ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ…! ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ…!

ಸಮಾಜದ ಹುಳುಕನ್ನು ಗುಣಪಡಿಸುವ ಏಕೈಕ ಮದ್ದು ಶಿಕ್ಷಣ. ಹಲವಾರು ಪೋಷಕರಿಗೆ ತಮ್ಮ ಆರ್ಥಿಕ ಪರಿಸ್ಥಿತಿಯಿಂದ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗುವುದಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಅತ್ಯವಶ್ಯಕ ಹಾಗು ಮೂಲಭೂತ ಹಕ್ಕು. ಅದರಲ್ಲೂ ಹೆಣ್ಣಿಗೆ ಶಿಕ್ಷಣ  ನೀಡಿದರೆ ಶಾಲೆಯೊಂದು ತೆರೆದಂತೆ ಎಂಬ ಮಾತೆ ಇದೆ. ಇದನ್ನು ಅರಿತಿರುವ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಈಗ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ..!

ಪ್ರಸ್ತುತ ಸಾಲಿನಿಂದಲೇ ರಾಜ್ಯದ ಎಲ್ಲಾ ಸರ್ಕಾರಿ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಸರ್ಕಾರವೇ ಬರಿಸಲಿದೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

 

 

ರಾಜ್ಯದ 3.17 ಲಕ್ಷ ವಿದ್ಯಾರ್ಥಿನಿಯರಿಗೂ ಇದರ ಲಾಭ…!

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 3.17 ಲಕ್ಷ ವಿದ್ಯಾರ್ಥಿನಿಯರೂ ಸರ್ಕಾರ ಕಲ್ಪಿಸಿಕೊಡುತ್ತಿರುವ ಈ ಸೌಲಭ್ಯದ ಫಲಾನುಭವಿಗಳಾಗಿರುತ್ತಾರೆ.

 

Leave a Reply