ನಾನು ಅವರು ಕರೆದಾಗಲೆಲ್ಲ ಹೋಗಿದ್ದರೆ ನನಗೂ ಸದಸ್ಯ ಸ್ಥಾನ ಸಿಗುತಿತ್ತು – ಬಿಜೆಪಿ ನಾಯಕರ ಬಂಡವಾಳ ಬಯಲು ಮಾಡಿದ ನೇತ್ರ ಪಲ್ಲವಿ…!

ಸದಾ ತಮ್ಮ ಕಾಮಲೀಲೆಗಳಿಂದ ಸದ್ದು ಮಾಡುವ ಬಿಜೆಪಿ ಪಕ್ಷದ ನಾಯಕರು, ಈಗ ಮತ್ತೆ ಅದೇ ವಿಷಯದಲ್ಲಿ ಸಿಕ್ಕಿಬಿದಿದ್ದರೆ.

ಯಲಹಂಕ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 3ರ ಅಟ್ಟೂರು ವಾರ್ಡ್ ಬಿಜೆಪಿ ಸದಸ್ಯೆ ನೇತ್ರ ಪಲ್ಲವಿ ಅವರು ಸ್ಥಾಯಿ ಸಮ್ಮಿತಿ ಸದ್ಯಸತ್ವಕ್ಕೆ ಸೂಕ್ತ ಅಭ್ಯರ್ಥಿಯೆಂದು ಹೇಳಲಾಗುತ್ತಿತ್ತು. ಆದರೆ ನೇತ್ರ ಪಲ್ಲವಿ ಅವರಿಗೆ ಕಾರಣಾಂತರಗಳಿಂದ ಸದಸ್ಯತ್ವ ಕೈ ತಪ್ಪಿತ್ತು.

ಪಾಲಿಕೆ ಆವರಣದಲ್ಲಿ ಕಣ್ಣೀರ ಧಾರೆ…!

ಇದರಿಂದ ತೀವ್ರ ಮನನೊಂದ ನೇತ್ರ ಅವರು ಪಾಲಿಕೆ ಆವರಣದಲ್ಲಿ ಅಳುತ್ತಾ ನಿಂತಿದ್ದರು. ಈ ಸಂದರ್ಭದಲ್ಲಿ, ಮಾಧ್ಯಮದವರು ಏಕೆ ಅಳುತ್ತಿದ್ದೀರಾ ಎಂದು ಕೇಳಿದಾಗ, ತಮಗೆ ಸದಸ್ಯತ್ವ ಏಕೆ ಸಿಗಲಿಲ್ಲ ಎಂಬ ಅಸಲಿ ಸತ್ಯವನ್ನು ಬಿಚ್ಚಿಟ್ಟರು.

ನಾನು ಅವರು ಕರೆದಾಗಲೆಲ್ಲ ಹೋಗುವುದಿಲ್ಲ….!

ಮಾಧ್ಯಮಗಳ ಮುಂದೆ ತಮ್ಮ ದುಃಖ ತೋಡಿಕೊಂಡ ನೇತ್ರ ಪಲ್ಲವಿ, ಬಿಜೆಪಿ ಪಕ್ಷದ ಹುಳುಕನ್ನು ಬಹಿರಂಗ ಪಡಿಸಿದರು. ‘ ನಾನು ಅಂದವಾಗಿ ಇದ್ದೇನೆ. ಕೆಲವರು ಕರೆದಾಗ ನಾನು ಹೋಗುವುದಿಲ್ಲ. ಇದೆ ಕಾರಣದಿಂದ ನನಗೆ ಸದಸ್ಯತ್ವ ಕೈತಪ್ಪಿತು ‘ ಎಂದು ಬಿಜೆಪಿ ಪಕ್ಷದಲ್ಲಿ ಮಹಿಳೆಯರು ಒಳಗಾಗುತ್ತಿರುವ ಶೋಷಣೆಯ ಬಗ್ಗೆ ಪರೋಕ್ಷವಾಗಿ ಮಾಹಿತಿ ನೀಡಿದರು.

 

 

Leave a Reply