ಇಲ್ಲಿದೆ ಸಚಿವ ಎಸ್.ಆರ್ ಶ್ರೀನಿವಾಸ್ ಅವರ ಆರು ತಿಂಗಳ ಆಡಳಿತದ ರಿಪೋರ್ಟ್ ಕಾರ್ಡ್…!

ಸಿನಿಮಾ ತಾರೆಯರಂತೆ ವಿಜೃಂಭಣೆಯಿಂದ ಬದುಕುವ ಹಾಗು ಜನರ ಗಮನ ಸೆಳೆಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವಂತಹ ರಾಜಕಾರಣಿಗಳ ನಡುವೆ ತನ್ನ ವ್ಯಕ್ತಿತ್ವವನ್ನು ಕಾರ್ಯ ರೂಪದಲ್ಲಿ ತೋರಿಸಿ, ಒಬ್ಬ ರಾಜಕಾರಣಿ ಇಷ್ಟು ಸರಳವಾಗಿ ಬದುಕಬಹುದೇ ಎಂದು ಆಶ್ಚರ್ಯ ಪಡುವಂತೆ ಮಾಡಿದ್ದಾರೆ ಎಸ. ಆರ್ ಶ್ರೀನಿವಾಸ್. ಇವರು ಸಣ್ಣ ಕೈಗಾರಿಕಾ ಕ್ಷೇತ್ರದ ಸಚಿವರಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳುಗಳಾಗಿವೆ. ಈ ಆರು ತಿಂಗಳುಗಳಲ್ಲಿ ಅವರ ಕೊಡುಗೆ ಅಪಾರ. ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಜನರ ಕೈ ಮುಗಿದು, ಗೆದ್ದ ನಂತರ ಜನರನ್ನು ಕ್ಯಾರೇ ಅನ್ನದ ರಾಜಕಾರಣಿಗಳ ನಡುವೆ, ನುಡಿದಂತೆ ನಡೆಯುವ ನಿಷ್ಠಾವಂತ ನಿಷ್ಕಳಂಕ  ರಾಜಕಾರಣಿ, ಎಸ್. ಆರ್ ಶ್ರೀನಿವಾಸ್.  ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ಸಂಚಲನ ಮೂಡಿಸುವಂತಹ ಅಭಿವೃದ್ಧಿಗೆ ಹರಿಕಾರರಾಗಿರುವ ಎಸ್. ಆರ್ ಶ್ರೀನಿವಾಸ್ ಅವರ ಆರು ತಿಂಗಳಿನ ಸಾಧನೆಗಳು ಇಂತಿವೆ :

೧. ಹಲವಾರು ಕೆರೆಗಳಿಗೆ ನೀರು ಪೂರೈಕೆ

 

 

ಹೇಮಾವತಿ ನದಿಯ ನೀರನ್ನು ಗುಬ್ಬಿ ತಾಲೂಕಿಗೆ ಚಾಲನೆ ನೀಡಬೇಕೆಂದು ಹೋರಾಡಿ, ಸರ್ಕಾರಕ್ಕೆ ಒತ್ತಡ ಹೇರಿ, ಕೆರೆಗಳನ್ನು ತುಂಬಿಸುವಲ್ಲಿ ಯಶಸ್ವಿಯಾಗಿದ್ದ ಛಲಗಾರ ಎಸ್.ಆರ್ ಶ್ರೀನಿವಾಸ್. ಈಗ ಉಳಿದ ಮತ್ತಷ್ಟು ಕೆರೆಗಳನ್ನು ತುಂಬಿಸುವ ಕೆಲಸವನ್ನು ಬಿರುಸಾಗಿ ಪೂರ್ಣಗೊಳಿಸುತ್ತಿದ್ದಾರೆ. ಸಧ್ಯ ಕಡಗೆರೆ, ಬಿದಿರೆ ಕೆರೆ, ವರ್ಜನ ಕೆರೆ, ನಿಟ್ಟೂರು ಕೆರೆ ಹಾಗು ವೆಲ್ವಥ ಕೆರೆ ಹೀಗೆ ಹಲವಾರು ಕೆರೆಗಳು ತುಂಬಿವೆ. ಇನ್ನೂ ಕಡಬ ಕೆರೆ, ಗುಬ್ಬಿ ಕೆರೆ, ಪಟ್ಟಣದ ಕೆರೆ, ಅಮ್ಮನ ಘಟ್ಟ, ತಿಪಟೂರು ಕೆರೆ ಹೀಗೆ ಮತ್ತಷ್ಟು ಕೆರೆಗಳನ್ನು ತುಂಬಿಸುವ ಕೆಲಸ ಸುಮಾರು ಶೇ. 25 ರಷ್ಟು ಸಂಪೂರ್ಣವಾಗಿದ್ದು, ವೇಗದಲ್ಲಿ ಕೆಲಸ ಸಾಗುತ್ತಿದೆ.

