‘ ನಿಮ್ಮ ನೀಚ ಪಕ್ಷದಲ್ಲಿ ಇದ್ದರೆ ನನ್ನ ಘನತೆಗೇ ದಕ್ಕೆ ಬರುತ್ತದೆ ‘ ಎಂದು ಚೀಮಾರಿ ಹಾಕಿ ಬಿಜೆಪಿ ತೊರೆದ ಸಂಸದೆ ಯಾರು ಗೊತ್ತಾ…?

ದೀಪ ಆರುವ ಮುನ್ನ ಉಜ್ವಲವಾಗುವ ಹಾಗೆ, ಒಮ್ಮೆ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಈಗ ಮಕಾಡೆ ಮಲಗುತ್ತದೆ. ಒಬ್ಬರಾದ ಮೇಲೆ ಒಬ್ಬರಂತೆ ನಿಮ್ಮದು ಡೋಂಗಿ ಪಕ್ಷ ಎಂದು ಹೇಳಿ ಚೀಮಾರಿ ಹಾಕಿ ಪಕ್ಷ ತೊರೆಯುತ್ತಿದ್ದಾರೆ. ಒಂದು ಕಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ ಮೂಲೆ ಮೂಲೆಯಿಂದಲೂ ದಂಗೆ ಎದ್ದಿರುವ ರೈತರು. ಅವರ ಬಗ್ಗೆ ವಿಚಾರಿಸುವ ಮಾನವ್ಯತೆಯು ಇಲ್ಲದ ಪ್ರಧಾನಿ ಮೋದಿಯ ಬಗ್ಗೆ ಎಲ್ಲೆಡೆ ತೀವ್ರ ಅಸಮಾಧಾನ ತುಂಬಿದೆ.

‘ನಿಮ್ಮ ಪಕ್ಷದ್ದು ಕೇವಲ ಡಾಂಭಿಕ ಹಿಂದುತ್ವ’ , ‘ ಈ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ‘ ಹೀಗೆ ಚೀಮಾರಿ ಹಾಕಿ ಹಲವಾರು ಸಂಸದರು, ಕಾರ್ಯಕರ್ತರು  ಪಕ್ಷ ತೊರೆದಿದ್ದಾರೆ. ದೂರದ ಬೆಟ್ಟ ನುಣ್ಣಗೆ ಎಂಬ ಹಾಗೆ, ಬಹಳಷ್ಟು ಆಸೆ ಆಕಾಂಶೆಗಳನ್ನೂ ಇಟ್ಟಿಕೊಂಡು ಪಕ್ಷ ಸೇರುವ ಸದಸ್ಯರು ನಂತರ ನಿಜ ಬಣ್ಣ ಅರಿತು ಪಕ್ಷವನ್ನು ತೊರೆಯುತ್ತಿದ್ದಾರೆ.

 

 

ಈಗ ಮತ್ತೊಬ್ಬ ಬಿಜೆಪಿ ಸಂಸದೆ ಬಿಜೆಪಿಗೆ ಚೀಮಾರಿ ಹಾಕಿ ಪಕ್ಷ ತೊರೆದಿದ್ದಾರೆ. ಬಹರೈಚ್ ಕ್ಷೇತ್ರದ ಸಂಸದೆಯಾಗಿದ್ದ ಸಾವಿತ್ರಿಬಾಯಿ ಪುಲೆ ‘ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರದಲ್ಲಿ ಪಿತೂರಿ ನಡೆಸುತ್ತಿದೆ. ಇಂತಹ ಪಕ್ಷದಲ್ಲಿ ಇದ್ದರೆ ನನ್ನ ಘನತೆಗೆ ದಕ್ಕೆ ಬರುತ್ತದೆ ‘ ಎಂದು ಹೇಳಿ ತಮ್ಮ ಪದವಿಗೆ ರಾಜೀನಾಮೆ ನೀಡಿದ್ದಾರೆ.

ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿವ ತವಕದಲ್ಲಿರುವ ಬಿಜೆಪಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ.

Leave a Reply