ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ಯೆಡ್ಡಿ, ಶೋಭಾ ಕರಂದ್ಲಾಜೆ…! ಬೆಳಗಾವಿಯಲ್ಲಿ ಬಾರಿ ಮುಖಭಂಗ ಎದುರಿಸಿದ ಬಿಜೆಪಿ ನಾಯಕರು…!

ರಾಜ್ಯ ಸರ್ಕಾರ ರೈತರಿಗೆ ಕೊಟ್ಟ ಮಾತಿನಂತೆ ನೆಡೆದುಕೊಂಡಿಲ್ಲ ಎಂದು ಬೆಳಗಾವಿಯಲ್ಲಿ ರೈತರ ಸಮಾವೇಶ ನಡೆಸಿ ಮೈತ್ರಿ ಪಕ್ಷದ ವಿರುದ್ಧ ರೈತರನ್ನು ದಂಗೆ ಎಬ್ಬಿಸುವ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. 

ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಋಣಮುಕ್ತರಾಗಿರುವ ರಾಜ್ಯದ ರೈತರು, ಬಿಜೆಪಿಗೆ ಸಾಥ್ ನೀಡಲಿಲ್ಲ. ಸುಮಾರು ಒಂದು ಲಕ್ಷ ರೈತರು ಬರಲಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ಊಹಿಸಿದ್ದರು. ಆದರೆ ಅಲ್ಲಿ ಸೇರಿದ್ದು ಕೇವಲ 10 ಸಾವಿರ ರೈತರಿಗಿಂತಲೂ ಕಮ್ಮಿ.

ಇದರಿಂದ ಬಿಜೆಪಿ ಪಕ್ಷದ ನಾಯಕರಾದ ಬಿಎಸ್ ಯಡಿಯೂರಪ್ಪ ಹಾಗು ಶೋಭಾ ಕರಂದ್ಲಾಜೆ ಅವರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವಂತೆ ಆಗಿ, ತೀವ್ರ ಮುಖಬಂಗಾ ಅನುಭವಿಸಿದರು.   

One thought on “ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ಯೆಡ್ಡಿ, ಶೋಭಾ ಕರಂದ್ಲಾಜೆ…! ಬೆಳಗಾವಿಯಲ್ಲಿ ಬಾರಿ ಮುಖಭಂಗ ಎದುರಿಸಿದ ಬಿಜೆಪಿ ನಾಯಕರು…!

  1. CHETHAN KUMAR M says:

    Farmers take action with BJP

Leave a Reply