ಜನ್ಮದಾತೆಗೆ ಪೊರಕೆ ಏಟು…! ಚಂಡಾಲ ಮಗನ ವಿಶ್ಯಕ್ ಬಂದ್ರೆ ‘ಬೀಳ್ತವ್ ‘ಅಂತೇ..!

ತಾಯಿಗಿಂತ ಮಿಗಿಲಾದ ದೇವರಿಲ್ಲ. ಒಂಬತ್ತು ತಿಂಗಳು ಹೊತ್ತು ಹೆತ್ತು ಬೆಳೆಸಿದ ತಾಯಿಯ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಅಂತದ್ದರಲ್ಲಿ ಇಲ್ಲೊಬ್ಬ ಚಂಡಾಲ ಮಗ ತನ್ನ ಹೆತ್ತ ತಾಯಿಗೆ ಪೊರಕೆಯಲ್ಲಿ ಹೊಡೆದು ಚಿತ್ರಹಿಂಸೆ ನೀಡಿದ್ದಾನೆ.

ಮಗ ತಪ್ಪು ದಾರಿಯಲ್ಲಿ ಹೋಗುವುದನ್ನು ಯಾವ ತಾಯಿಯು ಸಹಿಸುವುದಿಲ್ಲ. ತನ್ನ ಮಗ ತಪ್ಪು ದಾರಿ ಹಿಡಿಯುತ್ತಿದ್ದನ್ನು ಸಹಿಸದ ತಾಯಿ, ತಾನು ಮಾಡುತ್ತಿರುವುದು ತಪ್ಪು ಎಂದು ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ನೀಚ ಮಗ ತಾಯಿಗೆ ಪೊರಕೆಯಲ್ಲಿ ಹೊಡೆದು ಅವಾಜ್ ಹಾಕಿದ್ದಾನೆ. 

ನನ್ನ ವಿಷಯಕ್ಕೆ ಯಾಕೆ ಬರ್ತೀಯ, ಬಂದರೆ ಮತ್ತೆ ಹೊಡಿತೀನಿ. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು, ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಗ ಸಿಗರೇಟ್ ಸೇದುವುದು, ಲವ್ ಮಾಡುವ ವಿಷಯದ ಬಗ್ಗೆ ಕೇಳಿದಕ್ಕೆ ಅಮ್ಮನಿಗೆ ಥಳಿಸಿದ್ದಾನೆ. ಇವನ ಕಾಟ ತಡಿಯಲಾರದ ಸಹೋದರಿ ಇದನ್ನು ವಿಡಿಯೋ ಮಾಡಿಕೊಂಡು, ಪೊಲೀಸರಿಗೆ ದೂರು ನೀಡಿದ್ದಾರೆ. 

Leave a Reply