ಡಾ. ಅಂಬರೀಷ್ ಅವರನ್ನು ಕಡೆಗೆಣಿಸಿದ ಲೋಕಸಭೆ…! ಗುಡುಗಿದ ಗೌಡರು…!

ಖ್ಯಾತ ಚಿತ್ರನಟ, ಮಾಜಿ ಸಚಿವ ಹಾಗು ಮಾಜಿ ಸಂಸದ ಡಾ. ಅಂಬರೀಷ್ ಅವರು ದೈವಾಧೀನರಾದಾಗ ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ  ರಾಜ್ಯ ಸರ್ಕಾರ ಸರ್ವಸೌಕರ್ಯದಿಂದ  ಅಚ್ಚುಕಟ್ಟಾಗಿ ಅವರ ಅಂತಿಮ ಸಂಸ್ಕಾರವನ್ನು ನಡೆಸಿಕೊಟ್ಟಿತು. ಆದರೆ ಇಂತ ದಿಗ್ಗಜ್ಜ, ಕನ್ನಡದ ಹೆಮ್ಮೆಯ ಪುತ್ರನಾಗಿ, ಸಂಸದನಾಗಿ ದೇಶದ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸಿದ ಅಂಬರೀಷ್ ಅವರಿಗೆ ಲೋಕಸಭೆಯಲ್ಲಿ  ಕನಿಷ್ಠ ಗೌರವವನ್ನೂ ಸೂಚಿಸಿಲ್ಲ. 

2007ರಲ್ಲಿ ಕಾವೇರಿ ಹೋರಾಟವನ್ನು ಬೆಂಬಲಿಸಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ರಾಜೀನಾಮೆಯನ್ನೇ  ಸಲ್ಲಿಸಿದ ಮಂಡ್ಯದ ಗಂಡು ಅಂಬರೀಷ್ ಅವರು. ಆದರೆ ಇವರಿಗೆ ಎರಡು ದಿನಗಳ ಹಿಂದೆ ಆರಂಭಗೊಂಡ ಸಂಸತ್ತಿನ ಚಳಿಗಾಲ ಅಧಿವೇಶನೆಯಲ್ಲಿ ಅಂಬರೀಷ್ ಅವರಿಗೆ ಸಂತಾಪ ಸೂಚಿಸಿಲ್ಲ. 

ಮೊನ್ನೆಯಿಂದ(ಸೋಮವಾರ) ಆರಂಭಗೊಂಡ ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವಾದ ನಿನ್ನೆ ಅಗಲಿದ ಗಣ್ಯರಿಗೆ ಲೋಕಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಆದರೆ ಅಂಬರೀಶ್ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರ ಗಮನಕ್ಕೆ ನಿನ್ನೆಯೇ ತಂದಿದ್ದಾರೆ.

ಸದನದಲ್ಲಿ ಮಾಜಿ ಸಂಸದರಿಗೆ ಸಂತಾಪ ಸೂಚಿಸುವ ಪಟ್ಟಿಯಲ್ಲಿ ನಾಳೆ ಅಂಬರೀಶ್ ಹೆಸರು ಸೇರಿಸುವುದಾಗಿ ಗೌಡರಿಗೆ ಸ್ಪೀಕರ್ ಭರವಸೆ ನೀಡಿದ್ದರು.
ಆದರೆ ಇಂದು ಎನ್.ಡಿ. ತಿವಾರಿ, ಮದನ್‍ಲಾಲ್ ಖುರಾನಾ, ಸಿ.ಕೆ. ಜಾಫರ್ ಷರೀಫ್, ಗುರುದಾಸ್ ಕಾಮತ್ ಸೇರಿದಂತೆ 11 ಮಾಜಿ ಸಂಸದರಿಗೆ ಸಂತಾಪ ಸಲ್ಲಿಸಲಾಯಿತು. ಆದರೆ ಇಂದೂ ಕೂಡ ಈ ಪಟ್ಟಿಯಲ್ಲಿ ಅಂಬರೀಶ್ ಹೆಸರು ಬಿಟ್ಟು ಹೋಯಿತು. ಸದನದಲ್ಲಿ ಅಂಬರೀಶ್ ಅವರಿಗೆ ಸಂತಾಪ ಸೂಚಿಸದ ಕಾರಣ ದೇವೇಗೌಡರು ಅಸಮಾಧಾನಗೊಂಡಿದ್ದಾರೆ.

Leave a Reply