆರಂಭಿಸಿದೆ.

ದಂಧೆ ಹೇಗೆ?
ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರಿಗಾಗಿ ಲೋನ್ ಸೌಲಭ್ಯವನ್ನು ಒದಗಿಸುತ್ತದೆ. ಬಳಿಕ ನಿಮ್ಮ ಬೆತ್ತಲೆ ಫೋಟೋವನ್ನು ಅಡವಿಟ್ಟರೆ ಮಾತ್ರ ಲೋನ್ ಸಿಗುತ್ತದೆ ಎಂದು ಡಿಮ್ಯಾಂಡ್ ಮಾಡುತ್ತದೆ. ಕಂಪನಿ ಬಡ ವಿದ್ಯಾರ್ಥಿಗಳಿಗೆ ಅಧಿಕ ಅವಕಾಶವನ್ನು ನೀಡುತ್ತದೆ. ಯಾಕೆಂದರೆ ಅವರು ಸಾಲ ಪಡೆದು ವಿದ್ಯಾಭ್ಯಾಸದ ಖರ್ಚನ್ನು ಭರಿಸಲು ಸಹಾಯವಾಗುತ್ತದೆ ಎಂದು ತಿಳಿದು ಬಂದಿದೆ. ಕೊನೆಗೆ ವಿದ್ಯಾರ್ಥಿಗಳು ನಗ್ನ ಫೋಟೋಗಳನ್ನು ಕಳುಹಿಸುತ್ತಾರೆ. ನಂತರ ಕಂಪನಿಗಳು ಸಾಲ ಕೊಡುತ್ತದೆ.

ಈ ರೀತಿಯಾಗಿ ಫೋಟೋ ಅಡವಿಟ್ಟು ಸಾಲವನ್ನು ಪಡೆದುಕೊಳ್ಳುತ್ತಾರೆ. ಆದರೆ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ವಾಪಸ್ ಕೊಡದೇ ಇದ್ದರೆ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ನಗ್ನ ಸೆಲ್ಫಿಯನ್ನು ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ ಸಾಲ ವಸೂಲಿ ಮಾಡಿಕೊಳ್ಳುತ್ತಾರೆ. ಬಳಿಕ ವಿದ್ಯಾರ್ಥಿಗಳು ಸಾಲ ಮರುಪಾವತಿಸದಿದ್ದರೆ ಇನ್ನು ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಈ ರೀತಿಯ ನಗ್ನ ಸಾಲಕ್ಕೆ ಅನೇಕ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

2016 ರಲ್ಲೇ ಇಂತಹ ನಗ್ನ ಸಾಲ ಸೌಲಭ್ಯ ಆರಂಭವಾಗಿದ್ದು, ಸಾಲ ಪಡೆದು ಮರುಪಾವತಿಸಿದ 161 ಯುವತಿಯರ 10 ಜಿಬಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು. ಯುವತಿಯರ ಐಡಿ ಕಾರ್ಡ್ ಜೊತೆ ನಗ್ನ ಫೋಟೋ ತೆಗೆಯಲಾಗಿತ್ತು. ಲೀಕ್ ಆಗಿದ್ದ ಫೋಟೋದಲ್ಲಿ 19 ಮತ್ತು 23 ವಯಸ್ಸಿನ ಯುವತಿಯರೇ ಅಧಿಕವಾಗಿದ್ದರು. ಈ ಯುವತಿಯರಿಗೆ ಸುಮಾರು 1 ರಿಂದ 2 ಸಾವಿರ ಡಾಲರ್ (69,770-1,39,540 ರೂ.) ಸಾಲ ಪಡೆದಿದ್ದರು. ಬಳಿಕ ಸಾಲ ಮರುಪಾವತಿ ಮಾಡದಿದ್ದರೆ ಕೊನೆಗೆ ಅವರನ್ನು ವೇಶ್ಯಾವೃತ್ತಿ ಮಾಡುವಂತೆ ಹೇಳುತ್ತಿದ್ದರು ಎಂದು ವರದಿಯಾಗಿದೆ.

ನಗ್ನ ಸಾಲ ಸೇವೆಗಳ ದಂಧೆ ಚೀನಾದಲ್ಲಿ ಹೆಚ್ಚಾಗಿದೆ. ಕೆಲವು ಕಂಪನಿಗಳು ಸಾಲ ಪಡೆದವರ ಬಳಿ ಬೇರೆ ಬೇರೆ ರೀತಿಯ ನಗ್ನ ಫೋಟೋ ಮತ್ತು ವಿಡಿಯೋ ಕಳುಸುವಂತೆ ಒತ್ತಾಯಿಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಪತ್ರಿಕೆಯೊಂದು ವಿದ್ಯಾರ್ಥಿಗಳು ತಮ್ಮ ಆದಾಯಕ್ಕಾಗಿ ನಗ್ನ ಸಾಲ ಸೇವೆಯಂತಹ ಪರ್ಯಾಯ ಮಾರ್ಗವನ್ನು ಹುಡುಕಬೇಕಿದೆ ಎಂದು ವರದಿ ಮಾಡಿರುವುದು ಚರ್ಚೆಯಾಗಿದೆ.

Leave a Reply