ಬಿಜೆಪಿಯ ಸೋಲು ಅಚ್ಚರಿಯೇ…?! ಖಂಡಿತ ಇಲ್ಲ…! ಇಲ್ಲಿದೆ ಕಾರಣಗಳು..!

ಹೆಂಡತಿಗೆ ಒಂದು ಸೀರೆ, ಗಂಡನಿಗೆ ಸಾರಾಯಿ ಪ್ಯಾಕೆಟ್ ನೀಡಿ ಒಂದು ಕುಟುಂಬದವರ ಮತ ಗಳಿಸುವ ಕಾಲ ಮುಗಿದಿದೆ. ಭಾರತದ ಸಾಕ್ಷರತೆ ಹೆಚ್ಚುತ್ತಿದಂತೆ ತರ್ಕಬದ್ಧವಾಗಿ ಯೋಚಿಸುವ ಜನರು ಹೆಚ್ಚುತ್ತಿದ್ದಾರೆ. ಯಾರು ನಮ್ಮ ಪ್ರತಿನಿಧಿಯಾಗಲು ಯೋಗ್ಯರು ಎಂದು ತಿಳಿಯದಷ್ಟು ಮುಗ್ದತನ ಜನರಲ್ಲಿ ಮರೆಯಾಗುತ್ತಿದೆ. ಹೀಗಾಗಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಸೋಲು ಅಚ್ಚರಿಯೇನಲ್ಲ.

ಅಚ್ಛೆ ದಿನ್ ಹೆಸರಲ್ಲಿ, ಜನರನ್ನು ಸೆಳೆಯುವ ಉದ್ದೇಶದಿಂದ ಮಕ್ಕಳಿಗೆ ಚಂದಮಾಮ ತೋರಿಸುವಂತೆ, ಪೊಳ್ಳು ಆಶ್ವಾಸನೆಗಳನ್ನು ನೀಡಿ, ನೋಟು ರದ್ದಿನಂತ ಅಪಕ್ವ ನಿರ್ಧಾರಗಳನ್ನು ತೆಗೆದುಕೊಂಡು ಜನರನ್ನು ಸಂಕಷ್ಟಕ್ಕೆ ಸಿಕ್ಕಿಸಿ , ದೈನಿಂದಿನ ಸಾಮಗ್ರಿಗಳು ಹಾಗು ಅನಿಲ ಮತ್ತು ತೈಲದ ಬೆಲೆಯನ್ನು ಮುಗಿಲು ಮುಟ್ಟಿಸಿ, ಜನರ ತೆರಿಗೆ ಹಣವನ್ನು ಅನವಶ್ಯಕ ಪ್ರತಿಮೆಗಳಿಗೆ ದುಂದುವೆಚ್ಚ ಮಾಡಿ, ಹುಚ್ಚನ ಮನೆಯಲ್ಲಿ ಉಂಡವನೇ ಜಾಣ ಎಂಬುವಂತೆ, ಜನರು ನನ್ನನ್ನು ನಂಬಿದ್ದಾರೆ ಎನ್ನುವ ಅತಿಕ್ರಮಣದಿಂದ ಅವರ ತೆರಿಗೆ ಹಣದಲ್ಲಿ ವಿದೇಶ ಪ್ರವಾಸಗಳನ್ನು ಮಾಡುತ್ತ ಮಜಾ ಉಡಾಯಿಸಿ, 2ಜಿ ಸ್ಕ್ಯಾಮ್ ಹಾಗು ರಫೆಲ್ ಡೀಲ್ ನಂತಹ ಹಗರಣಗಳಲ್ಲಿ ಪಾಲ್ಗೊಂಡ ಮೋದಿ ಅವರಿಗೆ ಈ ಪಂಚ ರಾಜ್ಯ ಚುನಾವಣೆಯಲ್ಲಿ ಜನರು ತಕ್ಕ ಪಾಠವನ್ನು ಕಳಿಸಿದ್ದಾರೆ.

Leave a Reply