ದೇಶದ ಬೆನ್ನೆಲುಬು ಕುಸಿಯುತ್ತಿದ್ದರು ತುಟಿಕ್ ಪಿಟಿಕ್ ಅನ್ನದ ಪ್ರಧಾನಿ…!

ದೇಶದ ಬೆನ್ನೆಲುಬು ರೈತ ಅಕಾಲಿಕ ಮಳೆ ಹಾಗು ತಾನು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕದೆ, ಸಾಲದ ಸುಳಿಯಲ್ಲಿ ಸಿಲುಕಿ ನೇಣಿಗೆ ಶರಣಾಗುತ್ತಿದ್ದರು, ದೇಶದ ಪ್ರಧಾನಿ ಇದರ ಬಗ್ಗೆ ಯಾವುದೇ ಪರಿಹಾರ ಒದಗಿಸಿಕೊಡಲು ಕನಿಷ್ಠ ಪಕ್ಷ ಪ್ರಯತ್ನವು ಮಾಡುತ್ತಿಲ್ಲ.

ಇದೆ ಕಾರಣದಿಂದಾಗಿ ಶಾಂತಿಪ್ರಿಯ ರೈತರು ಹಾಗು ಅವರ ಕುಟುಂಬದವರು ಮೋದಿಯ ವಿರುದ್ಧ ದಂಗೆ ಎದಿದ್ದಾರೆ. ದೇಶದ ಎಲ್ಲಾ ರಾಜ್ಯಗಳಿಂದಲೂ ರೈತರು ಬೀದಿಗಿಳಿದು ಮೋದಿಯ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಮಾವಣೆಗೊಂಡಿದ್ದಾರೆ.

 

 

ಕಳೆದ 15 ವರ್ಷಗಳಲ್ಲಿ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಕೃಷಿ ಸಮಸ್ಯೆಗಳ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಬೇಕು ಎಂದು ರೈತರು ಅಪೇಕ್ಷಿಸುತ್ತಿದ್ದಾರೆ.

‘ಅಖಿಲ ಭಾರತೀಯ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ’ ಹೆಸರಿನ ರೈತ ಒಕ್ಕೂಟದಡಿ ದೇಶದ ವಿವಿಧ ಭಾಗಗಳ ಸುಮಾರು 200 ರೈತ ಸಂಘಟನೆಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತ ಸಮಾವೇಶದಲ್ಲಿ ಭಾಗವಹಿಸಿವೆ. ಸುಮಾರು ಒಂದು ಲಕ್ಷ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ನೊಂದ ರೈತ ಮಹಿಳೆಯರು ಸಾಲದ ಸುಳಿಯಲ್ಲಿ ಸಿಲುಕೇ ನೇಣಿನ ಹಗ್ಗಕ್ಕೆ ಶರಣಾದ ತಮ್ಮ ಪತಿಯರ ಭಾವಚಿತ್ರ ಹಿಡಿದು ಪ್ರತಿಭಟಿಸಿದರು.

 

 

ರೈತ ಸಮಾವೇಶವನ್ನು ಬೆಂಬಲಿಸಿರುವ ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು, ವೈದ್ಯರು, ಪತ್ರಕರ್ತರು, ಛಾಯಾಗ್ರಾಹಕರು, ಚಿಂತಕರು ಹಾಗೂ ದೆಹಲಿಯ ನಾಗರಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ರೈತರ ಸಮಸ್ಯೆಗಳು ರೈತರ ಸಮಸ್ಯೆಗಳು ಮಾತ್ರವಲ್ಲ, ಅವು ಎಲ್ಲರ ಸಮಸ್ಯೆಗಳು. ಹೀಗಾಗಿ ಎಲ್ಲರೂ ಈ ಸಮಾವೇಶದಲ್ಲಿ ಭಾವಹಿಸಿ ಬೆಂಬಲಿಸಬೇಕು.

ಕರ್ನಾಟಕದಿಂದಲೂ ಸುಮಾರು 2 ಸಾವಿರ ಮಂದಿ ರೈತರು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರು ಸ್ವಾಭಿಮಾನದಿಂದ ಬದುಕುವಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕು. ಇದಕ್ಕಾಗಿ ಸರಕಾರದ ನೀತಿ ನಿರೂಪಣೆಗಳಲ್ಲಿ ರೈತನನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಸರಕಾರ ಜಾರಿಗೆ ತರಬೇಕು. ಬೆಳೆಗಳಿಗೆ ನ್ಯಾಯಯುತವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.

ಶಾಂತಿಪ್ರಿಯ ರೈತನೇ ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು, ಪ್ರಧಾನಿ ಮೋದಿ ಇದರ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಜನರ ತೆರಿಗಿಯ ಹಣವನ್ನು ಉಪಯೋಗಕ್ಕೆ ಬಾರದ ಪುತ್ಥಳಿಗಳ ನಿರ್ಮಾಣಕ್ಕೆ , ತಮ್ಮ ಶೋಕಿಗಾಗಿ ವಿದೇಶ ಪ್ರಯಾಣಗಳಿಗೆ ಬಳಸುತ್ತಾ ಮಜಾ ಮಾಡುತ್ತಿದ್ದಾರೆ.

 

Leave a Reply