ಯಡಿಯೂರಪ್ಪನಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಖಡಕ್ ಎಚ್ಚರಿಕೆ ನೀಡಿರುವ ವಿಡಿಯೋ ಈಗ ವೈರಲ್…!

ರಾಜ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತ ರೈತರ ಸಾಲ ಮನ್ನಾ, ಬಡವರ ಬಂಧು,…ಹೇಗೆ ಹಲವಾರು ಜನಪರ ಯೋಜನೆಗಳೊಂದಿಗೆ  ಯಶಸ್ವಿಯಾಗಿ ಮುನ್ನುಗುತ್ತಿದೆ. ಇದನ್ನು ಸಹಿಸಲಾಗದ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಲೇ ಇದ್ದಾರೆ.

 

 

ಮುಖ್ಯಮಂತ್ರಿಯಾಗುವ ತೀಟೆ ತೀರಿಸಿಕೊಳ್ಳಲು ಯಡಿಯೂರಪ್ಪ ಮಾಡುತ್ತಿರುವ ಕುತಂತ್ರಗಳ ಪಟ್ಟಿ ಅವರು ಮುಖ್ಯಮಂತ್ರಿಯಾದಾಗ ಮಾಡಿದ ಜನಪರ ಕೆಲಸಗಳಿಗಿಂತ ಹೆಚ್ಚೇ ಇದೆ. ಈಗ ಇದು ಅವರಿಗೆ ತಿರುಗುಬಾಣವಾಗಿದೆ. ಜನರ ಅಪೇಕ್ಷೆಯಂತೆ ಸರ್ಕಾರ ರಚಿಸಿರುವ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಪಕ್ಷವನ್ನು ರಾಜ್ಯದಲ್ಲಿ ಅಭಿವೃದ್ಧಿ ಹೆಚ್ಚಿಸಲು ಬೆಂಬಲಿಸುವ ಬದಲು, ಆಪರೇಷನ್ ಕಮಲ, ಕುಮಾರಸ್ವಾಮಿ ಅವರ ಹೆಸರಿಗೆ ಮಸಿ ಬಳಿಯಲು ನಕಲಿ ರೈತ ಮಹಿಳೆಯನ್ನು ಅವರ ವಿರುದ್ಧ ಎತ್ತಿ ಕಟ್ಟಿದ್ದು, ಮೈತ್ರಿ ಸರ್ಕಾರ ಉರಳಿಸಲು ಕೇರಳಕ್ಕೆ ಹೋಗಿ ಮಾಟ ಮಂತ್ರ ಮಾಡಿಸಿದ್ದು ಹೇಗೆ ಬೇಡದ ಚೇಷ್ಟೆಗಳನ್ನು  ಮಾಡುತ್ತಿರುವ ಯಡಿಯೂರಪ್ಪನಿಗೆ, ಈಗಾಗಲೇ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ನೇರವಾಗಿ ಕಾರಣರಾಗಿದ್ದ ಬಿ.ಎಸ್ ಯಡಿಯೂರಪ್ಪನವರನ್ನು ಪಕ್ಷದಿಂದ ಹೊರಗಟ್ಟುವ ಯೋಚನೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪನಿಗೆ ಮತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ನೀವು ಆ ಸ್ಥಾನಕ್ಕೆ ಯೋಗ್ಯರಾಗಿದ್ದರೆ ಜನರೇ ನಿಮನ್ನು ಆ ಸ್ಥಾನದಲ್ಲಿ ಕೂರಿಸುತ್ತಿದ್ದರು. ಈಗ ಮುಖ್ಯಮಂತ್ರಿಯಾಗುವ ಹಂಬಲದಿಂದ ಬೇಡದ ಕುತಂತ್ರಗಳನ್ನು ಮಾಡುವ ಬದಲು, ಪಕ್ಷದ ಪರ ಕೆಲಸ ಮಾಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

 

Leave a Reply