೨. ಕಾಂಕ್ರೀಟ್ ರಸ್ತೆ; ಲಕ್ಷಾಂತರ ಬಾಕ್ಸ್ ಚರಂಡಿ 

ಗುಬ್ಬಿ ತಾಲೂಕಿನ ನಿಟ್ಟೂರು ಮಸೀದಿಯ ಹಿಂಭಾಗದ ರಸ್ತೆ ಮತ್ತು A.K ಕಾಲೋನಿಗೆ 25 ಲಕ್ಷ ಬಾಕ್ಸ್ ಚರಂಡಿ ಹಾಗು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ.

 

 

‘ ವಾಸಣ್ಣ ಅವರು ಅಧಿಕಾರಕ್ಕೆ ಬಂದಮೇಲೆ ಗುಬ್ಬಿ ತಾಲೂಕು ಅಭಿವೃದ್ಧಿ ಆಗುತ್ತಿದೆ. ಹಿಂದೆ ನಮನ್ನು ಕೇಳುವವರು ದಿಕ್ಕರಲಿಲ್ಲ. ಕುಡಿಯುವ ನೀರಿಗೆ ಬಾರಿ ಸಮಸ್ಯೆ ಇತ್ತು. ನಡೆದುಕೊಂಡು ಹೋಗುಲು ಕಷ್ಟವಾಗುವಂತ ಪರಿಸ್ಥಿತಿಯಲ್ಲಿ ರಸ್ತೆಗಳಿದ್ದವು. ಆದರೆ ಈಗ ನಾವು ಹೇಳಿತ್ತಿರುವುದು ನಿಜವೇ ಎಂದು ಅನುಮಾನ ಪಡುವ ಮಟ್ಟಿಗೆ ಅಭಿವೃದ್ಧಿಗೆ ಹರಿಕಾರರಾಗಿದ್ದರೆ ‘ ಎಂದು ಗುಬ್ಬಿ ತಾಲೂಕಿನ  ‘ಸುದ್ದಿ ಸಮಾಚಾರ’ ವರದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಗುಬ್ಬಿ ತಾಲೂಕಿನ ನಿವಾಸಿಗಳು ಹೇಳಿದರು.

೩. ಕೊಳವೆ ಬಾವಿಗಳ ಫಲಾನುಭಾವಿಗಳಿಗೆ ಪಂಪ್ ಹಾಗು ಇತರ ಸಾಮಗ್ರಿಗಳು

ಗುಬ್ಬಿಯ ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ಗಂಗಾ ಕಲ್ಯಾಣ ವಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಯಡಿ 12 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಫಲಾನುಭಾವಿಗಳಿಗೆ ಪಂಪ್ ಹಾಗು ಇತರ ಸಾಮಗ್ರಿಗಳ ವಿತರಣೆ ಮಾಡಲಾಗಿದೆ.

೪. ಖಾದಿ ಕಸುಬುದಾರರ ಸಾಲ ಮನ್ನಾ

ಪರಿಶುದ್ಧವಾದ ನೂಲು ಖಾದಿಯ ಉತ್ಪನ್ನ ಕ್ರಮೇಣ ನಶಿಸಿ ಹೋಗುತ್ತಿದೆ. ಇದರ ಬಗ್ಗೆ ಗಮನ ಹರಿಸಿರುವ ಎಸ್. ಆರ್ ಶ್ರೀನಿವಾಸ್ ಅವರು, ಖಾದಿ  ಕಸುಬನ್ನು ಬಿಡದಿರಲಿ ಎಂದು ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿಯಿಂದ ಸಾಲ ಪಡೆದ ಬಿ.ಪಿ.ಎಲ್ ಕಸುಬುದಾರರ ಸಾಲ ಮನ್ನಾ.

