ಪ್ರತಾಪ್ ಸಿಂಹನ ಪೊಳ್ಳು ನುಡಿಯ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಕುಮಾರಸ್ವಾಮಿ..!

ಕೊಡಗು ಸಂತ್ರಸ್ತರ ಮನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ, ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗು ಪ್ರತಾಪ್ ಸಿಂಹ ಅವರ ಮಧ್ಯೆ ನೆಡೆದ ಮಾತಿನ ಚಕಮಕಿ ಬಗ್ಗೆ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. 

ನನಗೆ ಪ್ರತಾಪ್ ಸಿಂಹ ಅವರು ಮಾತನಾಡಿದ್ದು ಬೇಸರವಾಗಲಿಲ್ಲ, ಆದರೆ ಸತ್ಯವನ್ನು ತಿರುಚಿ ಹೇಳುವುದು ಸರಿಯಲ್ಲ ಎಂದು ಹೇಳಿದರು. 

ಪ್ರತಾಪ್ ಸಿಂಹ ಹೇಳಿದ್ದೇನು : 

ಪ್ರತಾಪ್ ಸಿಂಹ ಅವರು ಇದು ರಾಜ್ಯ ಸರ್ಕಾರದ ಸಾಧನೆಯಲ್ಲ. ಇದಕ್ಕೆ ಕೇಂದ್ರ ಸರ್ಕಾರ 546 ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.  

ಕೈ ಸನ್ನೆಯಲ್ಲೇ ಪ್ರತಾಪ್ ಸಿಂಹನ ಬಾಯಿ ಮುಚ್ಚಿಸಿದ ಸಿಎಂ: 

ಪ್ರತಾಪ್ ಸಿಂಹ ತನ್ನ ಸುಳ್ಳುಗಳಿಂದ ಜನರ ದಿಕ್ಕು ತಪ್ಪಿಸುತ್ತಿದ್ದನು ನೋಡಿ ಕುಮಾರಸ್ವಾಮಿ ಅವರು ಕೆಂಡಮಂಡಲರಾದರು. ಸಾಕು ನಿಲ್ಲಿಸಿ ಏನೇನೋ ಹೇಳಿ ಜನರ ದಿಕ್ಕು ತಪ್ಪಿಸಬೇಡಿ ಎಂದು ಕೈ ಸನ್ನೆ ಮಾಡಿ ಪ್ರತಾಪ್ ಸಿಂಹನ ಬಾಯಿಗೆ ಬ್ರೇಕ್ ಹಾಕಿದರು. 

 ಸತ್ಯವನ್ನು ತಿರುಚುವುದು ಸರಿಯಲ್ಲ :

ಇದರ ನಂತರ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ‘ ಪ್ರತಾಪ್ ಸಿಂಹ ಅವರು ಮತನಾಡಿದ್ದು ನನಗೆ ಬೇಸರವಾಗಿಲ್ಲ. ಆದರೆ ಸತ್ಯವನ್ನು ತಿರುಚುವುದು ಸರಿಯಲ್ಲ. ಕೇಂದ್ರದಿಂದ ಬಂದಿರುವ 546 ಕೋಟಿ ಅನುದಾನ ಕೊಡಗಿಗೆ ಮಾತ್ರವಲ್ಲ ಅದು 8 ಜಿಲ್ಲೆಗಳ ನೆರೆ ಅವಘಡಕ್ಕೆ ಬಿಡುಗಡೆ ಆಗಿರುವ ಅನುದಾನ ಎಂದು ಮಾಹಿತಿ ನೀಡಿದರು. ನೆರೆ ಹಾವಳಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಇದೇ ಸಮಯದಲ್ಲಿ ಹೇಳಿದ್ದಾರೆ.

ಸಂತ್ರಸ್ತರಿಗಾಗಿ ನಿಯಮಗಳನ್ನು ಬದಿಗೆ ಸರಿಸಿದ್ದೇವೆ’

ಕೊಡಗಿನ ವಿಷಯದಲ್ಲಿ ರಾಜ್ಯ ಸರ್ಕಾರವು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳನ್ನು ಬದಿಗೆ ಸರಿಸಿ ಎಲ್ಲ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ದೊರಕುವಂತೆ ಕ್ರಮಕೈಗೊಳ್ಳಲಾಗುತ್ತಿದೆ. ಕೊಡಗಿಗಾಗಿ ರಾಜ್ಯ ಸರ್ಕಾರಿ ನೌಕರರು 103 ಕೋಟಿ, ಸಾರ್ವಜನಿಕರು ಮತ್ತು ಇತರ ಅಧೀನ ಸಂಸ್ಥೆಗಳು 180 ಕೋಟಿ ನೀಡಿದ್ದಾರೆ ಎಲ್ಲ ಹಣವನ್ನು ಎಲ್ಲೂ ಪೋಲಾಗದಂತೆ ಖರ್ಚು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

 10.5 ಲಕ್ಷದಲ್ಲಿ ಮನೆ

ಮಳೆ ಹಾನಿಯಲ್ಲಿ ಮನೆ ಕಳೆದುಕೊಂಡವರಿಗೆ 10.5 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿಗಳ ಮನೆ ನಿರ್ಮಿಸಿಕೊಡಲಾಗುತ್ತದೆ. ಅದಕ್ಕೂ ಹೆಚ್ಚಿನ ವೆಚ್ಚವಾಗುವುದಾದರೆ ಅದನ್ನು ಫಲಾನುಭವಿಗಳೇ ಭರಿಸಬೇಕು. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಶೆಡ್ಡುಗಳನ್ನು ನಿರ್ಮಿಸಲು ಸುಮಾರು 1 ಲಕ್ಷ ರೂ. ವೆಚ್ಚವಾಗುತ್ತದೆ. ಅದರ ಬದಲಾಗಿ ಪ್ರತಿ ತಿಂಗಳು 10 ಸಾವಿರ ರೂ. ಮನೆ ಬಾಡಿಗೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು

Leave a Reply