೫.  ತಮಿಳು ನಾಡು ಹಾಗು ಕೇರಳ ಕಾರ್ಖಾನೆಗಳಿಗೆ ಭೇಟಿ 

 

 

ತಮಿಳು ನಾಡು ಹಾಗು ಕೇರಳ ರಾಜ್ಯದ ಸಣ್ಣ ಕೈಗಾರಿಕಾ ಕಾರ್ಖಾನೆಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ವೈಖರಿಯನ್ನು ಗಮನಿಸಿ, ಅದೇ ರೀತಿಯಲ್ಲಿ ಕರ್ನಾಟಕದ ಸಣ್ಣ ಕೈಗಾರಿಕಾ ಕ್ಷೇತ್ರಗಳನ್ನು ಉನ್ನತ ಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿದ್ದಾರೆ.

೬. ದುಸ್ಥಿತಿಯಲ್ಲಿದ್ದ ಸಣ್ಣ ಕೈಗಾರಿಕಾ ಕಾರ್ಖಾನೆಗಳ ದುರಸ್ತಿ

ಬಳ್ಳಾರಿಯ ಸಣ್ಣ ಕೈಗಾರಿಕಾ ಕಾರ್ಖಾನೆಗಳು ಕೇವಲ ನಾಮಕವಾಸ್ತವದಾಗಿತ್ತು. ಅಲ್ಲಿ ಕೆಲಸ ನಡೆಯುತ್ತಿರಲಿಲ್ಲ. ಎಸ್ .ಆರ್ ಶ್ರೀನಿವಾಸ್ ಅವರು ಕಾರ್ಖಾನೆಗಳು ದುರಸ್ತಿ ಮಾಡಿಸಿ. ಅದರಿಂದ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

೭. ಹಲವಾರು ಸಣ್ಣ ಕೈಗಾರಿಕಾ ಕಾರ್ಖಾನೆಗಳ ಸ್ಥಾಪನೆ

 

 

ಹಲವಾರು ಕೈಗಾರಿಕಾ ಕಾರ್ಖಾನೆಗಳ ಸ್ಥಾಪನೆಯ ಹರಿಕಾರರಾಗಿ, ನುರಿತ ಯುವ ನಿರುದ್ಯೋಗಿಗಳಿಗೆ ಹಾಗು ಹೆಂಗಸರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ.

೮.  ದಾವಣಗೆರೆಯಲ್ಲಿ ಮರಳು ಕಳ್ಳರ ದಂಧೆಗೆ ಬ್ರೇಕ್ 

 

 

ಬಿಜೆಪಿ ಶಾಸಕ ರೇಣುಕಾಚಾರ್ಯನ ಅಕ್ರಮ ಮರಳು ಸಾಗಾಣಿಕೆ ದಂಧೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ರೇಣುಕಾಚಾರ್ಯ ತನ್ನ ಸ್ವಾರ್ಥಕ್ಕಾಗಿ ಮುಗ್ದ ಜನರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸಿದ. ಆದರೆ ಸತ್ಯಕ್ಕೆ ಜಯ ದೊರಕಿದೆ. ರೇಣುಕಾಚಾರ್ಯ ತನ್ನ ಬಾಲ ಮುದುರಿಕೊಂಡಿದ್ದಾನೆ.

೯. ಉದ್ಯಮಗಳ ಪುನಶ್ಚೇತನಕ್ಕೆ ಸಹಾಯಧನ ಘೋಷಣೆ 

 

 

ಸಣ್ಣ ಕೈಗಾರಿಕೆ ಸ್ಥಾಪನೆ ಮತ್ತು ಜಿಲ್ಲೆಯಲ್ಲಿ ಈಗಾಗಲೇ ಇರುವ ಉದ್ಯಮಗಳ ಪುನಶ್ಚೇತನಕ್ಕೆ ಪ್ರತಿ ವರ್ಷ ₹ 6 ಕೋಟಿ ಸಹಾಯಧನ ನೀಡುವುದು ಆಗಿ ಘೋಷಿಸಿದ್ದಾರೆ. ಹಾಗು ಚಿಗುರುತ್ತಿರುವ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ, ಅವರಿಗೆ ಸಾಲ ಕೊಡಿಸುವ ಆಶ್ವಾಸನೆ ನೀಡಿದ್ದಾರೆ.

 

 

 

Leave a Reply